ಕೇಂದ್ರ ಸರ್ಕಾರ ಬೆಂಬಲಿತ ಈ ಯೋಜನೆ ಮೂಲಕ ಪ್ರತಿ ತಿಂಗಳು ಪಡೆಯಿರಿ 9,000 ರೂ ಆದಾಯ!
ಕೇವಲ 1,000 ರೂಪಾಯಿಂದ ಆರಂಭ. ಆದರೆ ಪ್ರತಿ ತಿಂಗಳು 9,000 ರೂಪಾಯಿ ಆದಾಯ. ಭವಿಷ್ಯದಲ್ಲಿ ಸುರಕ್ಷಿತ ಆದಾಯ ಮೂಲಕ್ಕೆ ಕೇಂದ್ರ ಸರ್ಕಾರ ಬೆಂಬಲಿತ ಈ ಯೋಜನೆ ಅತ್ಯಂತ ಸೂಕ್ತವಾಗಿದೆ.
ಬೆಂಗಳೂರು(ಸೆ.08) ವೃತ್ತಿ, ಉದ್ಯೋಗ, ಉದ್ಯಮಗಳ ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಹಲವು ಸವಾಲು ಎದುರಿಸಲು ಮತ್ತೊಂದು ಆದಾಯದ ಅಗತ್ಯವಿದೆ. ಸುರಕ್ಷಿತ, ಸ್ಥಿರ ಹಾಗೂ ಖಚಿತ ಆದಾಯಕ್ಕೆ ಎಲ್ಲರು ಹಾತೊರೆಯುತ್ತಾರೆ. ಅದರಲ್ಲು ದುಡಿಯುವ ವರ್ಗ ಹೇಗಾದರೂ ಮಾಡಿ ಕೆಲ ವರ್ಷಗಳಲ್ಲಿ ಸೆಟ್ಲ್ ಆಗಲು ಹರಸಾಹಸ ಪಡುತ್ತಾರೆ. ಇದೀಗ ಕೇಂದ್ರ ಸರ್ಕಾರ ಬೆಂಬಲಿತ ಹಲವು ಯೋಜನೆಗಳನ್ನು ಪೋಸ್ಟ್ ಆಫೀಸ್ ಜಾರಿಗೆ ತಂದಿದೆ. ಈ ಪೈಕಿ ಪೋಸ್ಟ್ ಅಪೀಸ್ ತಿಂಗಳ ಆದಾಯ ಯೋಜನೆ(MIS) ಪ್ರತಿ ತಿಂಗಳು 9,000 ರೂಪಾಯಿ ಆದಾಯ ನೀಡಲಿದೆ. ಕೇವಲ 1,000 ರೂಪಾಯಿಯಿಂದ ಖಾತೆ ಆರಂಭಿಸಿ ಪ್ರತಿ ತಿಂಗಳು 9,000 ರೂಪಾಯಿ ಸ್ಥಿರ ಹಾಗೂ ಸುರಕ್ಷಿತ ಆದಾಯಪಡಲು ಸಾಧ್ಯವಿದೆ.
ಪೋಸ್ಟ್ ಆಫೀಸ್‌ನಲ್ಲಿರುವ ಮಂತ್ಲಿ ಇನ್‌ಕಮ್ ಸ್ಕೀಮ್(MIS) ಕೇಂದ್ರ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಹೆಚ್ಚಿನ ಹೊರೆ ಇಲ್ಲ, ಜೊತೆಗೆ ಉತ್ತಮ ಆದಾಯ ಪ್ರತಿ ತಿಂಗಳು ಪಡೆಯಬಹುದು. ಈ MIS ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿ ಗರಿಷ್ಠ 9 ಲಕ್ಷ ರೂಪಾಯಿ(ಒಂದು ಖಾತೆಗೆ) ಜಾಯಿಂಟ್ ಖಾತೆ ಆಗಿದ್ದರೆ ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಲು ಸಾಧ್ಯವಿದೆ.
ಪೋಸ್ಟ್ ಆಫೀಸ್‌ನಲ್ಲಿ 100 ರೂಗೆ ಖಾತೆ ತೆರೆದು ಹೂಡಿಕೆ ಮಾಡಿ, 10 ವರ್ಷದಲ್ಲಿ ಕೈಸೇರಲಿದೆ 8 ಲಕ್ಷ ರೂ!
MIS ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷ. 1 ವರ್ಷದ ಬಳಿಕ ತುರ್ತು ಅಗತ್ಯಕ್ಕಾಗಿ ಅಥವಾ ಆರ್ಥಿಕ ಸಂಕಷ್ಟದಿಂದ MIS ಯೋಜನೆ ಕ್ಲೋಸ್ ಮಾಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಪೋಸ್ಟ್ ಆಫೀಸ್ 7.4 ಶೇಕಡಾ ಬಡ್ಡಿದರ ನೀಡುತ್ತಿದೆ. ನಿಯಮಿತವಾಗಿ ಹೂಡಿಕೆ ಮಾಡಿದರೆ 5 ವರ್ಷದ ಮೆಚ್ಯುರಿಟಿ ಅವಧಿಯಲ್ಲಿ ಪ್ರತಿ ತಿಂಗಳು ಗರಿಷ್ಠ 9,000 ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ.
ತಿಂಗಳ ಆದಾಯ ಯೋಜನೆ ಖಾತೆಯಲ್ಲಿ ಒಟ್ಟು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 3,083.33 ರೂಪಾಯಿ ಆದಾಯ ಸಿಗಲಿದೆ. ಇನ್ನು 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 5,550 ರೂಪಾಯಿ ಆದಾಯ ಪಡೆಯಲು ಅರ್ಹರಾಗುತ್ತೀರಿ. ಇನ್ನು ಜಾಯಿಂಟ್ ಖಾತೆ ಮೂಲಕ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ತಿಂಗಳಿಗೆ 9,250 ರೂಪಾಯಿ ಆದಾಯ ಪಡೆಯಲು ಸಾಧ್ಯವಿದೆ.
ಒಮ್ಮೆ ಹೂಡಿಕೆ ಮಾಡಿ ತಿಂಗಳಿಗೆ 20,000 ರೂ ಆದಾಯ ಗಳಿಸಿ, ಇದು ಪೋಸ್ಟ್ ಆಫೀಸ್ ನಿವೃತ್ತಿ ಪ್ಲಾನ್!
10 ವರ್ಷದ ಮೇಲ್ಪಟ್ಟ ಅಪ್ರಾಪ್ತರು ಅವರ ಹೆಸರಿನಲ್ಲೇ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದು ಹೂಡಿಕೆ ಮಾಡಲು ಅವಕಾಶವಿದೆ. ಖಾತೆ ಆರಂಭಿಸಿದ ಒಂದು ವರ್ಷದೊಳಗೆ ಯಾವುದೇ ಹೂಡಿಕೆ ಮೊತ್ತ ಮರಳಿ ಪಡೆಯಲು ಸಾಧ್ಯವಿಲ್ಲ. ಬಳಿಕ ನಿಯಮಗಳ ಅನುಸಾರ ಖಾತೆ ಕ್ಲೋಸ್ ಮಾಡಿ ಹಣ ಮರಳಿ ಪಡೆಯಬಹುದು.ಮೆಚ್ಯುರಿಟಿ ಮೊದಲೇ ಹೂಡಿಕೆ ಮಾಡಿದಾದ ಮೃತಪಟ್ಟರೆ, ನಾಮಿನಿ ಖಾತೆಗೆ ಹೂಡಿಕೆ ಮೊತ್ತ ಹಾಗೂ ಬಡ್ಡಿದರ ಜಮೆ ಆಗಲಿದೆ.