Asianet Suvarna News Asianet Suvarna News

ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌: ಶೀಘ್ರದಲ್ಲೇ ನಿಮ್ಮ ಇಪಿಎಫ್‌ ಖಾತೆಗೆ 8.15% ಬಡ್ಡಿ ಸೇರ್ಪಡೆ

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಮಾರ್ಚ್ 28, 2023 ರಂದು ತನ್ನ ಆರು ಕೋಟಿಗೂ ಹೆಚ್ಚು ಚಂದಾದಾರರಿಗೆ 2022-23ರಲ್ಲಿ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು 8.15% ಕ್ಕೆ ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. ಈ ಬಡ್ಡಿದರವನ್ನು ಶೀಘ್ರದಲ್ಲೇ ಉದ್ಯೋಗಿಗಳ ಅಕೌಂಟ್‌ಗೆ ಹಾಕಲಿದೆ. 

government ratifies 8 15 percent rate on employees provident fund for 2022 23 ash
Author
First Published Jul 24, 2023, 2:30 PM IST

ಹೊಸದಿಲ್ಲಿ (ಜುಲೈ 24, 2023): ಬೆಲೆ ಏರಿಕೆಯಿಂದ ತತ್ತರಿಸಿರುವ ಉದ್ಯೋಗಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಇಪಿಎಫ್‌ಒ ಬಳಕೆದಾರರಿಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ನಿಮ್ಮ ಅಕೌಂಟ್‌ಗೆ ಬಡ್ಡಿಯನ್ನು ಸೇರಿಸಲಿದೆ. 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ 8.15% ಬಡ್ಡಿ ದರವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸೋಮವಾರ ಪ್ರಕಟಿಸಿದ್ದು, ನಿಮ್ಮ ಅಕೌಂಟ್‌ಗಳಿಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ. 

ಜುಲೈ 24, 2023 ರಂದು EPFO ಹೊರಡಿಸಿದ ಸುತ್ತೋಲೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. 1952 ರ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ ಪ್ಯಾರಾ 60(1) ರ ಅಡಿಯಲ್ಲಿ ಬಡ್ಡಿದರವನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಮಾರ್ಚ್ 28, 2023 ರಂದು ತನ್ನ ಆರು ಕೋಟಿಗೂ ಹೆಚ್ಚು ಚಂದಾದಾರರಿಗೆ 2022-23ರಲ್ಲಿ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು 8.15% ಕ್ಕೆ ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ.

ಇದನ್ನು ಓದಿ: ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್‌: ಅಡುಗೆ ಎಣ್ಣೆ, ಗೋಧಿ ಬೆಲೆಯೂ ಹೆಚ್ಚಳ!

ಸೋಮವಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, 2022-23ರ ಇಪಿಎಫ್‌ನಲ್ಲಿ 8.15% ಬಡ್ಡಿಯನ್ನು ಸದಸ್ಯರ ಖಾತೆಗಳಿಗೆ ಜಮಾ ಮಾಡಲು ಇಪಿಎಫ್‌ಒ ಕಚೇರಿಗಳಿಗೆ ಸೂಚನೆ ನೀಡಿದೆ. 
ಈ ವರ್ಷದ ಮಾರ್ಚ್‌ನಲ್ಲಿ ಇಪಿಎಫ್‌ಒ ಟ್ರಸ್ಟಿಗಳು ಅನುಮೋದಿಸಿದ ಇಪಿಎಫ್ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದ ನಂತರ ಈ ಆದೇಶ ಬಂದಿದೆ.

ಮಾರ್ಚ್ 2022 ರಲ್ಲಿ, EPFO 2021-22 ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು 2020-21 ರಲ್ಲಿ 8.5 ಪ್ರತಿಶತದಿಂದ 8.10% ಗೆ ಅಂದರೆ, ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿಸಿತ್ತು. ಇದು 1977-78 ರಲ್ಲಿ ಇಪಿಎಫ್ ಬಡ್ಡಿ ದರವು 8% ರಷ್ಟಿದ್ದ ನಂತರ ಅತ್ಯಂತ ಕಡಿಮೆಯಾಗಿದೆ.

ಇದನ್ನೂ ಓದಿ: ದುಡ್ಡು ಮಾಡೋದು ಹೀಗೆ! ಕೇವಲ 1500 ರೂ.ನಿಂದ ಉದ್ಯಮ ಆರಂಭಿಸಿದ ಮಹಿಳೆ ಈಗ ಕೋಟ್ಯಧಿಪತಿ

ಇದಕ್ಕೂ ಮುನ್ನ, ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ಇಪಿಎಫ್ಒ ವಿಸ್ತರಿಸಿತ್ತು. ಈ ಹಿಂದೆ ಅರ್ಜಿ ಸಲ್ಲಿಕೆಗೆ ಜೂನ್.26 ಕೊನೆಯ ದಿನವಾಗಿತ್ತು. ಆದರೆ, ಈ ಗಡುವನ್ನು ಜುಲೈ 11ರ ತನಕ ವಿಸ್ತರಿಸಲಾಗಿತ್ತು ಇನ್ನು ಈ ಗಡುವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅದೇ ಉದ್ಯೋಗದಾತ ಸಂಸ್ಥೆಗಳು ಅಥವಾ ಕಂಪನಿಗಳಿಗೆ ಹೆಚ್ಚುವರಿ ಮೂರು ತಿಂಗಳು ಅಂದ್ರೆ ಸೆಪ್ಟೆಂಬರ್ 30ರ ತನಕ ಅವಕಾಶ ನೀಡಲಾಗಿದೆ. ಈ ಮೂಲಕ ಇಪಿಎಫ್ಒ ಮೂರನೇ ಬಾರಿ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಿದೆ. ಈ ಹಿಂದೆ  2023ರ ಮೇ 3ರ ತನಕ ಮಾತ್ರ ಅವಕಾಶ ನೀಡಿತ್ತು. ಆ ಬಳಿಕ ಅರ್ಹ ಎಲ್ಲ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಜೂನ್ 26ರ ತನಕ ವಿಸ್ತರಿಸಿತ್ತು. ಆದರೆ, ಈ ಬಾರಿ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶ ನೀಡುತ್ತಿರೋದಾಗಿ ಇಪಿಎಫ್ಒ ಕಳೆದ ತಿಂಗಳು ತಿಳಿಸಿತ್ತು.

ಇದನ್ನೂ ಓದಿ: ಆರ್ಥಿಕ ಹಿಂಜರಿಕೆಯಿಂದ ಹೊರಗುಳಿದ ಭಾರತಕ್ಕೆ ವಿಶ್ವಬ್ಯಾಂಕ್‌ ಶಹಬ್ಬಾಸ್‌: ಜಿಡಿಪಿ ದರಕ್ಕೂ ಮೆಚ್ಚುಗೆ

Follow Us:
Download App:
  • android
  • ios