ಕೇಂದ್ರ ಸರ್ಕಾರ ಜುಲೈ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಫ್ತು ಸುಂಕ ಹೆಚ್ಚಿಸಿದೆ. ಸರ್ಕಾರದ ಈ ನಿರ್ಧಾರ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಹೇಗೆ ಪರಿಣಾಮ ಬೀರಲಿದೆ? ಇಂಧನ ದರ ಏರಿಕೆಯಾಗುತ್ತಾ? ಇಲ್ಲಿದೆ ಮಾಹಿತಿ.  

ನವದೆಹಲಿ (ಜು.1): ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ (Petroleum products) ದಾಸ್ತಾನು ನಿರ್ವಹಣೆಗೆ ಹಾಗೂ ಬೆಲೆಗಳ ನಿಯಂತ್ರಣಕ್ಕೆ ಪೆಟ್ರೋಲ್ (Petrol) , ಡೀಸೆಲ್ (Diesel) ಹಾಗೂ ಎಟಿಎಫ್ (ATF) ಮೇಲಿನ ರಫ್ತು ಸುಂಕವನ್ನು (export duty) ಭಾರತ ಸರ್ಕಾರ ಇಂದು (ಜು.1) ಹೆಚ್ಚಿಸಿದೆ. ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್ ಗೆ 5ರೂ. ಹಾಗೂ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ ಗೆ 12 ರೂ. ಹೆಚ್ಚಿಸಲಾಗಿದೆ. ಇನ್ನು ಎಟಿಎಫ್ ಮೇಲೆ ರಫ್ತು ಸುಂಕವನ್ನು ಲೀಟರ್ ಗೆ 6ರೂ. ಏರಿಕೆ ಮಾಡಲಾಗಿದೆ. 

ವಿವಿಧ ಇಂಧನಗಳ ಮೇಲಿನ ರಫ್ತು ಸುಂಕ ದೇಶೀಯ ಇಂಧನ ಬೆಲೆ ಹೆಚ್ಚಳಕ್ಕೆ ಕಾರಣವಾಗೋದಿಲ್ಲ. ಅಲ್ಲದೆ, ರಫ್ತುದಾರರಿಗೆ ಶೇ. 50ರಷ್ಟು ಪೆಟ್ರೋಲ್ ಹಾಗೂ ಶೇ.30ರಷ್ಟು ಡಿಸೇಲ್ ಅನ್ನು ದೇಶೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡುವಂತೆ ಸರ್ಕಾರ ರಫ್ತುದಾರರಿಗೆ ನಿರ್ದೇಶಿಸಿದೆ. 

LPG Cylinder Price Cut:ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ 198ರೂ. ಇಳಿಕೆ

'ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ಪಾವತಿಯಿಂದ ನೇಪಾಳ ಹಾಗೂ ಭೂತಾನ್ ಗೆ ವಿನಾಯ್ತಿ ನೀಡಲಾಗಿದೆ. ಆದ್ರೆ ಈ ಷರತ್ತು ಇಒಯುಎಸ್ (EoUs) ಹಾಗೂ ಎಸ್ ಇಝುಡ್ (SEZ) ಘಟಕಗಳಿಗೆ ಶೇ.100ರಷ್ಟು ಅನ್ವಯಿಸೋದಿಲ್ಲ' ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಖಾಸಗಿ ವಲಯದ ತೈಲ ಸಂಸ್ಕರಣಾ ಘಟಕಗಳು ( oil refiners) ಯುರೋಪ್ ( Europe) ಹಾಗೂ ಅಮೆರಿಕದಂತಹ ( US) ಮಾರುಕಟ್ಟೆಗಳಿಗೆ ತೈಲ ರಫ್ತು ಮಾಡುವ ಮೂಲಕ ದೊಡ್ ಪ್ರಮಾಣದಲ್ಲಿ ಲಾಭ ಗಳಿಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯ ಲಾಭವನ್ನು ದೇಶೀಯ ತೈಲ ಉತ್ಪಾದಕರು ಪಡೆಯುತ್ತಿರುವ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ರಫ್ತು ಸುಂಕ ಘೋಷಣೆಯಾದ ಬೆನ್ನಲ್ಲೇ ರಿಲಯನ್ಸ್ ಇಂಡಸ್ಟ್ರೀಸ್ ಲಿ.(RIL), ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೋರೇಷನ್ (ONGC) ಷೇರುಗಳ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಶುಕ್ರವಾರ ಬೆಳಗ್ಗಿನ ವಹಿವಾಟಿನ ಅವಧಿಯಲ್ಲಿ ರಿಲಯನ್ಸ್ ಷೇರುಗಳು ಶೇ.5ರಷ್ಟು ಇಳಿಕೆ ದಾಖಲಿಸಿದ್ರೆ, ಒಎನ್ ಜಿಸಿ (ONGC) ಷೇರುಗಳ ಬೆಲೆಯಲ್ಲಿ ಶೇ.10ರಷ್ಟು ಇಳಿಕೆ ಕಂಡುಬಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮೇ 21ರಿಂದ ಯಾವುದೇ ಬದಲಾವಣೆಯಾಗಿಲ್ಲ. ಮೇ 21ರಂದು ಕೇಂದ್ರ ಸರ್ಕಾರ ಇಂಧನ ಬೆಲೆಯಲ್ಲಿ ಇಳಿಕೆ ಮಾಡಿತ್ತು. ಸರ್ಕಾರ ರಫ್ತು ಸುಂಕ ಘೋಷಿಸಿದ್ರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಅದು ಯಾವುದೇ ಪರಿಣಾಮ ಬೀರೋದಿಲ್ಲ.

4ದಿನಕ್ಕೆ ಕೆಲಸ ಕಡಿತ ಸೇರಿದಂತೆ ಜುಲೈ 1 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆ

ಇಂಧನ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್ (VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ. ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು.ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು.ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ.