ಯುಪಿಐ ಪಾವತಿ ಭಾರತದಲ್ಲಿ ಹೆಚ್ಚಾಗಿದೆ. ಭಾರತದ ಡಿಜಿಟಲ್ ಇಂಡಿಯಾಗೆ ಪೂರಕವಾಗಿ ಟ್ರಾನ್ಸಾಕ್ಷನ್ ಕೂಡ ಬದಲಾಗಿದೆ. ಇಷ್ಟು ದಿನ ಯುಪಿಐ ಮೂಲಕ ಪಾವತಿ, ಟ್ರಾನ್ಸಾಕ್ಷನ್ ಸೇರಿದಂತೆ ಎಲ್ಲವೂ ಉಚಿತವಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ ಇದೀಗ ಗೂಗಲ್ ಪೇ ಕೆಲ ಪಾವತಿಗಳಿಗೆ ಶುಲ್ಕ ಅನ್ವಯವಾಗಲಿದೆ.

ನವದೆಹಲಿ(ಫೆ.20) ಭಾರತದಲ್ಲಿ ಯುಪಿಐ ಮೂಲಕ ಅತೀ ಹೆಚ್ಚು ವ್ಯವಹಾರಗಳು ನಡೆಯುತ್ತಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರ ಬಳಿ ಯುಪಿಐ ಪಾವತಿ ವ್ಯವಸ್ಥೆ ಇದೆ. ಈ ಮೂಲಕ ಭಾರತದ ವಿಶ್ವದಲ್ಲಿ ಅತೀದೊಡ್ಡ ಡಿಜಿಟಲ್ ವಹಿವಾಟು ನಡೆಸುವ ದೇಶವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಹಲವು ಬ್ಯಾಂಕ್ ಹಾಗೂ ಸಂಸ್ಥೆಗಳು ಯುಪಿಐ ಪಾವತಿ ವ್ಯವಸ್ಥೆ ಒದಗಿಸಿದೆ. ಈ ಪೈಕಿ ಗೂಗಲ್ ಪೇ ಅತೀ ಹೆಚ್ಚು ಬಳಕೆಯಲ್ಲಿದೆ. ಇಷ್ಟು ದಿನ ಯಾವುದೇ ಯುಪಿಐ ಮೂಲಕ ಹಣ ಪಾವತಿ, ಬಿಲ್ ಪಾವತಿಗಳು ಸಂಪೂರ್ಣ ಉಚಿತವಾಗಿತ್ತು. ಇಷ್ಟೇ ಅಲ್ಲ ಎಷ್ಟೇ ಬಾರಿ ಟ್ರಾನ್ಸಾಕ್ಷನ್ ಮಾಡಿದರೂ ಸಂಪೂರ್ಣ ಉಚಿತವಾಗಿತ್ತು. ಇದೀಗ ಗೂಗಲ್ ಪೇ ಕೆಲ ಪಾವತಿಗಳಿಗೆ ಶುಲ್ಕ ವಿಧಿಸುತ್ತಿದೆ.

ಯಾವೆಲ್ಲಾ ಟ್ರಾನ್ಸಾಕ್ಷನ್‌ಗೆ ಶುಲ್ಕ ಅನ್ವಯ?
ಗ್ಯಾಸ್ ಬುಕಿಂಗ್, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಇನ್ನು ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪೇಮೆಂಟ್‌‌ಗೆ ಶೇಕಡಾ 0.5 ರಿಂದ ಶೇಕಡಾ 1 ರಷ್ಟು ಜಿಎಸ್‌ಟಿ ವಿದಿಸಲಾಗುತ್ತದೆ. ಇನ್ನು ಎಲೆಕ್ಟ್ರಿಕ್ ಬಿಲ್‌ನ್ನು ಕ್ರಿಡಿಟ್ ಮೂಲಕ ಪಾವತಿಸಿದರೆ 15 ರೂಪಾಯಿ ಕನ್ವಿನ್ಸಿಂಗ್ ಫೀ ಸೇರಿಸಲಾಗುತ್ತದೆ. ಈಗಾಗಲೇ ಮೊಬೈಲ್ ರೀಚಾರ್ಜ್ ಮಾಡುವಾಗ 3 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಮೊಬೈಲ್ ರೀಚಾರ್ಜ್ ಹೆಚ್ಚುವರಿ ಶುಲ್ಕ ಕಳೆದೊಂದು ವರ್ಷದಿಂದ ಚಾಲ್ತಿಯಲ್ಲಿದೆ. 

ಹೊಸ ವರ್ಷಕ್ಕೆ ಗೂಗಲ್, ಫೋನ್‌ಪೇ, ವಾಟ್ಸಪ್‌ಗೆ ಗುಡ್‌ನ್ಯೂಸ್ ಕೊಟ್ಟ NPCI

ಇದೀಗ ಗೂಗಲ್ ಪೇ ಪಾವತಿಗಳು ಫ್ರೀ ಅಲ್ಲ. ಕೆಲ ಪಾವತಿಗಳು ಶುಲ್ಕ ವಿಧಿಸುತ್ತದೆ. ಹೀಗಾಗಿ ಪಾವತಿ ಅಥವಾ ಟ್ರಾನ್ಸಾಕ್ಷನ್‌ಗೂ ಮೊದಲು ಶುಲ್ಕದ ಬಗ್ಗೆ ತಿಳಿದುಕೊಳ್ಳಿ. ಭಾರತದಲ್ಲಿ ಗೂಗಲ್ ಪೇ ಶೇಕಡಾ 37ರಷ್ಟು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಪ್ರತಿಸ್ಪರ್ಧಿ ಫೋನ್‌ಪೇ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿದೆ. ಜನವರಿ ತಿಂಗಳಲ್ಲಿ ಗೂಗಲ್ ಪೇ ಮೂಲಕ ಭಾರತದಲ್ಲಿ 8.26 ಲಕ್ಷ ಕೋಟಿ ರೂಪಾಯಿ ಟ್ರಾನ್ಸಾಕ್ಷನ್ ನಡೆದಿದೆ.

ಗೂಗಲ್ ಪೇ ಸುರಕ್ಷತಾ ಕ್ರಮ
ಗೂಗಲ್ ಪ್ಲೇ ಪ್ರೊಟೆಕ್ಷನ್ ಅಂಗವಾಗಿ ಕೆಲ ಟ್ರಾನ್ಸಾಕ್ಷನ್‌ಗಳಿಗೆ ಎಚ್ಚರಿಕೆ ಸಂದೇಶ ನೀಡುತ್ತದೆ. ಪ್ರಮುಖವಾಗಿ ಕೆಲ ಪಾವತಿಗಳು ಭವಿಷ್ಯದಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದರೆ, ಅಂತಹ ಪಾವತಿಗಳ ಆರಂಭದಲ್ಲೇ ಎಚ್ಚರಿಕೆ ಸೂಚನೆ ನೀಡುತ್ತದೆ. ಮೊಬೈಲ್ ಸ್ಕ್ರೀನ್ ಮೇಲೆ ಗೂಗಲ್ ಎಚ್ಚರಿಕೆ ಸಂದೇಶವನ್ನು ತೋರಿಸುತ್ತದೆ. ಅಪಾಯಕಾರಿ ವಹಿವಾಟುಗಳನ್ನು ನಿರ್ಬಂಧಿಸಲಾಗುತ್ತದೆ ಮತ್ತು ಸಮಸ್ಯಾತ್ಮಕ ವಿಷಯವನ್ನು ತೆಗೆದುಹಾಕಲಾಗುತ್ತದೆ. ಈ ರೀತಿ, ಗೂಗಲ್ ಇಂಡಿಯಾ ನಾಲ್ಕು ಕೋಟಿ ಎಚ್ಚರಿಕೆ ಸಂದೇಶಗಳನ್ನು ತೋರಿಸಿದೆ ಮತ್ತು ಗೂಗಲ್ ಪೇ ಮೂಲಕ 13,000 ಕೋಟಿ ರೂಪಾಯಿಗಳ ಅನುಮಾನಾಸ್ಪದ ವಹಿವಾಟುಗಳನ್ನು ತಡೆದಿದೆ. 

ಜಾಗತಿಕವಾಗಿ, ಗೂಗಲ್ ಪ್ರತಿದಿನ 200 ಬಿಲಿಯನ್‌ಗಿಂತಲೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಗೂಗಲ್ ಪ್ಲೇ ಹೊರಗೆ 13 ಮಿಲಿಯನ್ ಹೊಸ ತೊಂದರೆದಾಯಕ ಅಪ್ಲಿಕೇಶನ್‌ಗಳನ್ನು ಗೂಗಲ್ ಗುರುತಿಸಿದೆ. ಸಮಸ್ಯೆ ಉಂಟುಮಾಡುವ ಅಪ್ಲಿಕೇಶನ್‌ಗಳನ್ನು ಪ್ರಕಟಿಸಲು ಪ್ರಯತ್ನಿಸಿದ 158,000 ಡೆವಲಪರ್‌ಗಳನ್ನು ಗೂಗಲ್ ನಿಷೇಧಿಸಿದೆ. ಗೂಗಲ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 2.36 ಮಿಲಿಯನ್ ಅಪ್ಲಿಕೇಶನ್‌ಗಳನ್ನು ಗೂಗಲ್ ನಿಷೇಧಿಸಿದೆ. 

ಬ್ರೇಕ್ಅಪ್ ನಂತ್ರ ಪ್ರತಿ ನಿಮಿಷಕ್ಕೆ 1 ರೂ. ಗೂಗಲ್ ಪೇ ಮಾಡ್ತಿದ್ದಾನೆ ಎಕ್ಸ್ !