Min read

ನಿಮಗೂ ಈ ವಯಸ್ಸು ಹತ್ತಿರ ಬರ್ತಿದ್ಯಾ? ಕೆಲಸ ಕಳೆದ್ಕೊಳ್ಳೋ ಸಾಧ್ಯತೆ ಹೆಚ್ಚು !

Professionals above 40 are now the top targets of layoffs
Corporate Layoff

Synopsis

ವಯಸ್ಸು ಹೆಚ್ಚಾದಂತೆ ಅನುಭವ ಜಾಸ್ತಿ, ಸಂಬಳ ಕೂಡ ಹೆಚ್ಚು ಅಂತ ನಾವೆಲ್ಲ ಭಾವಿಸ್ತೇವೆ. ಆದ್ರೆ ಈ ಹೆಚ್ಚಾಗುವ ವಯಸ್ಸೇ ಆರ್ಥಿಕ ಸಂಕಷ್ಟಕ್ಕೆ ನಿಮ್ಮನ್ನು ನೂಕಬಹುದು. ಯಾವ ವಯಸ್ಸಿನವರು ಹೆಚ್ಚು ಕೆಲ್ಸ ಕಳೆದುಕೊಳ್ತಾರೆ ಅನ್ನೋದು ನಿಮಗೆ ಗೊತ್ತಾ? 
 

ವಯಸ್ಸು ಕೇವಲ ಸಂಖ್ಯೆ. ಹೀಗಂತ ನಾವು ಅನೇಕ ಸಂದರ್ಭದಲ್ಲಿ ಬಳಕೆ ಮಾಡ್ತೇವೆ. ಮನಸ್ಸೊಂದಿದ್ರೆ ವಯಸ್ಸು ಕೇವಲ ಸಂಖ್ಯೆಯಾಗುತ್ತೆ, ಯಾರು ಬೇಕಾದ್ರೂ ಏನನ್ನು ಬೇಕಾದ್ರೂ ಸಾಧಿಸಬಹುದು ಅಂತ ಮಾತನಾಡ್ತೇವೆ. ಆದ್ರೆ ಈ ವಯಸ್ಸು (age) ನಮಗೆ ಕೇವಲ ಸಂಖ್ಯೆ ಆಗಿರಬಹುದು. ಆದ್ರೆ ಕಾರ್ಪೊರೇಟ್ ಜಗತ್ತಿನಲ್ಲಿ ಇದ್ರ ಅರ್ಥ ಬದಲಾಗಿದೆ. ವಯಸ್ಸು 40 ಆಗ್ತಿದ್ದಂತೆ ಈ ಹಿಂದೆ ಅವರನ್ನು ಅನುಭವಿಗಳು, ವಿಶ್ವಾಸಾರ್ಹರು, ಉತ್ತಮ ಕೆಲಸಗಾರರು ಅಂತ ಪರಿಗಣಿಸಿ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡ್ತಿದ್ದರು. ಆದ್ರೀಗ 40ರ ವಯಸ್ಸು ಕೆಲಸ ಕಳೆದುಕೊಳ್ಳುವ ಭಯವನ್ನು ಹುಟ್ಟಿಸಿದೆ. 40ರ ಹರೆಯದಲ್ಲಿರುವ ಅನೇಕರು ವಜಾಗೊಳ್ಳುವ ದೊಡ್ಡ ಟೆನ್ಷನ್ ಎದುರಿಸುತ್ತಿದ್ದಾರೆ. 

ಕಾರ್ಪೊರೇಟ್ (Corporate) ಜಗತ್ತಿನಲ್ಲಿ ಅನುಭವಿಗಳಿಗೆ ಈಗ ಜಾಗವಿಲ್ಲ. ವಜಾ ಎಂಬ ವಿಷ್ಯ ಬಂದಾಗ ಅವರು 40 ವರ್ಷ ದಾಟಿದವರನ್ನು ಮೊದಲು ಪಟ್ಟಿಗೆ ಸೇರಿಸಿಕೊಳ್ತಿದ್ದಾರೆ. 40 ರ ಹರೆಯದ ವೃತ್ತಿಪರರು ಈಗ ವಜಾಗೊಳಿಸುವಿಕೆಗೆ ಪ್ರಮುಖ ಗುರಿಯಾಗ್ತಿದ್ದಾರೆ ಎಂದು ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಶಾಂತನು ದೇಶಪಾಂಡೆ ಹೇಳಿದ್ದಾರೆ.  40 ವರ್ಷ ವಯಸ್ಸಿನ ಉದ್ಯೋಗಿಗಳು ವಜಾಗೊಳಿಸುವ ಸಾಲಿನಲ್ಲಿ ಮೊದಲಿಗರಾಗಬಹುದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಈ ವಯಸ್ಸಿನವರು ಎಷ್ಟೇ ಕೆಲಸ ಮಾಡ್ಲಿ, ಅವರ ಅನುಭವ ಹೇಗೇ ಇರಲಿ ಇದು ಅವರಿಗೆ ಹೆಚ್ಚು ಸಹಾಯ ಮಾಡುವುದಿಲ್ಲ ಎಂದಿದ್ದಾರೆ. 

ಟಾಯ್ಲೆಟ್ ಪೇಪರ್‌ನಲ್ಲಿ ರಿಸಿಗ್ನೇಶನ್ ಲೆಟರ್, ಒಂದೇ ವಾಕ್ಯದಲ್ಲಿ ಕಂಪನಿ ಜನ್ಮಜಾಲಾಡಿದ ಉದ್ಯೋಗಿ

ಇದು ಅತ್ಯಂತ ಕಠಿಣ ಸಮಯ :  40ನೇ ವಯಸ್ಸಿನಲ್ಲಿ ಅನೇಕ ಜವಾಬ್ದಾರಿಗಳ ಹೊರೆ ಅವರ ಮೇಲಿರುತ್ತದೆ.  ಈ ವಯಸ್ಸಿನಲ್ಲ ಅವರು ಆರ್ಥಿಕ ಒತ್ತಡವನ್ನು ಎದುರಿಸುತ್ತಿರುತ್ತಾರೆ. ಗೃಹ ಸಾಲ, ವಾಹನಗಳ ಇಎಂಐ, ಮಕ್ಕಳ ಶಿಕ್ಷಣ,ವೃದ್ಧ ಪೋಷಕರ ವೈದ್ಯಕೀಯ ಬಿಲ್  ಸೇರಿದಂತೆ ಅನೇಕ ಖರ್ಚುಗಳು ಅವರ ಮೇಲಿರುತ್ತದೆ. ಬಹುತೇಕರು ಯಾವುದೇ ದೊಡ್ಡ ಉಳಿತಾಯ ಅಥವಾ ಗಣನೀಯ ಹೂಡಿಕೆಗಳನ್ನು ಹೊಂದಿರುವುದಿಲ್ಲ. ಈ ಸಮಯದಲ್ಲಿ ಅವರನ್ನು ವಜಾ ಮಾಡಿದ್ರೆ ಅವರು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ.  ವಜಾಗೊಳಿಸಲು ಇದು ಅತ್ಯಂತ ಕೆಟ್ಟ ಸಮಯ ಎಂದು ದೇಶಪಾಂಡೆ ಹೇಳಿದ್ದಾರೆ. ಈ ವಯಸ್ಸಿನಲ್ಲಿ ಕೆಲಸ ಕಳೆದುಕೊಳ್ಳುವುದು ಅವರಿಗೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಕಷ್ಟವಾಗುತ್ತದೆ.

40 ವರ್ಷದವರೇ ಗುರಿ ಏಕೆ? : ಕೆಲ ವರ್ಷಗಳ ಹಿಂದೆ 40 ವರ್ಷದವರಿಗೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಬಡ್ತಿ, ದೊಡ್ಡ ಜವಾಬ್ದಾರಿ ಹೊಣೆ ಅವರ ಮೇಲಿರುತ್ತಿತ್ತು. ಆದ್ರೆ ಈಗ ಕಂಪನಿಗಳ ಸ್ಥಿತಿ ಬದಲಾಗಿದೆ. ಕಂಪನಿಗಳ ಮೇಲೆ ಒತ್ತಡ ಹೆಚ್ಚಿದೆ. ಅವರು ಹೆಚ್ಚಿನ ಸಂಭಾವನೆ ಪಡೆಯುವ ಉದ್ಯೋಗಿಗಳನ್ನು ವಜಾ ಮಾಡಲು ಮೊದಲ ಆಯ್ಕೆ ಮಾಡಿಕೊಳ್ತಿದ್ದಾರೆ. 40ರ ಹರೆಯದ ವೃತ್ತಿಪರರು ಸಾಮಾನ್ಯವಾಗಿ ಕಿರಿಯ ಉದ್ಯೋಗಿಗಳಿಗಿಂತ ಹೆಚ್ಚಿನ ಸಂಬಳ ಪಡೆಯುವುದರಿಂದ, ಅವರನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಹೆಚ್ಚು. ಇಷ್ಟೇ ಅಲ್ಲ, ಯುವ ಉದ್ಯೋಗಿಗಳು ಹಿರಿಯ ಉದ್ಯೋಗಿಗಳಿಗಿಂತ ಕಡಿಮೆ ಸಂಬಳಕ್ಕೆ ಲಭ್ಯವಾಗ್ತಾರೆ.  ಹೊಸ ತಂತ್ರಜ್ಞಾನವನ್ನು ಹೆಚ್ಚು ವೇಗವಾಗಿ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಾರೆ. 

2 ಕಾರಣಕ್ಕೆ ಭಾರತೀಯ ಉದ್ಯೋಗಿಗಳನ್ನು ತೆಗೆದು ಹಾಕಲು ರೆಡಿಯಾದ ಸಾಲು ಸಾಲು MNC

ಕೆಲಸ ಉಳಿಸಿಕೊಳ್ಳಲು ಏನು ಮಾಡ್ಬೇಕು? : 40ರ ಹರೆಯದಲ್ಲಿ ನೀವಿದ್ದು, ಕೆಲಸ ಕಳೆದುಕೊಳ್ಳುವ ಭಯ ನಿಮಗಿದ್ದರೆ ನಿಮ್ಮ ಉದ್ಯೋಗದ ಸ್ಟೈಲ್ ಬದಲಿಸಿಕೊಳ್ಳಬೇಕು. ಬದಲಾಗ್ತಿರುವ ತಂತ್ರಜ್ಞಾನಕ್ಕೆ ನೀವು ಹೊಂದಿಕೊಳ್ಳಬೇಕು. ಎಐ ಬಳಕೆಯತ್ತ ಗಮನ ಹರಿಸಬೇಕು. ಮಾರ್ಕೆಟಿಂಗ್ ಮ್ಯಾನೇಜರ್ಗಳಿಂದ ಹಿಡಿದು ಮಾನವ ಸಂಪನ್ಮೂಲ ವೃತ್ತಿಪರರವರೆಗೆ ಪ್ರತಿಯೊಬ್ಬರೂ AI ತಮ್ಮ ಕೆಲಸವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಹಣ ಉಳಿಸುವತ್ತ ಗಮನಹರಿಸಬೇಕು.  

Latest Videos