*ಒಂದೇ ವಾರದಲ್ಲಿ ಗೂಗಲ್ ಗೆ ಎರಡು ಬಾರಿ ದಂಡ*ಸುಮಾರು 2,000 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ದಂಡ *ಸ್ಪರ್ಧಾತ್ಮಕ ವಿರೋಧಿ ನೀತಿಗಳನ್ನು ಅನುಸರಿಸದಂತೆ ಗೂಗಲ್ ಗೆ ಸಿಸಿಐ ಎಚ್ಚರಿಕೆ 

ನವದೆಹಲಿ (ಅ.26): ಪಾವತಿ ಆ್ಯಪ್ ಹಾಗೂ ಇನ್ ಆ್ಯಪ್ ಪಾವತಿ ವ್ಯವಸ್ಥೆ ಪ್ರಚಾರಕ್ಕೆ ಪ್ಲೇ ಸ್ಟೋರ್ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಗೂಗಲ್‌ನ ಮಾತೃಸಂಸ್ಥೆ ಅಲ್ಫಾಬೆಟ್‌ಗೆ 936 ಕೋಟಿ ರೂ. ದಂಡ ವಿಧಿಸಿದೆ. ಈ ಮೂಲಕ ಒಂದೇ ವಾರದಲ್ಲಿ ಗೂಗಲ್ ಗೆ ಎರಡು ಬಾರಿ ದಂಡ ವಿಧಿಸಿದಂತಾಗಿದೆ. ಸುಮಾರು 2,000 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ದಂಡ ಹೇರಲಾಗಿದೆ. ಸ್ಪರ್ಧಾತ್ಮಕ ವಿರೋಧಿ ನೀತಿಗಳನ್ನು ಅನುಸರಿಸದಂತೆ ಗೂಗಲ್ ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಥರ್ಡ್‌ ಪಾರ್ಟಿ ಬಿಲ್ಲಿಂಗ್‌/ಪೇಮೆಂಟ್‌ ಸೇವೆಗಳನ್ನು ಆ್ಯಪ್ ಅಭಿವೃದ್ಧಿಪಡಿಸಿದವರಿಗೆ ಗೂಗಲ್ ನಿರ್ಬಂಧ ಹೇರಬಾರದು ಎಂದು ಸಿಪಿಐ ಗೂಗಲ್ ಗೆ ನಿರ್ದೇಶನ ನೀಡಿದೆ. ಪೇಯ್ಡ್ ಆ್ಯಪ್‌ಗಳಿಗೆ ಸಂಬಂಧಿಸಿ ಆ್ಯಪ್ ಅಭಿವೃದ್ಧಿಪಡಿಸಿದವರು ಗೂಗಲ್‌ ಪ್ಲೇ ಬಿಲ್ಲಿಂಗ್‌ ಸಿಸ್ಟಮ್‌ (ಜಿಪಿಬಿಎಸ್) ಬಳಕೆ ಮಾಡೋದನ್ನು ಗೂಗಲ್ ಕಡ್ಡಾಯ ಮಾಡಿತ್ತು. ಆದರೆ, ಇದು ಸರಿಯಲ್ಲ ಎಂದು ಸಿಪಿಐ ಹೇಳಿದೆ. ಅಕ್ಟೋಬರ್ 20ರಂದು ಸಿಸಿಐ ಗೂಗಲ್ ಗೆ ಆ್ಯಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ ಮುಖಾಂತರ ಅಕ್ರಮ ಎಸಗಿದ ಆರೋಪದಲ್ಲಿ 1,337 ಕೋಟಿ ರೂ. ದಂಡ ವಿಧಿಸಿತ್ತು. ಅದಾಗಿ ಒಂದು ವಾರ ಕಳೆಯುವುದರೊಳಗೆ ಈಗ ಇನ್ನೊಮ್ಮೆ 936 ಕೋಟಿ ರೂ. ದಂಡ ವಿಧಿಸಿದೆ. ಹೀಗಾಗಿ ಒಂದು ವಾರದೊಳಗೆ ಗೂಗಲ್ ಮೇಲೆ 2,273 ಕೋಟಿ ರೂ. ದಂಡ ಬಿದ್ದಿದೆ.

ಆ್ಯಪ್ ಅಭಿವೃದ್ಧಿಪಡಿಸಿದವರು ಗೂಗಲ್‌ ಪ್ಲೇ ಬಿಲ್ಲಿಂಗ್‌ ಸಿಸ್ಟಮ್‌ (ಜಿಪಿಬಿಎಸ್) ಅನ್ನು ಆ್ಯಪ್ ಗಳಿಗೆ ಹಾಗೂ ಇತರ ಡಿಜಿಟಲ್ ಉತ್ಪನ್ನಗಳಿಗೆ (Digital products) ಪಾವತಿಗಳನ್ನು ಸ್ವೀಕರಿಸಲು ಮಾತ್ರ ಬಳಸೋದಲ್ಲ, ಬದಲಿಗೆ ಕೆಲವೊಂದು ಇನ್ -ಆ್ಯಪ್ (In-app) ಖರೀದಿಗೆ ಕೂಡ ಬಳಕೆ ಮಾಡೋದನ್ನು ಗೂಗಲ್ (Google) ಕಡ್ಡಾಯ ಮಾಡಿತ್ತು ಎಂದು ಸಿಸಿಐ (CCI) ಹೇಳಿದೆ. ಜಿಪಿಬಿಎಸ್ (GPBS) ಬಳಕೆ ಮಾಡದಿದ್ರೆ ಆ್ಯಪ್ (App) ಅಭಿವೃದ್ಧಿಪಡಿಸಿದವರಿಗೆ ಪ್ಲೇ ಸ್ಟೋರ್ ನಲ್ಲಿ (Play store) ಆ್ಯಪ್ ಗಳನ್ನು ಲಿಸ್ಟ್ (list) ಮಾಡಲು ಅವಕಾಶವಿರಲಿಲ್ಲ. 

ಈ ಸಲ ದೀಪಾವಳಿಗೆ ಪಟಾಕಿ ವ್ಯಾಪಾರ ಡಲ್‌?

ಇನ್ನು ಯುಪಿಐ (UPI) ಪಾವತಿ ಪ್ರತಿಸ್ಪರ್ಧಿ ಆ್ಯಪ್ ಗಳಾದ ಫೋನ್ ಪೇ (Phone pay), ಪೇಟಿಎಂ (Paytm) ಹಾಗೂ ಭಾರತ್ ಪೇ (Bharat pay)ಮುಂತಾದ ಪರ್ಯಾಯ ಪಾವತಿ ಆಯ್ಕೆಗಳನ್ನು ಪ್ಲೇ ಸ್ಟೋರ್ ನಿಂದ (Playstore) ಹೊರಗಿಡಲಾಗಿದೆ ಎಂಬ ಆರೋಪಗಳನ್ನು ಕೂಡ ಸಿಸಿಐ (CCI) ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಗೂಗಲ್ ನ ಯುಪಿಐ ಪಾವತಿ ಸೇವೆ 'ಗೂಗಲ್ ಪೇ' 'ಇಂಟೆಂಡ್ ಫ್ಲೋ' ಪಾವತಿ ವ್ಯವಸ್ಥೆ ಜೊತೆಗೆ ಡಿಫಾಲ್ಟ್ (Default) ಆಗಿ ಸಂಯೋಜನೆಗೊಂಡಿರೋದು ಕಂಡುಬಂದಿದ್ದು, ಇತರ ಯುಪಿಐ (UPI) ಆ್ಯಪ್ ಗಳು 'ಕಲಕ್ಟ್ ಫ್ಲೋ' ವಿಧಾನದಿಂದ ಮಾತ್ರ ಕಾರ್ಯನಿರ್ವಹಿಸೋದು ಪತ್ತೆಯಾಗಿದೆ. 

ರೇಂಜ್‌ ರೋವರ್‌ನಿಂದ ಜಾಗ್ವಾರ್‌: ಭಾರತೀಯ ಉದ್ಯಮಿಗಳ ಒಡೆತನದ ಪ್ರಸಿದ್ಧ ವಿದೇಶಿ ಬ್ರ್ಯಾಂಡ್‌ಗಳು!

ಇಂಟೆಂಡ್ ಫ್ಲೋ ಪಾವತಿ ವಿಧಾನ ಕಲೆಕ್ಟ್ ಫ್ಲೋ ತಂತ್ರ ಜ್ಞಾನಕ್ಕೆ ಹೋಲಿಸಿದ್ರೆ ಉನ್ನತ ಮಟ್ಟದ ಹಾಗೂ ಬಳಕೆದಾರರ ಸ್ನೇಹಿಯಾಗಿದೆ. ಇಂಟೆಂಡ್ ಫ್ಲೋ ಗ್ರಾಹಕರು ಹಾಗೂ ವ್ಯಾಪಾರಿಗಳು ಇಬ್ಬರಿಗೂ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಅಲ್ಲದೆ, ಈ ವಿಧಾನದ ಯಶಸ್ಸಿನ ಪ್ರಮಾಣ ಕೂಡ ಹೆಚ್ಚಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗಲ್ ಇತ್ತೀಚೆಗಷ್ಟೇ ತನ್ನ ನಿಯಮಗಳನ್ನು ಬದಲಿಸಿದ್ದು, ಪ್ರತಿಸ್ಪರ್ಧಿ ಆ್ಯಪ್ ಗಳಿಗೆ ಉನ್ನತ ಇಂಟೆಂಡ್ ಫ್ಲೋ ಪಾವತಿ ವಿಧಾನದ ಮೂಲಕ ಸಂಯೋಜನೆ ಹೊಂದಲು ಅವಕಾಶ ನೀಡಿರೋದಾಗಿ ಸಿಸಿಐಗೆ ತಿಳಿಸಿದೆ.