ಸಿಇಒ ಸುಂದರ್ ಪಿಚೈಗಿಂತಲೂ ಹೆಚ್ಚು ಶ್ರೀಮಂತ, ಬೆಂಗಳೂರಲ್ಲಿ ಕಲಿತ ಈ ಗೂಗಲ್ ಉದ್ಯೋಗಿ!

ಸಾಮಾನ್ಯವಾಗಿ ಬೃಹತ್ ಕಂಪೆನಿಗಳಲ್ಲಿ ಸಿಇಒ ಸಂಬಳ ಅಥವಾ ಆಸ್ತಿ ಎಲ್ಲಾ ಉದ್ಯೋಗಿಗಳಿಂತ ಹೆಚ್ಚಾಗಿರುತ್ತದೆ. ಆದ್ರೆ ಗೂಗಲ್‌ನ ಈ ಉದ್ಯೋಗಿ, ಗೂಗಲ್‌ ಸಿಇಒ, ಉದ್ಯೋಗದಾತರಾದ ಸುಂದರ್ ಪಿಚೈಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

Google employee Thomas Kurian is richer than CEO Sundar Pichai, has net worth of Rs 15800 crore Vin

ಪ್ರಪಂಚದಾದ್ಯಂತ ಭಾರತೀಯರು ಉದ್ಯಮಗಳಲ್ಲಿ ಬಹು ಶತಕೋಟಿ ಡಾಲರ್ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ರೀತಿ ಸುಂದರ್ ಪಿಚೈ, ಜಯಶ್ರೀ ಉಳ್ಳಾಲ್ ಸೇರಿದಂತೆ ಶ್ರೀಮಂತ ಭಾರತೀಯ ವೃತ್ತಿಪರ ಮ್ಯಾನೇಜರ್‌ಗಳನ್ನು 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023ರಲ್ಲಿ ಪಟ್ಟಿ ಮಾಡಲಾಗಿದೆ. ಒಟ್ಟಾರೆ 15,800 ಕೋಟಿ ರೂ.ಗಳ ನಿವ್ವಳ ಮೌಲ್ಯ ಹೊಂದಿರುವ ಥಾಮಸ್ ಕುರಿಯನ್, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರು ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರಷ್ಟು ಶ್ರೀಮಂತರಲ್ಲ ಅನ್ನೋದು ಅಚ್ಚರಿಯ ವಿಚಾರ.

ಥಾಮಸ್ ಕುರಿಯನ್ ಕೇರಳದಲ್ಲಿ 1966ರಲ್ಲಿ ಜನಿಸಿದರು. ಇವರು ವಿಶ್ವದ ಅತ್ಯಂತ ನಿಪುಣ ಭಾರತೀಯ ಉದ್ಯಮಿಗಳಲ್ಲಿ (Businessman) ಒಬ್ಬರು. 2018ರಿಂದ ಥಾಮಸ್ ಕುರಿಯನ್, Google ಕ್ಲೌಡ್‌ನ CEO ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಬಾಸ್ ಸುಂದರ್ ಪಿಚೈಗಿಂತ ಎರಡು ಪಟ್ಟು ಹೆಚ್ಚು ನಿವ್ವಳ ಮೌಲ್ಯದೊಂದಿಗೆ, ಅವರು ವಿಶ್ವದ ಎರಡನೇ ಶ್ರೀಮಂತ ಭಾರತೀಯ ಕಾರ್ಯನಿರ್ವಾಹಕರಾಗಿದ್ದಾರೆ. 

ಅಮೆರಿಕದಲ್ಲಿ ಕೆಲಸ ಬಿಟ್ಟು ಭಾರತಕ್ಕೆ ಬಂದ ಈ ಉದ್ಯೋಗಿ: ಈಗ 21,053 ಕೋಟಿ ಮೌಲ್ಯದ ಕಂಪನಿಗೆ ಇವರೇ ಒಡೆಯ!

ಥಾಮಸ್ ಕುರಿಯನ್ ಅವರ ಸಹೋದರ ಜಾರ್ಜ್ ಕುರಿಯನ್. 2015ರಿಂದ ನೆಟ್‌ಆಪ್ ಅನ್ನು ಸಿಇಒ ಆಗಿ ಮುನ್ನಡೆಸಿದ್ದಾರೆ. ಥಾಮಸ್ ಕುರಿಯನ್ ತನ್ನ ಅವಳಿ ಸಹೋದರನೊಂದಿಗೆ ಶಿಕ್ಷಣಕ್ಕಾಗಿ ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಗೆ ಸೇರಿದರು. ಅವರಿಬ್ಬರೂ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು. ಇಬ್ಬರೂ ಐಐಟಿ ಮದ್ರಾಸ್‌ನಲ್ಲಿ ವ್ಯಾಸಂಗ ಮಾಡಿದರು. ಹದಿನಾರನೇ ವಯಸ್ಸಿನಲ್ಲಿ, ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದರು. ಅಲ್ಲಿ ತಮ್ಮ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ, ಅವರು ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ MBA ಪೂರ್ಣಗೊಳಿಸಿದರು. ಮೆಕಿನ್ಸೆ ಮತ್ತು ಕಂಪನಿಯಲ್ಲಿ ಮೊದಲ ಬಾರಿಗೆ ಉದ್ಯೋಗ ದೊರೆಯಿತು.

ಕಂಪನಿಯಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದರು.  CEOಗಳಿಗೆ ಸಹಾಯ ಮಾಡುವ ಸಲಹೆಗಾರರ ತಂಡಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ನಂತರ ಹಣಕಾಸು ಸೇವೆಗಳು, ದೂರಸಂಪರ್ಕ ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಿಯಾಗಿದ್ದರು. 1996ರಲ್ಲಿ ಒರಾಕಲ್‌ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಮುಂದಿನ 22 ವರ್ಷಗಳನ್ನು ಅಲ್ಲಿಯೇ ಕಳೆದರು. 32 ರಾಷ್ಟ್ರಗಳಲ್ಲಿ 35,000 ವ್ಯಕ್ತಿಗಳ ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡಿದರು. 2018ರಲ್ಲಿ, ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣ ಅವರು ಕಂಪನಿಯನ್ನು ತೊರೆದರು. ನಂತರ ಅವರು ಗೂಗಲ್‌ಗೆ ಉದ್ಯೋಗಿಯಾಗಿ ಆಯ್ಕೆಯಾದರು.

ಜಗತ್ತಿನ 6ನೇ ಅತಿದೊಡ್ಡ ಶ್ರೀಮಂತರಾಗಿದ್ದ ಅನಿಲ್ ಅಂಬಾನಿ ದಿವಾಳಿಯಾಗಿದ್ದು ಆ ಒಂದು ತಪ್ಪಿನಿಂದ!

ಗೂಗಲ್ ಕ್ಲೌಡ್ ಅನ್ನು ಪುನರುಜ್ಜೀವನಗೊಳಿಸಿದ ಹೆಗ್ಗಳಿಕೆ ಕುರಿಯನ್ ಅವರಿಗೆ ಹೆಚ್ಚಾಗಿ ಸಲ್ಲುತ್ತದೆ. ಅವರು ಕಂಪನಿಯ ಗ್ರಾಹಕ ಸೇವೆಯನ್ನು ಮಾರ್ಪಡಿಸಿದರು. ಗೂಗಲ್ ಕ್ಲೌಡ್ ಮಾರಾಟಗಾರರ ಪ್ರೇರಣೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಅವರು ವ್ಯವಸ್ಥಾಪಕರು, ತಾಂತ್ರಿಕ ತಜ್ಞರು ಮತ್ತು ಮಾರಾಟಗಾರರ ಸಿಬ್ಬಂದಿಯನ್ನು ವಿಸ್ತರಿಸಿದರು. ಕ್ಲೌಡ್ ಸೇವೆಗಳಿಗೆ ಇತರ ವಲಯಗಳನ್ನು ಸೇರಿಸಿದರು. ಆಂಥೋಸ್ ಪ್ಲಾಟ್‌ಫಾರ್ಮ್ ಅನ್ನು ಸಹ ಪರಿಚಯಿಸಿದರು. ಥಾಮಸ್ ಕುರಿಯನ್ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ವ್ಯವಹಾರವನ್ನು ಪರಿವರ್ತಿಸುವ ಕಂಪನಿಯ ಸಾಮರ್ಥ್ಯವನ್ನು ವೇಗಗೊಳಿಸುವುದು ತಮ್ಮ ಉದ್ದೇಶವಾಗಿದೆ ಎಂದು ಬರೆದಿದ್ದಾರೆ.

ಥಾಮಸ್ ಕುರಿಯನ್‌ ಒರಾಕಲ್‌ನಲ್ಲಿ ಉತ್ಪನ್ನಗಳನ್ನು ರಚಿಸಿದರು. ಅದು ವರ್ಷಕ್ಕೆ 35 ಶತಕೋಟಿ ಮಾರಾಟವನ್ನು ತಂದಿತು. ಅವರ ನಾಯಕತ್ವದಲ್ಲಿ, ಕಂಪನಿಯ ಕ್ಲೌಡ್ ಆದಾಯವು 5.5 ಬಿಲಿಯನ್ ಡಾಲರ್‌ಗಳನ್ನು ಮೀರಿದೆ. ಅವರು ವಿಶ್ವದ ಶ್ರೀಮಂತ ಭಾರತೀಯ ವ್ಯವಸ್ಥಾಪಕರಾಗಿದ್ದರು.

ಥಾಮಸ್ ಕುರಿಯನ್ ಪ್ರಸ್ತುತ ವಿಶ್ವದ ಎರಡನೇ ಅತಿ ಶ್ರೀಮಂತ ಮ್ಯಾನೇಜರ್ ಆಗಿದ್ದು, ನಿವ್ವಳ ಮೌಲ್ಯ ರೂ. 15,800 ಕೋಟಿ. ಅವರು ತಮ್ಮ ಉದ್ಯೋಗದಾತರಾದ ಸುಂದರ್ ಪಿಚೈಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮಾತ್ರವಲ್ಲ ಅವರು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (7500 ಕೋಟಿ ರೂ.) ಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 2022ರಲ್ಲಿ, ಗೂಗಲ್ ಕ್ಲೌಡ್ 26.28 ಬಿಲಿಯನ್ ಡಾಲರ್ (ಸುಮಾರು ರೂ 2.1 ಲಕ್ಷ ಕೋಟಿ) ಆದಾಯವನ್ನು ಗಳಿಸಿದೆ.

Latest Videos
Follow Us:
Download App:
  • android
  • ios