ಗೂಗಲ್ ಸಿಇಒ ಸುಂದರ್ ಪಿಚೈ ಇದೀಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್ ಪಟ್ಟಿಯಲ್ಲಿ ಸುಂದರ್ ಪಿಚೈ ಇದೀದ ಬಿಲೆನಿಯರ್ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಕಳೆದೆರಡು 2 ವರ್ಷ ಪಿಚೈ ವೇತನ ಕುಸಿತವಾಗಿದ್ದರೂ, ಆಸ್ತಿ ಏರಿಕೆಯಾಗಿದ್ದು ಹೇಗೆ ?
ಕ್ಯಾಲಿಫೋರ್ನಿಯಾ (ಜು.25) ಗೂಗಲ್ ಸಿಇಒ ಸುಂದರ್ ಪಿಚೈ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇದೀಗ ಸುಂದರ್ ಪಿಚೈ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಸುಂದರ್ ಪಿಚೈ ಇದೀಗ ಬಿಲೆನಿಯರ್ ಪಟ್ಟಿಗೆ ಸೇರಿಕೊಂಡಿದ್ದಾರೆ. ಸುಂದರ್ ಪಿಚೈ ಆಸ್ತಿಯಲ್ಲಿ ಭಾರಿ ಏರಿಕೆಯಾಗಿದೆ. ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿದ ಶ್ರೀಮಂತರ ಪಟ್ಟಿಯಲ್ಲಿ ಸುಂದರ್ ಪಿಚೈ ಆಸ್ತಿ 1.1 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಶ್ರೀಮಂತರ ಬಿಲೆನಿಯರ್ ಪಟ್ಟಿಯಲ್ಲಿ ಸುಂದರ್ ಪಿಚೈ ಕೂಡ ಕಾಣಿಸಿಕೊಂಡಿದ್ದಾರೆ. ಕಳೆದೆರಡು ವರ್ಷದಲ್ಲಿ ಸುಂದರ್ ಪಿಚೈ ವೇತನದಲ್ಲಿ ಭಾರಿ ಕುಸಿತವಾಗಿದೆ. ಆದರೂ ಆಸ್ತಿಯಲ್ಲಿ ಏರಿಕೆಯಾಗಿದೆ.
ಸುಂದರ್ ಪಿಚೈ ಆಸ್ತಿ 1.1 ಬಿಲಿಯನ್ ಅಮೆರಿಕನ್ ಡಾಲರ್
ಬ್ಲೂಮ್‌ಬರ್ಗ್ ವರದಿ ಪ್ರಕಾರ ಪಿಚೈ ಒಟ್ಟು ಆಸ್ತಿ 1.1 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಪಿಚೈ ಆಸ್ತಿ 1.2 ಬಿಲಿಯನ್ ಅಮರಿಕನ್ ಡಾಲರ್ ಎಂದಿದೆ. ಒಟ್ಟಾರೆ ಪಿಚೈ ಆಶ್ತಿ 1 ಬಿಲಿಯನ್ ದಾಟಿರುವುದ ಸತ್ಯ. ದೈತ್ಯ ಟೆಕ್ ಕಂಪನಿಯ ಸಿಇಒ ಆಗಿರುವ ಸುಂದರ್ ಪಿಚೈ ಇದೀಗ ಆಗರ್ಭ ಶ್ರೀಮಂತನಾಗಿ ಗುರುತಿಸಿಕೊಂಡಿದ್ದಾರೆ.
ಕಳೆದೆರಡು ವರ್ಷದಲ್ಲಿ ಪಿಚೈ ವೇತನ ಗಣನೀಯವಾಗಿ ಕುಸಿತ
ಕಳೆದೆರಡು ವರ್ಷದಲ್ಲಿ ಸುಂದರ್ ಪಿಚೈ ವೇತನ ಭಾರಿ ಕುಸಿತ ಕಂಡಿದೆ. 2024 ಹಾಗೂ 2025ರಲ್ಲಿ ಸುಂದರ್ ಪಿಚೈ ಸ್ಯಾಲರಿ ಭಾರಿ ಕಡಿತಗೊಂಡಿದೆ. 2022ರಲ್ಲಿ ಸುಂದರ್ ಪಿಚೈ ವಾರ್ಷಿಕ ಒಟ್ಟು ವೇತನ 226 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಆದರೆ 2024ರಲ್ಲಿ ಸುಂದರ್ ಪಿಚೈ ವಾರ್ಷಿಕ ಒಟ್ಟು ವೇತನ ಕೇವಲ 10.72 ಮಿಲಿಯನ್ ಅಮೆರಿಕನ್ ಡಾಲರ್ ಮಾತ್ರ. ಇನ್ನು ಈ ವರ್ಷವೂ ಪಿಚೈ ಸ್ಯಾಲರಿ ಮತ್ತಷ್ಟು ಕುಸಿತವಾಗಿದೆ ಎಂದು ಗೂಗಲ್ ವೇತನ ಪಟ್ಟಿ ಹೇಳುತ್ತಿದೆ.
2024ರಲ್ಲಿ ಪಿಚೈ ಭದ್ರತೆ ಹಾಗೂ ಇತರ ವೆಚ್ಚಕ್ಕೆ ದುಬಾರಿ ಖರ್ಚು
2024ರ ಸಾಲಿನಲ್ಲಿ ಸುಂದರ್ ಪಿಚೈ ಭದ್ರತೆ, ಮನೆಯಲ್ಲಿನ ಭದ್ರತೆ, ಕಾರು, ಚಾಲಕ, ಇತರ ಸೇವೆ ಸೇರಿದಂತೆ ಶೇಕಡಾ 22 ರಷ್ಟು ಮೊತ್ತವನ್ನು ಗೂಗಲ್ ಕಂಪನಿ ವೆಚ್ಚ ಮಾಡಿದೆ. ಈ ಪೈಕಿ ಸೆಕ್ಯೂರಿಟಿಗಾಗಿ 8.27 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ನೀಡಿದೆ. ಪ್ರಯಾಣದ ವೇಳೆ ಪರ್ಸನಲ್ ಸೆಕ್ಯೂರಿಟಿಗೂ ಕಂಪನಿ ಹಣ ನೀಡಿದೆ.
ಸುಂದರ್ ಪಿಚೈ ಆಸ್ತಿ ಏರಿಕೆಯಾಗಿದ್ದು ಹೇಗೆ?
ಸುಂದರ್ ಪಿಚೈ ವಾರ್ಷಿಕ ಆದಾಯ ಇಳಿಕೆಯಾಗಿದೆ. ಸ್ಯಾಲರಿಯಲ್ಲಿ ಭಾರಿ ವ್ಯತ್ಯಸವಾಗಿದೆ. ಆದರೂ ಸುಂದರ್ ಪಿಚೈ ಆಸ್ತಿ 1 ಬಿಲಿಯನ್ ಗಡಿ ದಾಟಿದ್ದು ಹೇಗೆ ಅನ್ನೋದು ಬಹಿರಂಗವಾಗಿದೆ. ಕಳೆದೆರಡು ವರ್ಷದಲ್ಲಿ ಆಲ್ಭಾಬೆಟ್ (ಗೂಗಲ್ ಪೇರೆಂಟ್ ಕಂಪನಿ) ಷೇರುಮಾರುಕಟ್ಟೆಯಲ್ಲಿ ತನ್ನ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಗೂಗಲ್ ಷೇರುಗಳಲ್ಲಿ ಪಾಲುಹೊಂದಿರುವ ಸುಂದರ್ ಪಿಚೈ ಆದಾಯದಲ್ಲೂ ಏರಿಕೆಯಾಗಿದೆ. ಸುಂದರ್ ಪಿಚೈ ಆಲ್ಭಾಬೆಟ್‌ನಲ್ಲಿ ಶೇಕಡಾ 0.02ರಷ್ಟು ಷೇರು ಪಾಲು ಹೊಂದಿದ್ದಾರೆ.
