ಇಡೀ ದೇಶವೇ ಹೊಸ ವರ್ಷ ಎದಿರು ನೋಡುತ್ತಿದ್ದರೆ ಕೇಂದ್ರ ಸರಕಾರ ಜನತೆಗೆ ಹೊಸ ವರ್ಷಕ್ಕೂ ಮುನ್ನವೇ ಕೊಡುಗೆ ನೀಡಿದೆ. ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ.

ನವದೆಹಲಿ[ಡಿ.31] ಹೊಸ ವರ್ಷದ ಮುನ್ನಾ ದಿನ ಎಲ್‌ಪಿಜಿ ಸಿಲಿಂಡರ್‌ ದರ 5.91 ರೂಪಾಯಿ ಕಡಿಮೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಅಂತಾರಾಷ್ಟ್ರೀಯ ಮಟ್ಟದ ದರಕ್ಕೆ ಅನುಗುಣವಾಘಿ ಇಳಿಕೆಯಾಗಿದೆ.

ಇನ್ನು ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಕೂಡ ಕಡಿಯೆಮಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ 120 ರೂ. ಕಡಿಮೆಯಾಗಿದೆ. ಬೆಂಗಳೂರಲ್ಲಿ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ದರ ಸದ್ಯ 811 ರೂ. ಇದೆ.

ಒಟ್ಟಿನಲ್ಲಿ ಇಂಧನ ದರ ಸಹ ಕಳೆದ 15 ದಿನಗಳಿಂದ ನಿರಂತರ ಇಳಿಕೆಯಾಗುತ್ತಿತ್ತು. ಈಗ ಎಲ್‌ಪಿಜಿ ಸಹ ಇಳಿಕೆಯಾಗಿದ್ದು ವರ್ಷಾಂತ್ಯಕ್ಕೆ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಿದೆ.