Asianet Suvarna News Asianet Suvarna News

Gold Rate: ಚಿನ್ನ,ಬೆಳ್ಳಿ ದರದಲ್ಲಿ ಕುಸಿತ, ಗ್ರಾಹಕರ ಮೊಗದಲ್ಲಿ ಹರುಷ

ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ರೆ, ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಓಮಿಕ್ರಾನ್ (Omicron) ವೈರಸ್ (Virus) ಭೀತಿ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಇನ್ನಷ್ಟು ಇಳಿಕೆಯಾಗೋ ನಿರೀಕ್ಷೆಯಿದೆ. 

Good news for gold silver buyers, decrease in rate Nov 30 2021
Author
Bangalore, First Published Nov 30, 2021, 11:59 AM IST
  • Facebook
  • Twitter
  • Whatsapp

ಬೆಂಗಳೂರು (ನ.30):  ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ(Silver) ದರ (Price) ಇಂದು(ನ.30) ಇಳಿಕೆ ದಾಖಲಿಸಿದ್ರೆ, ಚಿನ್ನದ (Gold) ಬೆಲೆಯಲ್ಲಿ ಕೂಡ ಕೊಂಚ ಇಳಿಕೆ ಕಂಡುಬಂದಿದೆ. ಕಳೆದ ವಾರಾಂತ್ಯದಲ್ಲಿ ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡಿತ್ತು. ಈ ಬೆಳವಣಿಗೆ ಈ ವಾರವೂ ಮುಂದುವರಿದಿದೆ. ಹೀಗಾಗಿ ನೀವು ಬೆಳ್ಳಿ ಖರೀದಿಸೋ ಯೋಚನೆಯಲ್ಲಿದ್ರೆ   ಇದು ಸುಸಮಯ. ಇನ್ನು ಚಿನ್ನ ಕೂಡ ಅಲ್ಪ ಇಳಿಕೆಯತ್ತ ಮುಖ ಮಾಡಿದ್ದು, ಬಂಗಾರದ ಒಡವೆಗಳನ್ನು ಖರೀದಿಸೋ ಯೋಚನೆಯಲ್ಲಿರೋರು ಒಂದೆರಡು ದಿನ ಕಾದು ನೋಡೋದು ಉತ್ತಮ. ಏಕೆಂದ್ರೆ ಜಗತ್ತಿನಾದ್ಯಂತ ಓಮಿಕ್ರಾನ್ (Omicron) ವೈರಸ್ (Virus) ಭೀತಿ ಹೆಚ್ಚಿದ್ದು, ಇದು ಚಿನ್ನದ ಬೇಡಿಕೆ ಮೇಲೂ ಪರಿಣಾಮ ಬೀರೋ ನಿರೀಕ್ಷೆಯಿದೆ. ಬೇಡಿಕೆ ತಗ್ಗಿದ್ರೆ ಬೆಲೆಯಲ್ಲಿಯೂ ಇಳಿಕೆ ಕಂಡುಬರೋ ಸಾಧ್ಯತೆಯಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ? 

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಇಂದು ನಿನ್ನೆಗಿಂತ ಸ್ವಲ್ಪ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಇಂದು 100ರೂ. ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,850ರೂ.ಇದ್ರೆ ನಿನ್ನೆ 44,950ರೂ.ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,040 ರೂ.ಇದ್ದು,ಇಂದು 48,930 ರೂ.ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 11೦ರೂ. ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ನಿನ್ನೆಗಿಂತ ಇಂದು 1,100ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,200ರೂ.ಇತ್ತು. ಆದ್ರೆ ಇಂದು 61,600ರೂ. ಆಗಿದೆ.

ನೀವಿನ್ನೂ ಈ ಅಪ್ಡೇಟ್‌ ಮಾಡದಿದ್ದರೆ, ಮುಂದಿನ ತಿಂಗಳಿನಿಂದ EPF ಹಣ ಬಂದ್!

"

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,090ರೂ.ಆಗಿದ್ದು, ನಿನ್ನೆ47,100ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ.ಇಳಿಕೆಯಾಗಿದೆ. ನಿನ್ನೆ 51,380 ರೂ. ಇತ್ತು,ಇಂದು 51,370 ರೂ. ಆಗಿದೆ. ಆದ್ರೆ ಬೆಳ್ಳಿ ದರದಲ್ಲಿ 1,100ರೂ.ಇಳಿಕೆಯಾಗಿದೆ. ನಿನ್ನೆ ಒಂದು ಕೆ.ಜಿ. ಬೆಳ್ಳಿಗೆ 62,700ರೂ.ಇತ್ತು. ಆದ್ರೆ ಇಂದು 61,600ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,310ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ48,310 ರೂ. ಇತ್ತು,ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,700 ರೂ. ಇತ್ತು.ಆದ್ರೆ ಇಂದು 61,600ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 1,100 ರೂ. ಇಳಿಕೆಯಾಗಿದೆ.

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,150ರೂ. ಇದೆ. ನಿನ್ನೆ 45,380ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 230ರೂ.ಇಳಿಕೆಯಾಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 245ರೂ. ಇಳಿಕೆಯಾಗಿದೆ. ನಿನ್ನೆ 49,505 ರೂ.ಇತ್ತು,ಇಂದು 49,260 ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 66,500 ರೂ. ಇತ್ತು. ಆದ್ರೆ ಇಂದು 67,600ರೂ. ಆಗಿದೆ.ಅಂದ್ರೆ 1,100ರೂ.ಇಳಿಕೆಯಾಗಿದೆ.

"

Follow Us:
Download App:
  • android
  • ios