ಗಗನಕ್ಕೇರಿದ ಬಂಗಾರದ ಬೆಲೆ! 10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ. ಏರಿಕೆ!  ರೂಪಾಯಿ ಮೌಲ್ಯ ಕುಸಿತವೇ ಬೆಲೆ ಏರಿಕೆಗೆ ಕಾರಣ! ಸ್ಥಳೀಯ ಆಭರಣ ತಯಾರಕರಿಂದ ಹೆಚ್ಚಿದ ಬೇಡಿಕೆ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ 

ನವದೆಹಲಿ(ಅ.5): ಕೆಲ ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ ಏರಿಕೆ ಕಾಣುವ ಮೂಲಕ 32,030 ರೂ.ಗೆ ತಲುಪಿದೆ.

Add Asianetnews Kannada as a Preferred SourcegooglePreferred

ಹಬ್ಬದ ಸಿರೀಸ್ ಆರಂಭವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಆಭರಣ ತಯಾರಕರಿಂದ ಹೆಚ್ಚಿದ ಬೇಡಿಕೆ ಹೆಚ್ಚಿದ್ದರಿಂದ ಬಂಗಾರದ ಬೆಲೆಯಲ್ಲಿ ಇವತ್ತು ಏರಿಕೆ ಕಂಡಿದೆ. ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡು ಬಂದ ಪರಿಣಾಮ ಇದು ಸ್ಥಳೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ 73.41 ರೂ.ಗೆ ಕುಸಿತ ಕಂಡು ಬಂದಿದ್ದರಿಂದ ಚಿನ್ನದ ಬೆಲೆ ಏರಿಕೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಚೀನಿವಾರ ಪೇಟೆಯಲ್ಲಿ 99.9 ರಷ್ಟು 10 ಗ್ರಾಂ ಪರಿಶುದ್ಧ ಬಂಗಾರಕ್ಕೆ 32,030 ಹಾಗೂ 99.5 ರಷ್ಟು ಪ್ಯೂರಿಟಿಯ ಶುದ್ಧ ಬಂಗಾರಕ್ಕೆ 31880 ರೂ. ಕ್ಕೆ ಮಾರಾಟವಾಗಿದೆ.