Asianet Suvarna News Asianet Suvarna News

ಗುಡ್ ನ್ಯೂಸ್ : ಕುಸಿಯಿತು ಚಿನ್ನದ ಬೆಲೆ

ಜಾಗತಿಕವಾಗಿ ನಿರಂತರವಾಗಿ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಅದರಂತೆ ಇದೀಗ ಬೇಡಿಕೆ ಕುಸಿತದ ಪರಿಣಾಮ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

Gold Softened By Weak Trend
Author
Bengaluru, First Published Sep 20, 2018, 3:30 PM IST

ಮುಂಬೈ : ಜಾಗತಿಕ ಬೇಡಿಕೆಗೆ ಅನುಗುಣವಾಗಿ ಹಳದಿ ಲೋಹದ ಬೆಲೆಯಲ್ಲಿ ನಿರಂತರವಾಗಿ ಏರಳಿತವಾಗುತ್ತಿರುವುತ್ತದೆ. ಇದೀಗ ಮತ್ತೊಮ್ಮೆ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

 10 ಗ್ರಾಂ ಚಿನ್ನದ ಮೇಲೆ 10 ರು.ನಷ್ಟು ಇಳಿಕೆಯಾಗಿದ್ದು, ಇದರಿಂದ ಪ್ರತೀ 10 ಗ್ರಾಂ ಚಿನ್ನದ ಬೆಲೆಯು 31,650 ರು.ನಷ್ಟಾಗಿದೆ.  ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಪ್ರಮಾಣ ಕಡಿಮೆಯಾದ ನಿಟ್ಟಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 

ಇನ್ನು ಇದೇ  ವೇಳೆ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 1 ಕೆಜಿ ಬೆಳ್ಳಿಯ ಬೆಲೆಯ ಮೇಲೆ 100 ರು. ಏರಿಕೆಯಾಗಿದ್ದು, ಇದರಿಂದ ಪ್ರತೀ ಕೆಜಿ ಬೆಳ್ಳಿ ದರ 38,100 ರು.ನಷ್ಟಾದಂತಾಗಿದೆ. ನಾಣ್ಯ ತಯಾರಕರಿಂದ ಬೇಡಿಕೆ ಇರುವ ಪರಿಣಾಮವಾಗಿ ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟಗಾರರಿಂದ ಚಿನ್ನ ಕೊಳ್ಳುವ ಪ್ರಮಾಣ ಕುಸಿತವಾಗಿದೆ.  ಬೇಡಿಕೆ ಕುಸಿದ ಪರಿಣಾಮ ಬೆಲೆಯಲ್ಲಿಯೂ ಕುಸಿತ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Follow Us:
Download App:
  • android
  • ios