ಬೆಂಗಳೂರು(ಸೆ. 08) ಚಿನ್ನ ಮತ್ತು ಬೆಳ್ಳಿಯ ದರ ಮಂಗಳವಾರದ ಮಾರುಕಟ್ಟೆಯಲ್ಲಿ ಕೊಂಚ ಇಳಿಕೆ ದಾಖಲಿಸಿವೆ.  ಶೇ. 0.5 ಕುಸಿತ ಕಂಡ ಗೋಲ್ಡ್ ಪ್ಯೂಚರ್ಸ್ 50,803 (10 ಗ್ರಾಂ) ರೂ. ನಲ್ಲಿ ವಹಿವಾಟು ನಡೆಸಿದೆ. ಸಿಲ್ವರ್ ಪ್ಯೂಚರ್ಸ್ ಸಹ ಶೇ. 0.6 ಕುಸಿತ ಕಂಡಿದ್ದು 67,850(ಕೆಜಿ) ವಹಿವಾಟು ನಡೆಸಿದೆ.

ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಚಿನ್ನದ ದರ ಬರೋಬ್ಬರಿ ಐದು ಸಾವಿರ ರೂ. ಕಡಿಮೆ ಆದಂತಾಗಿದೆ.  ಆದರೆ  ಬೆಂಗಳೂರಿನ ಮಾರುಕಟ್ಟೆ ಮೇಲೆ ಇದು ಯಾವ ಪರಿಣಾಮ ಬೀರಿಲ್ಲ.

ಕಷ್ಟಕಾಲದಲ್ಲಿ ಗೋಲ್ಡ್ ಲೋನ್ ಪಡೆಯಲು ಹೀಗೆ ಮಾಡಿ

ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 150 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 48,300 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  ಸಹ 150  ರೂಪಾಯಿ ಏರಿಕೆ ಕಂಡಿದ್ದು, 52, 670 ರೂಪಾಯಿ ಆಗಿದೆ. 

ಆದರೆ ಬೆಳ್ಳಿ ದರ 100 ರೂ.ಕಡಿಮೆಯಾಗಿದೆ. ಕೆಜಿ ಬೆಳ್ಳಿ ಬೆಲೆ 68000 ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ಯೂಚರ್ಸ್ ಇಳಿಕೆ ಕಂಡಿದ್ದರೂ ಸ್ಥಳೀಯ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಆಗಿಲ್ಲ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ದರ ನಿಧಾನ ಏರುಗತಿಯಲ್ಲಿದೆ ಎಂದಷ್ಟೆ ಹೇಳಬಹುದು.