ಬೆಂಗಳೂರು(ಡಿ.28): ದೀಪಾವಳಿ ಹಬ್ಬದ ಬಳಿಕ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರ, ಸದ್ಯ ಕೊಂಚ ಏರಲಾರಂಭಿಸಿದೆ. ಈ ಮೂಲಕ ಬಂಗಾರ ಬೆಲೆ ಇಳಿಯಬಹುದೆಂದು ಕಾದವರಿಗೆ ಕೊಂಚ ನಿರಾಸೆಯಾಗಿದೆ. ಇಲ್ಲಿದೆ ನೋಡಿ ಡಿ. 17ರ ರೇಟ್

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 390ರೂ. ಏರಿಕೆಯಾಗಿ 47,100 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 350ರೂ. ಏರಿಕೆಯಾಗಿ, 51,300 ರೂಪಾಯಿ ಆಗಿದೆ. 

ಅಪರಿಚಿತರಿಂದ ಬ್ಯಾಂಕ್ ಖಾತೆಗೆ ಬಂತು 18.60 ಲಕ್ಷ ರು : ಆಮೇಲೇನಾಯ್ತು..?

ಇನ್ನು ಇತ್ತ ಬೆಳ್ಳಿ ದರವೂ 1,700ರೂ ಏರಿಕೆಯಾಗಿ, ಒಂದು ಕೆ. ಜಿ ಬೆಳ್ಳಿ ಬೆಲೆ 69,300 ರೂ. ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.