ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ದರ| ಹಾವು ಏಣಿ ಆಟವಾಡುತ್ತಿದ್ದ ಬಂಗಾರ ದರ ಮತ್ತೆ ಏರಿಕೆ| ಇಲ್ಲಿದೆ ನೋಡಿ ಅಕ್ಟೋಬರ್ 21ರ ದರ

ಬೆಂಗಳೂರು(ಅ.21): ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಈ ಮೂಲಕ ಕೊರೋನಾ ನಡುವೆ ಚಿನ್ನ ಖರೀದಿಸಲು ಸಜ್ಜಾದವರಿಗೆ ನಿರಾಸೆಯುಂಟು ಮಾಡಿದೆ. ಹೌದು ಲಾಕ್‌ಡೌನ್ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನ, ಬೆಳ್ಳಿ ದರ ತದ ನಂತರ ಕೊಂಚ ಇಳಿಕೆಯಾಗಿತ್ತು. ಹೀಗಿದ್ದರೂ ಹಾವೇಣಿ ಆಟ ಮುಂದುವರೆಸಿತ್ತು. ಇದು ಚಿನ್ನ ಖರೀದಿಸಲು ಸಜ್ಜಾದವರನ್ನು ಆತಂಕಕ್ಕೀಡು ಮಾಡಿತ್ತು. ಸದ್ಯ ಈ ತನ್ನ ಆವನ್ನು ಚಿನ್ನ, ಬೆಳ್ಳಿ ದರ ಮುಂದುವರೆಸಿವೆ ಇಲ್ಲಿದೆ ನೋಡಿ ಅಕ್ಟೋಬರ್ 21ರ ದರ ಪಟ್ಟಿ

Add Asianetnews Kannada as a Preferred SourcegooglePreferred

ಇಂದು ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 350 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,050 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 170 ರೂಪಾಯಿ ಏರಿಕೆ ಕಂಡಿದ್ದು, 51,3200 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲಿ ಬರೋಬ್ಬರಿ 1,500 ರೂ. ಏರಿಕೆಯಾಗಿದೆ. ಒಂದು ಕೆ. ಜಿ ಬೆಳ್ಳಿಯ ಬೆಲೆ 63,500 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ