ನವದೆಹಲಿ[ಜೂ.24]: ಆಷಾಡ ಬಂತು ಕಾರ್ಯಕ್ರಮಗಳೂ ನಿಂತಿವೆ, ಇನ್ನೇನು ಚಿನ್ನದ ಬೆಲೆ ಇಳಿಯುತ್ತದೆ ಎಂದು ಕಾದಿರುವವರಿಗೆ ಇದು ಕಹಿ ಸುದ್ದಿ. ತಿಳಿಕೆಯಾಗಬೇಕಿದ್ದ ಚಿನ್ನದ ದರದಲ್ಲಿ ಭಾರೀ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಷ್ಟಕ್ಕೂ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರವೇನು? ಚಿನ್ನದ ಬೆಲೆ ಹೆಚ್ಚಾಗಲು ಕಾರಣವೇನು? ಇಲ್ಲಿದೆ ವಿವರ

ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರ:

ಬೆಂಗಳೂರಿನಲ್ಲಿ 22 ಕ್ಯಾರೆಟ್, 10 ಗ್ರಾಂ ಚಿನ್ನದ ದರ 31,950 ರೂಪಾಯಿ ಹಾಗೂ 24 ಕ್ಯಾರೆಟ್, 10 ಗ್ರಾಂ ಚಿನ್ನದ ದರ 34,800 ರೂಪಾಯಿ ಆಗಿದೆ.

ಬೆಳ್ಳಿ ದರ ಎಷ್ಟು ಎಂದು ಗಮನಿಸುವುದಾದರೆ, ಒಂದು ಕೆ. ಜಿಗೆ 40,360 ರೂಪಾಯಿ ನಿಗದಿಯಾಗಿದೆ.

ದೆಹಲಿಯಲ್ಲಿ ಚಿನ್ನ ಹಾಗೂ ಬೆಳ್ಳಿ ದರ:

ರಾಷ್ಟ್ರ ರಾಜಧಾನಿ 22 ಕ್ಯಾರೆಟ್, 10 ಗ್ರಾಂ ಚಿನ್ನದ ದರ 33,350 ರೂಪಾಯಿ ಹಾಗೂ 24 ಕ್ಯಾರೆಟ್, 10 ಗ್ರಾಂ ಚಿನ್ನದ ದರ 34,550 ರೂಪಾಯಿ ಆಗಿದೆ.

ಬೆಳ್ಳಿ ದರ ಎಷ್ಟು ಎಂದು ಗಮನಿಸುವುದಾದರೆ, ಒಂದು ಕೆ. ಜಿಗೆ 40,360 ರೂಪಾಯಿ ನಿಗದಿಯಾಗಿದೆ.

ಜೂನ್ ಆರಂಭದಲ್ಲಿ 10 ಗ್ರಾಂ ಚಿನ್ನದ ದರ 32,500 ಇತ್ತು ಆದರೆ ಇದೀಗ ಬೆಲೆ ನಿರಂತರವಾಗಿ ಏಕರಿಕೆಯಗುತ್ತಿದೆ. 2013 ರ ಆಗಸ್ಟ್ ನಲ್ಲಿ 10 ಗ್ರಾಂ ಚಿನ್ನದ ದರ 35,000 ರೂಪಾಯಿಯಾಗಿತ್ತು. ಆ ಬಳಿಕ ಚಿನ್ನದ ದರ ಇಳಿಕೆಯ ಹಾದಿ ಕಂಡಿತ್ತು ಹಾಗೂ 2018ರಲ್ಲಿ 27,000 ರೂಪಾಯಿ ಆಗಿತ್ತು.

ಚಿನ್ನದ ದರವೇಕೆ ಏರುತ್ತಿದೆ?

ಅಮೆರಿಕಾದ ಕೇಂದ್ರೀಯ ಬ್ಯಾಂಕ್​ ಫೆಡರಲ್​ ರಿಸರ್ವ್​  ವರ್ಷ ಬಡ್ಡಿ ದರ ಕಡಿತಗೊಳಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದೆ ಎಂಬುವುದು ತಜ್ಞರ ಅಭಿಪ್ರಾಯ. 

ಚಿನ್ನವು ಭವಿಷ್ಯದ ಸುರಕ್ಷಿತ ಹೂಡಿಕೆಯಾಗಿದ್ದು, ದಿನೇ ದಿನೇ ಬೇಡಿಕೆ ಹೆಚ್ಚುತ್ತಲೇ ಇದೆ. ಜೂನ್​ ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಗುತ್ತಿದೆ. ಬಂಡವಾಳಗಾರರು ಕೂಡ ಚಿನ್ನ ಖರೀದಿಸಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಹಲವು ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳೂ ಚಿನ್ನ ಖರೀದಿಗೆ ಮುಂದಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ ಎನ್ನಲಾಗಿದೆ.