ನವದೆಹಲಿ(ಜು.27): ಕಳೆದ ಕೆಲ ವಾರಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಏರುತ್ತಿದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಬೆಲೆ ಏರುತ್ತಿರುವ ಪರಿಣಾಮ Multi Commodity Exchange ನಲ್ಲಿ ಗೋಲ್ಡ್‌ ಫ್ಯೂಚರ್ ರೇಟ್‌ನಲ್ಲಿಸೋಮವಾರದ ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಿದೆ. ಬರೋಬ್ಬರಿ 800 ರೂ ಬೆಲೆ ಏರಿಕೆಯಾಗಿದ್ದು, ಹತ್ತು ಗ್ರಾಂ ಚಿನ್ನದ ಬೆಲೆ 51,833 ರೂ. ನಿಗಧಿಯಾಗಿದೆ. ಇದು ಚಿನ್ನದ ಬೆಲೆಯಲ್ಲಿ ಈವರೆಗಿನ ಗರಿಷ್ಟವಾಗಿದೆ.

3400ರೂ. ಏರಿಕೆಯಾಗಿ ಕೆ. ಜಿ ಬೆಳ್ಳಿಗೆ 64,617ರೂ.

ಅತ್ತ ಚಿನ್ನದ ಬೆಲೆ ಏರಿಕೆ ಬೆನ್ನಲ್ಲೇ ಇತ್ತ ಬೆಳ್ಳಿಯ ಬೆಲೆಯೂ ಸಾರಾಗವಾಗಿ ಏರುತ್ತಿದೆ. ಇಂದಿನ ವಹಿವಾಟಿನಲ್ಲಿ 3400ರೂ. ಏರಿಕೆಯಾಗಿ ಕೆ. ಜಿ ಬೆಳ್ಳಿಗೆ 64,617ರೂ. ನಿಗಧಿಯಾಗಿದೆ. ಇದು ಕಳೆದ ಎಂಟು ವರ್ಷದಲ್ಲೇ ಅತಿ ಹೆಚ್ಚು ಎನ್ನಲಾಗಿದೆ.

ಶುಕ್ರವಾರದಂದು ಹತ್ತು ಗ್ರಾಂ ಚಿನ್ನದ ಬೆಲೆ 50876ರೂ ಹಾಗೂ ಬೆಳ್ಳಿ ಬೆಲೆ 61,173 ರೂ. ನಿಗಧಿಯಾಗಿ ವಹಿವಾಟು ಸ್ಥಗಿತಗೊಂಡಿತ್ತು.