ಮುಂಬೈ[ಮಾ.14]: ಮಾರಣಾಂತಿಕ ಕೊರೋನಾ ವೈರಸ್‌ ಶುಕ್ರವಾರವೂ ಚಿನಿವಾರ ಪೇಟೆಗೂ ಭರ್ಜರಿ ಹೊಡೆತ ನೀಡಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ 10 ಗ್ರಾಂ ಚಿನ್ನದ ದರವು 1097 ರು. ಕುಸಿತವಾಗಿ ಗುರುವಾರ 43,697 ರು. ಇದ್ದ 10 ಗ್ರಾಂ ಚಿನ್ನದ ಬೆಲೆ ಶುಕ್ರವಾರ 42,600 ರು.ಗೆ ಕುಸಿದಿದೆ.

ಚಿನ್ನದ ವಿನಿಮಯಕ್ಕೆ ಮಧ್ಯವರ್ತಿಗಳು ಹೆಚ್ಚಿನ ಲಾಭಾಂಶ ಕೇಳಿದ ಪರಿಣಾಮ ಚಿನ್ನದ ಬೆಲೆ ಮುಗ್ಗರಿಸಲು ಕಾರಣವಾಯಿತು ಎನ್ನಲಾಗಿದೆ. ಅಲ್ಲದೆ, ಪ್ರತೀ ಕೇಜಿ ಬೆಳ್ಳಿ ದರ 1574 ರು. ಇಳಿಕೆಯಾಗಿದ್ದು, ಗುರುವಾರ 45,705 ರು. ಇದ್ದ ಕೇಜಿ ಬೆಳ್ಳಿ ಬೆಲೆ ಶುಕ್ರವಾರ 44,130ಕ್ಕೆ ಇಳಿದಿದೆ.

ಷೇರುಪೇಟೆಯಲ್ಲಿ ಪಾತಾಳ ಗರಡಿ! ನೆಲಕಚ್ಚಿ ಪುಟಿದೆದ್ದ ಸೆನ್ಸೆಕ್ಸ್‌

ಷೇರು ಮಾರುಕಟ್ಟೆಗಳು ಭಾರೀ ಪ್ರಮಾಣದಲ್ಲಿ ಕುಸಿಯುವ ಹಾದಿಯಲ್ಲಿದ್ದಾಗಲೂ, ಚಿನ್ನ ಮತ್ತು ಬೆಳ್ಳಿಯನ್ನು ಹೂಡಿಕೆಯ ಸ್ವರ್ಗ ಎಂದು ಭಾವಿಸಲಾಗುತ್ತದೆ. ಆದರೆ, ಕೊರೋನಾ ಪರಿಣಾಮದಿಂದ ಚಿನ್ನ ಮತ್ತು ಬೆಳ್ಳಿಯ ದರಗಳು ನಷ್ಟದ ಹಾದಿಯತ್ತ ಹೊರಳುತ್ತಿವೆ ಎಂದು ಮಾರುಕಟ್ಟೆತಜ್ಞರು ಅಭಿಪ್ರಾಯಪಟ್ಟಿದ್ದಾರೆ.