Asianet Suvarna News Asianet Suvarna News

Gold Silver Price: ಸಂಕ್ರಾಂತಿ ಹಬ್ಬಕ್ಕೆ ಆಭರಣ ಖರೀದಿಸುತ್ತಿದ್ದೀರಾ? ರಾಜ್ಯದಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಹೀಗಿದೆ ನೋಡಿ

ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರೋದು ಚಿನ್ನ ಹಾಗೂ ಬೆಳ್ಳಿ ಬೇಡಿಕೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ.ಇಂದು ರಾಜ್ಯದಲ್ಲಿ ಚಿನ್ನದ ದರ ಏರಿಕೆಯಾಗಿದ್ದು,ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 

Gold price hike silver price drop in Bangalore check todays gold silver price in major cities of India Jan 14 2022
Author
Bangalore, First Published Jan 14, 2022, 3:45 PM IST

ಬೆಂಗಳೂರು (ಜ.14): ಕೋವಿಡ್ -19 (COVID-19) ಮೂರನೇ ಅಲೆ ದೇಶಾದ್ಯಂತ ಪ್ರಾರಂಭವಾಗಿದೆ. ರಾಜ್ಯದಲ್ಲಿ ಕೂಡ ಕೊರೋನಾ (Corona) ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಇದು ಜನರ ಭೀತಿಗೆ ಕಾರಣವಾಗಿದ್ದು,ಈಗಾಗಲೇ ಆಫೀಸ್ ಪ್ರಾರಂಭಿಸಿದ ಕಂಪನಿಗಳು ಕೂಡ ಮತ್ತೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಿವೆ. ಹೀಗಾಗಿ ಜನರ ಓಡಾಟಕ್ಕೆ ಸ್ವಲ್ಪ ಮಟ್ಟಿಗೆ ಬ್ರೇಕ್ ಬಿದ್ದಿದೆ. ಇನ್ನು ಚಿನ್ನ(Gold) ಹಾಗೂ ಬೆಳ್ಳಿಯನ್ನು(Silver) ಸಂಕ್ರಾಂತಿ ಹಬ್ಬಕ್ಕೆ ಖರೀದಿಸಬೇಕೆಂದು ಅನೇಕರು ಯೋಜನೆ ರೂಪಿಸಿಕೊಂಡಿರುತ್ತಾರೆ. ಅಂಥವರು ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರೋದ್ರಿಂದ ಚಿನ್ನ(Gold) ಹಾಗೂ ಬೆಳ್ಳಿ (Silver) ಖರೀದಿಯನ್ನು ಮುಂದೂಡಿರಬಹುದು. ಆದ್ರೆ ಇನ್ನೂ ಕೆಲವರು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಶುಕ್ರವಾರ (Friday)ಶುಭದಿನವೆಂದು ಚಿನ್ನ (Gold) ಹಾಗೂ ಬೆಳ್ಳಿ (Silver) ಖರೀದಿಸಲು (Purchase) ಮುಂದಾಗಿರಬಹುದು. ಅಂಥವರಿಗೆ ಇಂದು ತುಸು ನೆಮ್ಮದಿಯ ಅನುಭವ. ಏಕೆಂದ್ರೆ ಇಂದು ಬೆಂಗಳೂರಿನಲ್ಲಿ(Bengaluru) ಬಂಗಾರದ ದರ (Price) 10ಗ್ರಾಂಗೆ ಕೇವಲ 10ರೂ. ಏರಿಕೆ ಕಂಡಿದೆ. ಇನ್ನು ಬೆಳ್ಳಿಯ(Silver) ದರದಲ್ಲಿ ಕೆ.ಜಿ.ಗೆ  100ರೂ. ಇಳಿಕೆ ಕಂಡುಬಂದಿದೆ. ಕೊರೋನಾ  ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಸರ್ಕಾರ ಶನಿವಾರ ಹಾಗೂ ಭಾನುವಾರ ವೀಕೆಂಡ್ ಕರ್ಫ್ಯೂ(Weekend Curfew) ವಿಧಿಸಿದ್ದು, ಈ ಎರಡು ದಿನ ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆ ಚಿನ್ನ(Gold) ಖರೀದಿಸಲು ಯೋಚಿಸಿರೋರು ಇಂದೇ ಖರೀದಿಸೋದು ಅನಿವಾರ್ಯ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿಇಂದು (ಜ.14) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru) ಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 100ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,010ರೂ.ಇದ್ದು, ನಿನ್ನೆ 45,000ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,100 ರೂ.ಇದ್ದು,ಇಂದು 90ರೂ. ಇಳಿಕೆಯಾಗಿ 49,010ರೂ.ಇದೆ. ಇನ್ನು ಬೆಳ್ಳಿ ದರದಲ್ಲಿಇಂದು 100ರೂ. ಇಳಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 66,000ರೂ.ಇತ್ತು.ಆದ್ರೆ ಇಂದು 100ರೂ. ಇಳಿಕೆಯಾಗಿ 65,900ರೂ. ಇದೆ. 

Petrol Diesel Rate:ಕೊರೋನಾ ಭೀತಿಗೆ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ತಗ್ಗಿದ್ರೂ ಬೆಲೆ ಸ್ಥಿರ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,970ರೂ. ಆಗಿದ್ದು, ನಿನ್ನೆ 46,960ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ 51,220 ರೂ. ಇತ್ತು,ಇಂದು 51,230ರೂ.ಇದೆ. ಬೆಳ್ಳಿ ದರ ಇಂದು ನಿನ್ನೆಯಷ್ಟೇ ಇದೆ. ಒಂದು ಕೆ.ಜಿ.ಬೆಳ್ಳಿಗೆ 62,000ರೂ.ಇದೆ.

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,100ರೂ.ಇದ್ದು,ಇಂದು 10ರೂ. ಏರಿಕೆ ಕಂಡು 47,110ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ49,100ರೂ.ಇತ್ತು,ಇಂದು 10ರೂ. ಏರಿಕೆಯಾಗಿ 49,110ರೂ. ಆಗಿದೆ. ಬೆಳ್ಳಿ ದರ ಇಂದು ನಿನ್ನೆಯಷ್ಟೇ ಇದೆ. ಒಂದು ಕೆ.ಜಿ.ಬೆಳ್ಳಿಗೆ 62,000ರೂ.ಇದೆ.

Budget 2022: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮರುಬಂಡವಾಳೀಕರಣಕ್ಕೆ ಹಣ ಮೀಸಲಿಡೋ ಸಾಧ್ಯತೆ ಕಡಿಮೆ: Icra ವರದಿ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,200ರೂ.ಇದೆ. ನಿನ್ನೆ 45,190ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 10ರೂ.ಏರಿಕೆಯಾಗಿದೆ. ನಿನ್ನೆ 48,200 ರೂ.ಇತ್ತು,ಇಂದು 48,210 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 66,000ರೂ.ಇದ್ದು, ಇಂದು 65,900ರೂ. ಆಗಿದೆ. ಅಂದ್ರೆ 100ರೂ. ಇಳಿಕೆಯಾಗಿದೆ.  

"

Follow Us:
Download App:
  • android
  • ios