Budget 2022: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮರುಬಂಡವಾಳೀಕರಣಕ್ಕೆ ಹಣ ಮೀಸಲಿಡೋ ಸಾಧ್ಯತೆ ಕಡಿಮೆ: Icra ವರದಿ
*ಆಂತರಿಕ ಸಂಚಯನ ಹಾಗೂ ಮಾರುಕಟ್ಟೆಯಲ್ಲಿ ಷೇರು ಮಾರಾಟದಿಂದ ಬ್ಯಾಂಕುಗಳು ಬಂಡವಾಳ ಸಂಗ್ರಹಿಸೋ ಸಾಧ್ಯತೆ
*ಕಳೆದ ಆರು ವರ್ಷಗಳಲ್ಲಿ ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ 3.36 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಹಣ ವ್ಯಯ
*ಬ್ಯಾಂಕುಗಳ ಅನುತ್ಪಾದಕ ಆಸ್ತಿ 2021ರ ಸೆಪ್ಟೆಂಬರ್ ನಲ್ಲಿ ಶೇ.2.8ಕ್ಕೆ ಇಳಿಕೆ
ನವದೆಹಲಿ (ಜ.14): ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದ (Central Government) ಎಂಟನೇ ಬಜೆಟನ್ನು (Budget) ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಕೋವಿಡ್ -19 ನಿಂದ ಗಂಭೀರ ಹಿನ್ನಡೆ ಅನುಭವಿಸಿರೋ ದೇಶದ ಆರ್ಥಿಕತೆಗೆ ಚೇತರಿಕೆ ನೀಡೋದು ಈ ಬಾರಿಯ ಬಜೆಟ್ ಮುಖ್ಯ ಉದ್ದೇಶವಾಗಿರೋದ್ರಲ್ಲಿ ಅನುಮಾನವಿಲ್ಲ. ಹೀಗಾಗಿ ಆರ್ಥಿಕತೆಗೆ (Economy) ಚೇತರಿಕೆ ನೀಡೋ ಅನೇಕ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ (Budget) ಘೋಷಣೆಯಾಗೋ ಸಾಧ್ಯತೆಯಿದೆ. ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ (State owned Banks) ಮರುಬಂಡವಾಳೀಕರಣಕ್ಕೆ (recapitalisation) ಈ ಸಾಲಿನ ಬಜೆಟ್ ನಲ್ಲಿ ಹಣ ಕಾಯ್ದಿರಿಸೋ ಸಾಧ್ಯತೆಯಿಲ್ಲ ಎಂದು ದೇಶೀಯ ರೇಟಿಂಗ್ ಏಜೆನ್ಸಿಯೊಂದು ಹೇಳಿದೆ.
ಬ್ಯಾಂಕುಗಳು ಆಂತರಿಕ ಸಂಚಯದಿಂದ ಹಾಗೂ ಮಾರುಕಟ್ಟೆಯಲ್ಲಿ ಷೇರು (Shares) ಮಾರಾಟದ (Sale) ಮೂಲಕ ಬಂಡವಾಳ (Capital)ಪಡೆಯಲಿವೆ ಎಂದು ರೇಟಿಂಗ್ ಏಜೆನ್ಸಿ Icra ತಿಳಿಸಿದೆ. ಕಳೆದ ಆರು ವರ್ಷಗಳಲ್ಲಿ 3.36 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ (recapitalisation) ವ್ಯಯಿಸಲಾಗಿದೆ. ತೆರಿಗೆದಾರರ (Taxpayers) ಕೃಪೆಯಿಂದ ಸರ್ಕಾರಿ ಬ್ಯಾಂಕುಗಳಿಗೆ (State owned Banks) 3.36ಲಕ್ಷ ಕೋಟಿ ರೂ. ಬಂಡವಾಳವನ್ನು (Capital) ನೀಡಲಾಗಿದೆ. ಇದ್ರಿಂದ ಬ್ಯಾಂಕುಗಳ ಅನುತ್ಪಾದಕ ಆಸ್ತಿ (NPA)2018ರ ಮಾರ್ಚ್ ನಲ್ಲಿ ಶೇ.8ರಿಂದ 2021ರ ಸೆಪ್ಟೆಂಬರ್ ನಲ್ಲಿ ಶೇ.2.8ಕ್ಕೆ ಇಳಿಕೆಯಾಗಿದೆ ಎಂದು Icra ತಿಳಿಸಿದೆ.
Tech Investments Bengaluru: ವಿಶ್ವದಲ್ಲೇ ಬೆಂಗಳೂರಿಗೆ ಟಾಪ್ 5 ಪ್ಲೇಸ್!
'ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು (State owned Banks) ಉತ್ತಮ ಆದಾಯ (Income) ಗಳಿಸುತ್ತಿದ್ದು, ಆರೋಗ್ಯಕರ ಪ್ರಗತಿ ದಾಖಲಿಸುತ್ತಿವೆ. ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಲಾಭದಲ್ಲೇ ನಡೆಯುತ್ತಿದ್ದು, ಆಂತರಿಕವಾಗಿಯೇ ಪ್ರಗತಿಗೆ ಅಗತ್ಯವಾದ ಬಂಡವಾಳವನ್ನು (Capital) ಸೃಷ್ಟಿಸಿಕೊಳ್ಳಬಲ್ಲವು' ಎಂದು Icra ಅಭಿಪ್ರಾಯಪಟ್ಟಿದೆ.
ಈ ಹಿಂದೆ ವಾರ್ಷಿಕ ಬಜೆಟ್ ನಲ್ಲಿ (Budget) ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ ಎಷ್ಟು ಹಣ ಮೀಸಲಿಡಲಾಗುತ್ತದೆ ಎಂಬ ಕುರಿತು ಸಾಕಷ್ಟು ನಿರೀಕ್ಷೆಗಳಿರುತ್ತಿದ್ದವು. ಎನ್ ಪಿಎಎಸ್ (NPAs) ಹಣ ವಸೂಲಿಯಲ್ಲಿ ಇತ್ತೀಚೆಗೆ ಪ್ರಗತಿ ಕಂಡುಬಂದಿದ್ದು, ಇದು ಮುಂದಿನ ವರ್ಷಗಳಲ್ಲಿ ಬ್ಯಾಂಕ್ ಗಳ ಆರ್ಥಿಕತೆಗೆ (Economy) ಹೆಚ್ಚಿನ ಬಲ ನೀಡಲಿದೆ ಎಂದು Icra ಹೇಳಿದೆ.
ದಶಕದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸರ್ಕಾರ ಯಾವುದೇ ಮರುಬಂಡವಾಳೀಕರಣ (recapitalisation) ಘೋಷಿಸೋ ನಿರೀಕ್ಷೆಯನ್ನು ನಾವು ಹೊಂದಿಲ್ಲ ಎಂದು ಅದು ತಿಳಿಸಿದೆ. ಆರ್ ಬಿಐನಿಂದ (RBI) ಬ್ಯಾಂಕುಗಳ (Banks)ಮರುಬಂಡವಾಳೀಕರಣಕ್ಕೆ ಕಾಯಂ ವ್ಯವಸ್ಥೆಯೊಂದನ್ನು ಕಲ್ಪಿಸೋ ಬಗ್ಗೆ ಬಜೆಟ್ ನಲ್ಲಿ ಕ್ರಮ ಕೈಗೊಳ್ಳೋ ಸಾಧ್ಯತೆ ಬಗ್ಗೆ ಯೋಚಿಸಬಹುದು.
Budget 2022 :ಕೈಗಾರಿಕಾ ವಲಯಕ್ಕೆ ಸಂಬಂಧಿಸಿ ವಿತ್ತ ಸಚಿವರಿಗೆ 12 ಸಲಹೆ ನೀಡಿದ FICCI
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಮರು ಬಂಡವಾಳೀಕರಣಕ್ಕಾಗಿ (recapitalisation) 2021ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ 20000 ಕೋಟಿ ರೂಪಾಯಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಸೆಪ್ಟೆಂಬರ್ 2020ರಲ್ಲಿ ಬೇಡಿಕೆಗೆ ಅನುಗುಣವಾಗಿ 2020-21ನೇ ಸಾಲಿನ ಅನುದಾನದ 20000 ಕೋಟಿ ರೂಪಾಯಿಯ ಮೊದಲ ಹಂತದ ಹಣವನ್ನು ನೀಡಲಾಗಿತ್ತು. 2020ರ ನವೆಂಬರ್ ತಿಂಗಳಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab Natonal Bank) ಮತ್ತು ಸಿಂಧ್ ಬ್ಯಾಂಕ್ ಗಳಿಗೆ (Sindh Bank) 5500 ಕೋಟಿ ರೂಪಾಯಿ ಪೂರೈಸಲಾಗಿತ್ತು. ಅದಕ್ಕೂ ಮೊದಲು 2017-18ನೇ ಸಾಲಿನಲ್ಲಿ 90000 ಕೋಟಿ ಮತ್ತು 2018-19ನೇ ಸಾಲಿನಲ್ಲಿ 1.06 ಲಕ್ಷ ಕೋಟಿ ರೂಪಾಯಿ ಹಣವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮರು ಬಂಡವಾಳೀಕರಣಕ್ಕಾಗಿ ನೀಡಲಾಗಿತ್ತು.