Asianet Suvarna News Asianet Suvarna News

Gold Price: ಬೆಂಗಳೂರಿನಲ್ಲಿ ಚಿನ್ನ,ಬೆಳ್ಳಿ ದರ ಏರಿಕೆ, ದೇಶದ ಇತರ ನಗರಗಳಲ್ಲಿ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ನಿನ್ನೆ (ಡಿ.3) ಇಳಿಕೆಯಾಗೋ ಮೂಲಕ ಗ್ರಾಹಕರ ಮೊಗದಲ್ಲಿ ನಗು ಮೂಡಿಸಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಆದ್ರೆ ದೇಶದ ಉಳಿದ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ.

Gold price hike in Bangalore check gold silver price in major cities of India Dec 4 2021  anu
Author
Bangalore, First Published Dec 4, 2021, 12:28 PM IST
  • Facebook
  • Twitter
  • Whatsapp

ಬೆಂಗಳೂರು (ಡಿ.4): ವಾರಾಂತ್ಯದಲ್ಲಿ ಚಿನ್ನ(Gold) ಖರೀದಿಗೆ ಮುಂದಾಗಿರೋ ಮಂದಿಗೆ ಇಂದು (ಡಿ.4) ಬೇಸರ ಮೂಡಿಸೋ ಸುದ್ದಿಯಿದೆ. ಅದೇನಪ್ಪಅಂದ್ರೆ ನಿನ್ನೆ(ಡಿ.3) ಇಳಿಕೆಯಾಗಿದ್ದ ಚಿನ್ನದ ದರದಲ್ಲಿಇಂದು ಏರಿಕೆ ಕಂಡುಬಂದಿದೆ. ಇನ್ನು ಬೆಳ್ಳಿ (Silver) ದರ Price) ಕೂಡ ಏರಿಕೆಯತ್ತ ಮುಖ ಮಾಡಿದೆ. ಜಗತ್ತಿಗೆ ಕೊರೋನಾ ಎಂಬ ಮಹಾಮಾರಿ ಕಾಲಿಟ್ಟ ಬಳಿಕ ಚಿನ್ನ ಹಾಗೂ ಬೆಳ್ಳಿ ದರ ಕೂಡ ಹಳ್ಳಿ ತಪ್ಪಿತ್ತು. ಒಂದು ಸಮಯದಲ್ಲಂತೂ ಚಿನ್ನ ಜನಸಾಮಾನ್ಯರ ಕೈಗೆಟುಕದ ಬೆಲೆ ದಾಖಲಿಸಿತ್ತು. ಇದು ಬಂಗಾರಪ್ರಿಯರ ನೆಮ್ಮದಿ ಕೆಡಿಸಿತ್ತು. ಆದ್ರೆ ಈ ವರ್ಷದ ಪ್ರಾರಂಭದಿಂದ ಸ್ವಲ್ಪ ಇಳಿಕೆಯಾಗಿತ್ತು.ಈ ನಡುವೆ ಒಮಿಕ್ರಾನ್(Omicron)  ವೈರಸ್ ಹಾವಳಿ ಹೆಚ್ಚುತ್ತಿರೋದು ಚಿನ್ನದ ದರ ಏರಿಕೆಯಾಗಬಹುದಾ ಎಂಬ ಅನುಮಾನ ಮೂಡಿಸಿದೆ. ಒಟ್ಟಾರೆ ಚಿನ್ನದ ಬೆಲೆಯಲ್ಲಿ ಏರಿಕೆ, ಇಳಿಕೆ ಏನೇ ಆದ್ರೂ ಅದು ಬರೀ ಚಿನ್ನ ಖರೀದಿಸೋರಿಗೆ ಮಾತ್ರವಲ್ಲ, ಚಿನ್ನದ ಮೇಲೆ ಹೂಡಿಕೆ (Invest) ಮಾಡೋರ ಮೇಲೂ ಪ್ರಭಾವ ಬೀರುತ್ತದೆ. ಬೆಲೆ ಕಡಿಮೆಯಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡಿ ಬೆಲೆ ಹೆಚ್ಚಿದಾಗ ಮಾರಾಟ ಮಾಡೋ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 500ರೂ.ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು 300ರೂ. ಏರಿಕೆ ದಾಖಲಿಸಿದೆ. ಬೆಳ್ಳಿ(Silver) ದರದಲ್ಲಿ ಕೂಡ ನಿನ್ನೆಯಿಂದ ಏರಿಕೆ ಕಂಡುಬಂದಿದೆ. ದೇಶದ ಇತರ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಂದು ನಿನ್ನೆಗಿಂತ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ದೇಶದ ಪ್ರಮುಖ ನಗರಗಳಲ್ಲಿ(Cities) ಇಂದು (ಡಿ.4) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 300ರೂ. ಏರಿಕೆಯಾಗಿದೆ. 22 ಕ್ಯಾರಟ್ (Carat) 10 ಗ್ರಾಂ ಚಿನ್ನದ ಬೆಲೆ 44,750ರೂ.ಇದ್ದು, ನಿನ್ನೆ 44,450ರೂ.ಇತ್ತು. 24 ಕ್ಯಾರಟ್ (Carat) 10 ಗ್ರಾಂ ಚಿನ್ನಕ್ಕೆ ನಿನ್ನೆ 48,490 ರೂ.ಇದ್ದು,ಇಂದು 330ರೂ.ಏರಿಕೆಯಾಗಿ 48,820ರೂ.ಇದೆ. ಇನ್ನುಬೆಳ್ಳಿ ದರದಲ್ಲಿಇಂದು 400ರೂ. ಏರಿಕೆ  ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,200ರೂ.ಇತ್ತು.ಆದ್ರೆ ಇಂದು 61,600ರೂ.ಗೆ ಏರಿಕೆಯಾಗಿದೆ. 

ನಷ್ಟದಲ್ಲಿರೋ ವ್ಯಾಪಾರಕ್ಕೆ ಲಾಭ ತರೋ 'ಯಂತ್ರ'ಗಳು

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ (Carat) 10 ಗ್ರಾಂ ಚಿನ್ನದ ಬೆಲೆ ಇಂದು 46,590ರೂ.ಆಗಿದ್ದು,ನಿನ್ನೆ 46,600ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ.ಇಳಿಕೆಯಾಗಿದೆ. ನಿನ್ನೆ 50,840 ರೂ. ಇತ್ತು,ಇಂದು 50,830ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 400ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,200ರೂ.ಇತ್ತು.ಆದ್ರೆ ಇಂದು 61,600ರೂ. ಆಗಿದೆ. 

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ (Carat) 10 ಗ್ರಾಂ ಚಿನ್ನಕ್ಕೆ ನಿನ್ನೆ 46,450ರೂ.ಇದ್ದು,ಇಂದು 10ರೂ.ಇಳಿಕೆ ಕಂಡು 46,440ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,450ರೂ.ಇತ್ತು,ಇಂದು 10ರೂ. ಇಳಿಕೆಯಾಗಿ 47,440ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 60,200ರೂ.ಇತ್ತು.ಆದ್ರೆ ಇಂದು 61,600ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 400 ರೂ.ಏರಿಕೆಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿ ದಾಖಲೆ ವ್ಯವಹಾರ!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ (Carat) 10 ಗ್ರಾಂ ಚಿನ್ನಕ್ಕೆ ಇಂದು  45,110ರೂ.ಇದೆ. ನಿನ್ನೆ 44,730ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 380ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 410ರೂ.ಏರಿಕೆಯಾಗಿದೆ. ನಿನ್ನೆ 48,800 ರೂ.ಇತ್ತು,ಇಂದು 49,210 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,300ರೂ.ಇದ್ದು, ಇಂದು 65,500ರೂ. ಆಗಿದೆ. ಅಂದ್ರೆ 200ರೂ. ಏರಿಕೆಯಾಗಿದೆ.  

"

Follow Us:
Download App:
  • android
  • ios