ಪೆಟ್ರೋಲ್ ದರ ಗಗನಕ್ಕೇರಿದ ಬೆನ್ನಲ್ಲೇ ನಿಮಗಿಲ್ಲಿದೆ ಗುಡ್ ನ್ಯೂಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Aug 2018, 3:33 PM IST
Gold Futures Fall Marginally On Weak
Highlights

ಪೆಟ್ರೋಲ್ ದರ ಗಗನ ಮುಖಿಯಾಗಿ ಏರುತ್ತಿರುವ ಬೆನ್ನಲ್ಲೇ ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್ ಕಾದಿದೆ. ಚಿನ್ನ ಕೊಳ್ಳಬೇಕು ಎಂದು ಕೊಂಡಿದ್ದಲ್ಲಿ ಇದು ಶುಭಕಾಲ. ಇದೀಗ ಚಿನ್ನದ ದರದಲ್ಲಿ ಅಲ್ಪಮಟ್ಟಿನ ಇಳಿಕೆ ಕಂಡು ಬಂದಿದೆ. 

ನವದೆಹಲಿ : ಜಾಗತಿಕವಾಗಿ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಳಿತ ಕಂಡು ಬರುತ್ತಲೇ ಇರುತ್ತದೆ. ಇದೀಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

ಒಂದೆಡೆ ಪೆಟ್ರೋಲ್ ದರ ನಿರಂತರವಾಗಿ ಏರಿಕೆಯಾಗಿ ಜನರಿಗೆ ಶಾಕ್ ನೀಡುತ್ತಿರುವ ಬೆನ್ನಲ್ಲೇ  ಚಿನ್ನದ ದರ ಕೊಂಚ ಇಳಿಕೆಯಾಗಿ ಚಿನ್ನ ಕೊಳ್ಳುವವರಿಗೆ ಶುಭ ಸಮಾಚಾರ ನೀಡಿದೆ. 

ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಗೆ ಅನುಗುಣವಾಗಿ ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಶೇ 0.11ರಷ್ಟು ಇಳಿಕೆಯಾಗಿದ್ದು ಇದರಿಂದ 10 ಗ್ರಾಂ ಚಿನ್ನದ ಬೆಲೆ 30.154ರುಗಳಾದಂತಾಗಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಇನ್ನು ಬೇರೆ ಬೇರೆ ದೇಶಗಳಲ್ಲಿಯೂ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

loader