ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಇದು ಚಿನ್ನ ಕೊಳ್ಳೋರಿಗೆ ಭರ್ಜರಿ ಗುಡ್ ನ್ಯೂಸ್ ಆಗಿದೆ. 

ಮುಂಬೈ : ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿದಿನವೂ ಕೂಡ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇದೀಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. 

ಪ್ರತೀ 10 ಗ್ರಾಂ ಚಿನ್ನದ ದರದ ಮೇಲೆ 250 ರು. ಇಳಿಯುವ ಮೂಲಕ 31,450ರು.ನಷ್ಟಾಗಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣ ಮಾರಾಟಗಾರರಿಂದ ಬೇಡಿಕೆ ಕುಸಿದ ಪರಿಣಾಮವಾಗಿ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದೆ. 

ಬೇಡಿಕೆ ಕುಸಿತದ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಈ ಪ್ರಮಾಣದ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆದರೆ ಇದೇ ವೇಳೆ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು ಪ್ರತೀ ಕೆಜಿ ಬೆಳ್ಳಿಯ ಮೇಲೆ 70 ರು.ನಷ್ಟು ಏರಿಕೆಯಾಗಿದ್ದು ಪ್ರತೀ ಕೆಜಿ ಬೆಳ್ಳಿಯ ಬೆಲೆ 38150 ರು.ನಷ್ಟಾಗಿದೆ.