ನಿರಂತರವಾಗಿ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಳಿತ ಕಂಡು ಬರುತ್ತಿದ್ದು ಇದೀಗ ಮತ್ತೊಮ್ಮೆ ಬಂಗಾರ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿಯೂ ಕೂಡ ಇಳಿಕೆ ಕಂಡು ಬಂದಿದೆ.

ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು ಇದೀಗ ಮತ್ತೊಮ್ಮೆ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮವಾಗಿ ಬಂಗಾರದ ಬೆಲೆ ಕುಸಿದಿದೆ. 

ಪ್ರತೀ 10 ಗ್ರಾಂ ಚಿನ್ನದ ಮೇಲೆ 220 ರು. ಕುಸಿದಿದ್ದು ಇದರಿಂದ 10 ಗ್ರಾಂ ಚಿನ್ನದ ಬೆಲೆ 31,650ರು.ಗಳಷ್ಟಾಗಿದೆ.

ಇನ್ನು ಇದೇ ವೇಳೆ ಬೆಳ್ಳಿ ದರದಲ್ಲಿಯೂ ಕೂಡ ಇಳಿಕೆ ಕಂಡು ಬಂದಿದ್ದು ಪ್ರತೀ ಕೆಜಿ ಬೆಳ್ಳಿಯ ದರದಲ್ಲಿ 50 ರು. ಇಳಿದಿದೆ. ಇದರಿಂದ ಪ್ರತೀ ಕೆಜಿ ಬೆಳ್ಳಿಯ ಬೆಲೆ 39,250 ರು.ಗಳಷ್ಟಾಗಿದೆ. 

ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದೇ ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.