ಸದ್ಯಕ್ಕೀಗ ಶುಭ ಕಾರ್ಯಕ್ರಮಗಳ ಸೀಜನ್, ಗೃಹ ಪ್ರವೇಶ, ಮದುವೆ, ನಿಶ್ಚಿತಾರ್ಥ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತದೆ. ಹೀಗಿರುವಾಗ ಚಿನ್ನ, ಬೆಳ್ಳಿಯ ಖರೀದಿಯೂ ಭರ್ಜರಿಯಾಗೇ ಸಾಗುತ್ತಿದೆ. ಚಿನ್ನ ದುಬಾರಿಯಾದರೂ ಕೆಲವೊಮ್ಮೆ ಖರೀದಿಸಲೇಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಹೀಗಿರುವಾಗ ಇದು ಜನ ಸಾಮಾಣ್ಯರಿಗೆ ಕೊಂಚ ಪೆಟ್ಟು ನೀಡುತ್ತದೆ.  ಅನೇಕ ಮಂದಿ ಇದೇ ಕಾರಣದಿಂದಾಗಿ ತಮ್ಮ ಕಾರ್ಯಕ್ರಮದ ದಿನಾಂಕವನ್ನೇ ಮುಂದೂಡುತ್ತಿದ್ದಾರೆ.

ಬೆಂಗಳೂರು(ಮೇ.16): ಕೊರೋನಾ ಯಾವಾಗ ವಿಶ್ವವನ್ನು ಕಾಡಲಾರಂಭಿಸಿತೋ ಅಂದಿನಿಂದ ಎಲ್ಲವೂ ಬದಲಾಗುತ್ತಿದೆ. ಒಂದೆಡೆ ಅನಾರೋಗ್ಯ ಸಮಸ್ಯೆ ಕಾಡುತ್ತಿದದ್ದರೆ, ಮತ್ತೊಂದೆಡೆ ಹಣದುಬ್ಬರ ಇನ್ನಿಲ್ಲದಂತೆ ಸತಾಯಿಸುತ್ತಿದೆ. ಇದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಇವಿಗಳ ಮಧ್ಯೆ ಚಿನ್ನ, ಬೆಳ್ಳಿ ದರಗಳ ಹಾಔಏಣಿ ಆಟವೂ ಜನರ ನಿದ್ದೆಗೆಡಿಸಿದೆ. ಇದರಿಂದಾಗಿ ಬಂಗಾರ ಖರೀದಿಸಬೇಕೋ, ಬೇಡವೋ ಎಂದು ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ. ಸದ್ಯ ಚಿನ್ನದ ದರ ಏರಿಕೆಗೆ ಕೊಂಚ ಬ್ರೇಕ್ ಬಿದ್ದಿದೆಯಾದರೂ ಹೇಳಿಕೊಳ್ಳುವ ಮಟ್ಟಿಗೆ ಇಳಿಕೆಯಾಗಿಲ್ಲ. ಇನ್ನು ಬೆಂಗಳೂರಿನಲ್ಲಿ ಇಂದು ಚಿನ್ನ ದರ ಎಷ್ಟಿದೆ? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ? ಇಲ್ಲಿದೆ ವಿವರ

ಒಂದು ಗ್ರಾಂ (1GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,625
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,045

ಎಂಟು ಗ್ರಾಂ (8GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,360

ಹತ್ತು ಗ್ರಾಂ (10GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,250
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,450

ನೂರು ಗ್ರಾಂ (100GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,62,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,04,500

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,250 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,597, ರೂ. 46,250, ರೂ. 46,250 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,250 ರೂ. ಆಗಿದೆ.

ಇಂದಿನ ಬೆಳ್ಳಿ ದರ

ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್

ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 670, ರೂ. 6,700 ಹಾಗೂ ರೂ. 67,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 67,000 ಆಗಿದ್ದರೆ ದೆಹಲಿಯಲ್ಲಿ 62,300 ಮುಂಬೈನಲ್ಲಿ 62,300 ಹಾಗೂ ಕೋಲ್ಕತ್ತದಲ್ಲೂ ರೂ. 62,300 ಗಳಾಗಿದೆ.