Asianet Suvarna News Asianet Suvarna News

Gold Silver Rate Today: 50 ಸಾವಿರದ ಸನಿಹ ಚಿನ್ನದ ಬೆಲೆ

ಚಿನ್ನದ ಬೆಲೆ ಏರಿಕೆ ಕಾಣುತ್ತಾ 50 ಸಾವಿರದ ಸನಿಹ ತಲುಪಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನದ ದರ 49, 250 ರೂಪಾಯಿ ಆಗಿದ್ದರೆ, 24 ಕ್ಯಾರಟ್‌ 10 ಗ್ರಾಮ್‌ ಚಿನ್ನದ ಬೆಲೆ 53,730 ರೂಪಾಯಿ ಆಗಿದೆ.

gold and silver price december 2nd 2022 in karnataka san
Author
First Published Dec 2, 2022, 1:13 PM IST

Gold Rate on December 2nd 2022: ಬಂಗಾರದ ದರ ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದ ಜನರಿಗೆ ಶಾಕ್‌ ಆಗುವ ಸುದ್ದಿ ಇದು. ಈ ತಿಂಗಳ ಆರಂಭದಲ್ಲಿಯೇ ಕಳೆದ ಐದು ತಿಂಗಳಲ್ಲಿಯೇ ಗರಿಷ್ಠ ದರ ಮುಟ್ಟಿದ್ದ ಚಿನ್ನ, ಈಗ 50 ಸಾವಿರದ ಸನಿಹ ತಲುಪಿದೆ. ಭಾರತದ ಪ್ರಮುಖ ನಗರದಲ್ಲಿ ಶುಕ್ರವಾರ ಚಿನ್ನದ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾವಾಗಿದೆ. ರೂಪಾಯಿಯಲ್ಲಿ ಏರಿಳಿತದ ಕಾರಣದಿಂದಾಗಿ ಚಿನ್ನದ ಬೆಲೆಗಳಲ್ಲಿ ಸಾಕಷ್ಟು ಏರಿಳಿತಗಳು ದಾಖಲಾಗಿದ್ದವು. ಡಿಸೆಂಬರ್‌ 2 ರಂದು ಬೆಂಗಳುರಿನಲ್ಲಿ 24 ಕ್ಯಾರಟ್‌ 10 ಗ್ರಾಮ್‌ ಚಿನ್ನ ಬೆಗೆ 53, 730 ರೂಪಾಯಿ ಆಗಿದ್ದರೆ, 22 ಕ್ಯಾರಟ್‌ ಆಭರಣದ ಚಿನ್ನದ 10 ಗ್ಋಆಮ್‌ಗೆ 49, 250 ರೂಪಾಯಿ ಆಗಿದೆ.  ಚಿನ್ನದ ಬೆಲೆ ಏರಿಕೆಯಿಂದಾಗಿ ಮಗನ, ಮಗಳ ಮದುವೆ ಮಾಡಿಸೋಕೆ ಅಂತ ಹಣ ಕೂಡಿಟ್ಟು ಆಭರಣ  (Jewellery) ಮಾಡಿಸೋಕೆ ತಯಾರಾದವರಿಗೆ ಮತ್ತಷ್ಟು ಹಣ ಕೂಡಿಡುವಂತಹ ಪರಿಸ್ಥಿತಿ ಬಂದೊದಗಿದೆ. ನೀವೂ ಸಹ ಚಿನ್ನ (Gold), ಬೆಳ್ಳಿ (Silver) ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ..? ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,925
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,373

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 39,400
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,984

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 49,250
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 53,730

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,92,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,37,300

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.   49, 250 ರೂ. ಆಗಿದ್ದು, ನಿನ್ನೆಗಿಂತ ಬೆಲೆಯಲ್ಲಿ 450 ರೂಪಾಯಿ ಹೆಚ್ಚಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 49,400, ರೂ. 49,250, ರೂ. 49,250 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಶುಕ್ರವಾರ 49,300 ರೂ. ಆಗಿದ್ದು, ಗುರುವಾರಕ್ಕಿಂತ 500 ರೂಪಾಯಿ ಏರಿಕೆಯಾಗಿದೆ.

ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಶುಕ್ರವಾರ ಬೆಳ್ಳಿ ದರದಲ್ಲಿ ಕೊಂಚ ಬದಲಾವಣೆ ಆಗಿದೆ. ಬಹುತೇಕ ಎಲ್ಲಾ ಮೆಟ್ರೋ ನಗರದಲ್ಲಿ ಬೆಳ್ಳಿ ಬೆಲೆಗಳಲ್ಲಿ ಏರಿಕೆಯಾಗಿದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಅಂಥ ದೊಡ್ಡ ಬದಲಾವಣೆ ಆಗಿಲ್ಲ.  ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 705, ರೂ. 7,050 ಹಾಗೂ ರೂ. 70,500 ರೂಪಾಯಿ ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 70, 500 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 64,000, ಕೋಲ್ಕತ್ತದಲ್ಲಿ ರೂ. 70, 500 ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ  ಇಂದಿನ ಬೆಳ್ಳಿ ದರ ರೂ. 64,400 ಆಗಿದ್ದು, 400 ರೂಪಾಯಿ ಏರಿಕೆ ಆಗಿದೆ.

Gold Silver Price Today: ಮತ್ತೆ ದುಬಾರಿಯಾಯ್ತು ಚಿನ್ನದ ಬೆಲೆ; ಇಂದಿನ ಬಂಗಾರ, ಬೆಳ್ಳಿ ದರ ವಿವರ ಹೀಗಿದೆ..

Follow Us:
Download App:
  • android
  • ios