Asianet Suvarna News Asianet Suvarna News

ಚಿನ್ನದ ಬೆಲೆ ದಾಖಲೆ 77850ಕ್ಕೆ, ಬೆಳ್ಳಿ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆ: ಬೆಂಗಳೂರಿನಲ್ಲಿ ಬೆಲೆ ಕೊಂಚ ಕಡಿಮೆ

ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಇಸ್ರೇಲ್-ಹಮಾಸ್ ಉಗ್ರರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹22,850 ತಲುಪಿದರೆ, ಚೆನ್ನೈನಲ್ಲಿ 1 ಕೆಜಿ ಬೆಳ್ಳಿ ಬೆಲೆ ದಾಖಲೆಯ ₹1,01,000ಕ್ಕೆ ಮುಟ್ಟಿದೆ.

Gold And Silver price creates record 1 gram rate 7785 rupees mrq
Author
First Published Sep 26, 2024, 8:50 AM IST | Last Updated Sep 26, 2024, 8:49 AM IST

ನವದೆಹಲಿ: ರಷ್ಯಾ ಉಕ್ರೇನ್ ಸಂಘರ್ಷ ಇಸ್ರೇಲ್- ಹಿಟ್ಟುಲ್ಲಾ, ಹಮಾಸ್ ಉಗ್ರರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧದಾರ ದಾಖಲೆ ಮಟ್ಟಕ್ಕೆ ಏರಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸಾರ್ವಕಾಲಿಕ 7850 ದು.ಗೆ ತಲುಪಿದ್ದರೆ, ಚೆನ್ನೈನಲ್ಲಿ 1 ಕೆಜಿ ಬೆಳ್ಳಿ ಬೆಲೆ ದಾಖಲೆಯ  1,01000 ರೂಪಾಯಿಗೆ ಮುಟ್ಟಿದೆ. 

ಇನ್ನು ಬೆಂಗಳೂರು ಪೇಟೆಯಲ್ಲಿ ಸ್ವಾಂಡರ್ಡ್ ಚಿನ್ನ 10 ಗ್ರಾಂಗೆ 77,550 ರು., ಆಭರಣ ಚಿನ್ನ 1 ಗ್ರಾಂಗೆ 7,173 ರು. ಹಾಗೂ 1 ಕೇಜಿ ಬೆಳ್ಳಿ ಬೆಲೆ 93,200 ರು.ಗೆ ಏರಿದೆ.
ದಿಲ್ಲಿಯಲ್ಲಿ ಭಾರಿ ಏರಿಕೆ: ದೆಹಲಿ ಚನಿವಾರ ಪೇಟೆಯಲ್ಲಿ ಬುಧವಾರ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ತಲುಪಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 76950 ರು.ಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 3000 ರೂಪಾಯಿ ಏರಿಕೆ ಕಂಡು, 93,000 ರೂಪಾಯಿಗೆ ತಲುಪಿದೆ. 

ಇನ್ನು ಚಿನ್ನ ಮತ್ತು ಬೆಳ್ಳಿ ಪ್ರಮುಖ ಮಾರುಕಟ್ಟೆಯಾದ ಚೆನ್ನೈನಲ್ಲಿ ಶುದ್ದ ಚಿನ್ನದ ಬೆಲೆ 77,200 ರೂಪಾಯಿಗೆ ತಲುಪಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ ಕೆಜಿಗೆ 3000 ರೂಪಾಯಿ ಏರಿಕೆ ಕಂಡು 1 ಲಕ್ಷದ 1 ಸಾವಿರ ರೂಪಾಯಿಗೆ ತಲುಪಿದೆ. ಮತ್ತೊಂದೆಡೆ ಮುಂಬೈನಲ್ಲಿ ಶುದ್ದ ಚಿನ್ನದ ಬೆಲೆ 25249 ದು.ಗೆ ಮತ್ತು ಬೆಳ್ಳ ಬೆಲೆ 90730 ರು.ಗೆ ತಲುಪಿದೆ.

ಬ್ಯಾಂಕ್ ಗ್ರಾಹಕರೇ ಎಚ್ಚರ... ಈ ಒಂದು ಕೆಲಸ ಮಾಡದಿದ್ದರೆ ಕ್ಲೋಸ್ ಆಗಲಿದೆ ನಿಮ್ಮ ಅಕೌಂಟ್

ಸೆನ್ಸೆಕ್ಸ್‌ 85000, ನಿಫ್ಟಿ 26000 ಅಂಕ ಮುಟ್ಟಿ ಹೊಸ ದಾಖಲೆ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 85000 ಅಂಕದ ಗಡಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್‌ 234 ಅಂಕ ಏರಿ 85163ಕ್ಕೆ ತಲುಪಿತ್ತು. ಸೆನ್ಸೆಕ್ಸ್‌ 85000ರ ಗಡಿ ದಾಟಿದ್ದು ಇದೇ ಮೊದಲು. ಆದರೆ ದಿನದಂತ್ಯಕ್ಕೆ ಸೋಮವಾರದ ಅಂತ್ಯದ ಅಂಕಗಳಿಗಿಂತ 15 ಅಂಕ ಇಳಿದು 84914ರಲ್ಲಿ ಮುಕ್ತಾಯವಾಯಿತು. 

ಇನ್ನೊಂದೆಡೆ ನಿಫ್ಟಿ ಕೂಡಾ ಮಧ್ಯಂತರದಲ್ಲಿ 72 ಅಂಕ ಏರಿ 26011 ಅಂಕಕ್ಕೆ ತಲುಪಿ ಹೊಸ ದಾಖಲೆ ಬರೆಯಿತು. ಆದರೆ ದಿನದಂತ್ಯಕ್ಕೆ 1 ಅಂಕಗಳ ಏರಿಕೆಯೊಂದಿಗೆ 25940ರಲ್ಲಿ ಮುಕ್ತಾಯಗೊಂಡಿತು. ಮಂಗಳವಾರ ಏಷ್ಯಾದ ಬಹುತೇಕ ಷೇರುಪೇಟೆಗಳು ಏರುಗತಿಯಲ್ಲೆ ಮುಕ್ತಾಯವಾಗಿದೆ.

ಅಂಚೆ ಕಚೇರಿ ಸೂಪರ್ ಧಮಾಕಾ ಸ್ಕೀಂ: 250 ರೂಪಾಯಿ ಉಳಿಸಿದ್ರೆ ನಿಮ್ಮದಾಗುತ್ತೆ 24 ಲಕ್ಷ

Latest Videos
Follow Us:
Download App:
  • android
  • ios