Asianet Suvarna News Asianet Suvarna News

ವರಮಹಾಲಕ್ಷ್ಮೀ ಹಬ್ಬದಂದು ಆಭರಣ ಪ್ರಿಯರಿಗೆ ಕಹಿ ಸುದ್ದಿ; ಮತ್ತಷ್ಟು ಏರಿದ ಬಂಗಾರ, ಬೆಳ್ಳಿ ದರ

ಶ್ರಾವಣ ಮಾಸ ಆರಂಭದಲ್ಲಿ ಕಡಿಮೆ ಇದ್ದ ಬಂಗಾರ, ಬೆಳ್ಳಿ ದರ ಕೆಲ ದಿನಗಳಿಮದ ಮತ್ತೆ ಏರಿಕೆ ಕಾಣುತ್ತಿದೆ. ವರಮಹಾಲಕ್ಷ್ಮೀ ಹಬ್ಬವಾದ ಇಂದೂ ಸಹ ದರದಲ್ಲಿ ಹೆಚ್ಚಳ ಕಂಡಿದೆ. 

gold and silver price august 5th 2022 in karnataka ash
Author
Bangalore, First Published Aug 5, 2022, 12:32 PM IST

ಇಂದು ಶ್ರಾವಣ ಶುಕ್ರವಾರ, ಜತೆಗೆ ವರಮಹಾಲಕ್ಷ್ಮೀ ಹಬ್ಬ. ಆದರೆ, ಆಭರಣ ಪ್ರಿಯರಿಗೆ ಅಂದರೆ ಪ್ರಮುಖವಾಗಿ ಮಹಿಳೆಯರಿಗೆ ಶಾಕ್‌ ಆಗುವ ಸುದ್ದಿಯಿದು. ಏಕೆಂದರೆ, ಇಂದು ಮತ್ತೆ ಬಂಗಾರ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ.  ಶ್ರಾವಣ ಮಾಸದಲ್ಲಿ ಶುಭ ಸಮಾರಂಭಗಳು ಸಾಮಾನ್ಯವಾಗಿ ಹೆಚ್ಚಿರುತ್ತದೆ. ಮದುವೆ, ಗೃಹ ಪ್ರವೇಶದಂತಹ ಸಮಾರಂಭಗಳಿಗೆ ಸಾಮಾನ್ಯವಾಗಿ ಹೆಚ್ಚು ಜನರು ಆಭರಣ ಖರೀದಿ ಮಾಡುತ್ತಾರೆ. ಇವರಿಗೆ ಖರೀದಿಸುವ ಅನಿವಾರ್ಯತೆ ಇದ್ದು, ಈ ಹಿನ್ನೆಲೆ ಜೇಬಿಗೆ ಹೆಚ್ಚು ಹೊರೆ ಮಾಡಿಕೊಂಡೇ ಆಭರಣ ಕೊಂಡುಕೊಳ್ಳಬೇಕಾಗುತ್ತದೆ. ಬೆಂಗಳೂರು,  ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ಬೆಲೆ ಗಗನದತ್ತ ಚಿಮ್ಮಿದೆ. ಇನ್ನು, ನೀವೂ ಸಹ ಆಭರಣ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ..? ಹಾಗಾದರೆ, ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಇಲ್ಲಿದೆ ವಿವರ.

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,770
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,204

ಇದನ್ನು ಓದಿ: ಬೆಳಗಾವಿ, ಯಾದಗಿರಿಯಲ್ಲಿ ಇಳಿಕೆಯಾದ ಇಂಧನ ಬೆಲೆ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್‌ ದರ ವಿವರ ಇಲ್ಲಿದೆ..

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,160
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,632

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,700
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,040

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,77,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,20,400

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,700 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,650, ರೂ. 47,650, ರೂ. 47,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,800 ರೂ. ಆಗಿದೆ.

ಇಂದಿನ ಬೆಳ್ಳಿ ದರ
ಇನ್ನು, ದೇಶದೆಲ್ಲೆಡೆ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಸಹ ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆ ಚಿನ್ನ, ಬೆಳ್ಳಿ ದರದಲ್ಲೂ ಏರಿಳಿತ ಕಾಣುತ್ತದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶದಲ್ಲಿ ಬೆಳ್ಳಿ ದರ ಹೆಚ್ಚಳವಾದಂತೆ ರಾಜ್ಯ ರಾಜಧಾನಿ ಅಂದರೆ ಬೆಂಗಳೂರಿನಲ್ಲಿ ಸಹ ಬೆಳ್ಳಿ ದರದಲ್ಲಿ ಏರಿಕೆಯಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 636, ರೂ. 6,360 ಹಾಗೂ ರೂ. 63,600 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 63,600 ಆಗಿದ್ದರೆ, ಮುಂಬೈನಲ್ಲಿ ರೂ. 58,200 ಹಾಗೂ ಕೋಲ್ಕತ್ತದಲ್ಲೂ ರೂ. 58,200 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 63,600 ಆಗಿದೆ.

Follow Us:
Download App:
  • android
  • ios