Asianet Suvarna News Asianet Suvarna News

ಕೇವಲ 2 ನಿವೇಶನಕ್ಕೆ 515 ಕೋಟಿ ಕೊಟ್ಟ ರಿಯಲ್ ಎಸ್ಟೇಟ್ ಕಂಪನಿ!

ಗೋದ್ರೇಜ್ ಪ್ರಾಪರ್ಟೀಸ್ ಗುರುಗ್ರಾಮದಲ್ಲಿ 515 ಕೋಟಿ ರೂಪಾಯಿಗಳಿಗೆ ಎರಡು ಪ್ರಮುಖ ನಿವೇಶನಗಳನ್ನು ಖರೀದಿಸಿದೆ. ಈ ಭೂಮಿಯಲ್ಲಿ ಐಷಾರಾಮಿ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ, ಇದು ದೆಹಲಿ-ಎನ್‌ಸಿಆರ್‌ನಲ್ಲಿ ರಿಯಲ್ ಎಸ್ಟೇಟ್ ಮಾರ್ಕೆಟ್‌ನಲ್ಲಿ ಉತ್ಸಾಹವನ್ನು ಸೃಷ್ಟಿಸಿದೆ.

Godrej Properties purchased two plots in 515 crore rupees at Gurgaon mrq
Author
First Published Sep 2, 2024, 12:09 PM IST | Last Updated Sep 2, 2024, 12:09 PM IST

ನವದೆಹಲಿ: ದೆಹಲಿ-ಎನ್‌ಸಿಆರ್ ನಲ್ಲಿ ನಿವೇಶನ ಖರೀದಿ ಕನಸು ಆಗಿದೆ. ಮಧ್ಯಮ ವರ್ಗದ ಜನತೆ ದೆಹಲಿ, ಎನ್‌ಸಿಆರ್, ಗುರುಗ್ರಾಮದಲ್ಲಿ ನಿವೇಶನ ಬೆಲೆಗಳು ಕೋಟಿಗೂ ಅಧಿಕವಾಗಿದೆ. ದೆಹಲಿಯ ಹೊರವಲಯವಾಗಿರುವ  ಗುರುಗ್ರಾಮದಲ್ಲಿ ಮನೆ ಬಾಡಿಗೆಯೂ ಏರಿಕೆಯಾಗಿದೆ. ದೇಶದ ಪ್ರತಿಷ್ಠಿತ ರಿಯಲ್ ಎಸ್ಟೇಟ್‌ ಕಂಪನಿಯಾಗಿರುವ ಗೋದ್ರೇಜ್ ಪ್ರಾಪರ್ಟಿಸ್ ಗುರುಗ್ರಾಮದ ಐಷಾರಾಮಿ ಪ್ರದೇಶದಲ್ಲಿ ಬರೋಬ್ಬರಿ 515 ಕೋಟಿ ರೂಪಾಯಿ ನೀಡಿ ಎರಡು ನಿವೇಶನಗಳನ್ನು ಖರೀದಿಸಿದೆ. ಇಲ್ಲಿ ನಿರ್ಮಾಣವಾಗುವ ಪ್ರೊಜೆಕ್ಟ್ ರಿಯಲ್ ಎಸ್ಟೇಟ್ ಲೋಕದ ಹೊಸ ಗುರುತು ಆಗಲಿದೆ ಎಂದು ಬಣ್ಣಿಸಲಾಗುತ್ತಿದೆ. ಲಕ್ಷುರಿ ಲೊಕೇಶನ್‌ನಲ್ಲಿ ಲಕ್ಷುರಿ ಪ್ಲಾಟ್‌ ಹುಡುಕುತ್ತಿರುವ ದೆಹಲಿಯ ನಿವಾಸಿಗಳಿಗೆ ಇದು ಗುಡ್‌ನ್ಯೂಸ್‌ ಆಗಲಿದೆ. 

ಸೋಮವಾರ (ಸೆಪ್ಟೆಂಬರ್ 2) ಗುರುಗ್ರಾಮದ ಪ್ರೀಮಿಯಂ ಲೊಕೇಶನ್‌ನಲ್ಲಿ ನಿವೇಶನ ಖರೀದಿಸಿದ್ದು, ಇಲ್ಲಿ ಎರಡು  ಗ್ರೂಪ್ ಆಫ್ ಹೌಸಿಂಗ್ ಪ್ರೊಜೆಕ್ಟ್ ಅಭಿವೃದ್ಧಿಗೊಳಿಸಲಾಗುವುದು ಎಂದು ಗೋದ್ರೇಜ್ ಪ್ರೀಮಿಯಂ ಘೋಷಣೆ ಮಾಡಿಕೊಂಡಿದೆ. ಈ ಎರಡು ಪ್ರೊಜೆಕ್ಟ್‌ಗಳು ಅತ್ಯಂತ ಎತ್ತರದ ಕಟ್ಟಡವಾಗಿರಲಿದ್ದು, ಉದ್ದೇಶ ಪತ್ರವನ್ನು (Letter of Intent) ಬಿಡುಗಡೆಗೊಳಿಸಲಾಗಿದೆ. ಹರಿಯಾಣ ನಗರ ಅಭಿವೃದ್ಧಿ ಪ್ರಾಧಿಕಾರ (HSVP) ನಡೆಸಿದ  ಇ-ಹರಾಜಿನಲ್ಲಿ 515 ಕೋಟಿ ರೂಪಾಯಿ ಪಾವತಿಸಿ ಗುರುಗ್ರಾಮದ ಪ್ರಮುಖ ಸ್ಥಳದಲ್ಲಿ ಎರಡು ನಿವೇಶನಗಳನ್ನು ಖರೀದಿಸಿದೆ. 

ಈ ಪ್ಲಾಟ್ ಗುರುಗ್ರಾಮದ ಹೃದಯ ಭಾಗ
ಮೊದಲ ಪ್ಲಾಟ್ 3.6 ಎಕರೆ ವಿಸ್ತೀರ್ಣ ಹೊಂದಿದ್ದು, ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯ ಮೈಕ್ರೋ ಮಾರ್ಕೆಟ್ ಬಳಿಯಲ್ಲಿದೆ. ಎರಡನೇ ಪ್ಲಾಟ್ 1.97 ಎಕರೆ ಪ್ಲಾಟ್ ಸೆಕ್ಟರ್ 39ರಲ್ಲಿದೆ. ಎರಡನೇ ನಿವೇಶನ ರಾಷ್ಟ್ರೀಯ ಹೆದ್ದಾರಿ 48ರ ಸಮೀಪದಲ್ಲಿರೋ ಕಾರಣ ಭಾರೀ ಬೇಡಿಕೆಯನ್ನು ಹೊಂದಿತ್ತು. ಗಾಲ್ಫ್ ಕೋರ್ಸ್ ಸುತ್ತಲಿನ ಪ್ರದೇಶ ಬೆಲೆ ಅತ್ಯಂತ ದುಬಾರಿಯಾಗಿದ್ದು, ಉದ್ಯಮಿಗಳೇ ವಾಸಿಸುವ ಏರಿಯಾ ಇದಾಗಿದೆ. ಕಳೆದ ವರ್ಷದ ಗಾಲ್ಫ್ ಕೋರ್ಸ್ ಏರಿಯಾದಲ್ಲಿನ ಮನೆಯೊಂದು 100 ಕೋಟಿ ರೂಪಾಯಿಗೆ ಮಾರಾಟವಾಗಿತ್ತು.

ಕೋಟಿ ಕೋಟಿ ಇದ್ರೂ ರಾತ್ರೋ ರಾತ್ರಿ ಫುಟ್‌ಪಾತ್‌ನಲ್ಲಿ ಕಾಣಿಸಿಕೊಂಡ ಅಂಬಾನಿ ದಂಪತಿ

ಈ ಎರಡೂ ಪ್ಲಾಟ್‌ಗಳಲ್ಲಿ ಈ ಎರಡೂ ಪ್ಲಾಟ್‌ಗಳಲ್ಲಿ 1 ಮಿಲಿಯನ್ ಚದರ ಅಡಿಗಿಂತಲೂ ಹೆಚ್ಚು ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಈ ಪ್ರೊಜೆಕ್ಟ್‌ನಿಂದ 3,400 ಕೋಟಿ  ರೂಪಾಯಿ ಆದಾಯದ ನಿರೀಕ್ಷೆಯನ್ನು ಗೋದ್ರೇಜ್ ಕಂಪನಿ ಹೊಂದಿದೆ. ಈ  ಪ್ರೊಜೆಕ್ಟ್‌ನಲ್ಲಿ ಐಷಾರಾಮಿ ವಸತಿ ಅಪಾರ್ಟ್ಮೆಂಟ್ಗಳು ಮತ್ತು ವಿವಿಧ ಸಂರಚನೆಗಳನ್ನು (configuration) ಒಳಗೊಂಡಿರುತ್ತದೆ.

2023ರಲ್ಲಿಯೂ ಗೋದ್ರೇಜ್ ಕಂಪನಿ ಹರಿಯಾಣ ನಗರ ಅಭಿವೃದ್ಧಿ ಪ್ರಾಧಿಕಾರ (HSVP) ನಡೆಸಿದ  ಇ-ಹರಾಜಿನಲ್ಲಿ ಗಾಲ್ಪ್ ಕೋರ್ಸ್ ರಸ್ತೆಯಲ್ಲಿನ 5.15 ಎಕರೆ ಹಾಗೂ 2.76 ಎಕರೆಯ ಎರಡು ಭೂಪ್ರದೇಶವನ್ನು ಖರೀದಿಸಿತ್ತು. ಈ ಆರ್ಥಿಕ ವರ್ಷದಲ್ಲಿ ಇಲ್ಲಿ ನಿರ್ಮಾಣವಾಗಿರುವ ಪ್ರೊಜೆಕ್ಟ್‌ ಗಳ ಉದ್ಘಾಟನೆಯ ತಯಾರಿಲ್ಲಿದೆ. ಇಷ್ಟು ಮಾತ್ರವಲ್ಲದೇ ಗ್ರೇಟರ್ ನೋಯ್ಡಾ ಭಾಗದಲ್ಲಿಯೂ ಎರಡು ನಿವೇಶನಗಳನ್ನು ತನ್ನದಾಗಿಸಿಕೊಂಡಿದೆ. ಎನ್‌ಸಿಆರ್  ವ್ಯಾಪ್ತಿಯಲ್ಲಿಯೂ ನಾಲ್ಕು ನಿವೇಶನ ಖರೀದಿಸಿರುವ ಗೋದ್ರೇಜ್ ಕಂಪನಿ ಇದರಿಂದ 1 ಬಿಲಿಯನ್ ಡಾಲರ್ ಆದಾಯದ ನಿರೀಕ್ಷೆಯನ್ನು ಹೊಂದಿದೆ.

ಕ್ಯಾನ್ಸರ್ ಸೋಲಿಸಿ 17ನೇ ವಯಸ್ಸಿಗೆ ಕೆಲಸ ಆರಂಭಿಸಿ ವಿಮಾನಯಾನ ಸಂಸ್ಥೆಯ ಒಡತಿಯಾದ ಕನಿಕಾ ಯಶಸ್ಸಿನ ಕಥೆ!

Latest Videos
Follow Us:
Download App:
  • android
  • ios