ಇದೆಂಥಾ ಡೀಲ್.. ಕಾಮಸೂತ್ರ ಕಾಂಡಮ್ ತಯಾರಿಸೋ ಕಂಪನಿಯನ್ನು ಗೋದ್ರೆಜ್‌ಗೆ ಮಾರಿದ ರೇಮಂಡ್ಸ್!
ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್‌ಗಳಾದ ಪಾರ್ಕ್ ಅವೆನ್ಯೂ ಫರ್ಪ್ಯೂಮ್, ಕಾಮಸೂತ್ರ ಕಾಂಡಮ್‌ಗಳನ್ನು ಉತ್ಪಾದನೆ ಮಾಡುವ ಕಂಪನಿಯಾದ ಆರ್‌ಸಿಸಿಎಲ್‌ಅನ್ನು ರೇಮಂಡ್ ಕಂಪನಿ, ಗೋದ್ರೇಜ್ ಕಂಪನಿಗೆ ಮಾರಿದೆ. ಇದರ ಒಟ್ಟು ಡೀಲ್‌ನ ಮೊತ್ತ 2825 ಕೋಟಿ ರೂಪಾಯಿಗಳಾಗಿದೆ.
ಮುಂಬೈ (ಏ.27): ತ್ವರಿತ ಮಾರಾಟದ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ದೈತ್ಯ ಕಂಪನಿಯಾದ ಗೋದ್ರೇಜ್ ಕನ್ಶುಮರ್ ಪ್ರಾಡಕ್ಟ್‌ಸ್ ಲಿಮಿಟೆಡ್ (ಜಿಸಿಪಿಎಲ್), ಪಾರ್ಕ್ ಅವೆನ್ಯೂ ಪರ್ಫ್ಯೂಮ್, ಕಾಮಸೂತ್ರ ಕಾಂಡಮ್ ಅನ್ನು ಉತ್ಪಾದನೆ ಮಾಡುವ ರೇಮಂಡ್ ಕಂಪನಿಯ ರೇಮಂಡ್ ಕನ್ಶುಮರ್ ಕೇರ್ ಲಿಮಿಟೆಡ್ (ಆರ್‌ಸಿಸಿಎಲ್) ಕಂಪನಿಯನ್ನು ಖರೀದಿ ಮಾಡಿದೆ. ಇದು ರೇಮಂಡ್ ಕಂಪನಿಯ ಪ್ರಖ್ಯಾತ ಎಫ್‌ಎಂಸಿಜಿ ಕಂಪನಿಯಾಗಿದೆ. ಜಿಸಿಪಿಎಲ್ ಒಟ್ಟು 2,825 ಕೋಟಿ ರೂಪಾಯಿಗೆ ಆರ್‌ಸಿಸಿಎಲ್‌ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಒಪ್ಪಂದದ ಕುರಿತು ಜಿಸಿಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಧೀರ್ ಸೀತಾಪತಿ ಗುರುವಾರ (ಏಪ್ರಿಲ್ 27) ಮಾಹಿತಿ ನೀಡಿದ್ದಾರೆ. 2023ರ ಮೇ 10ರೊಳಗೆ ಒಪ್ಪಂದದ ಮೊತ್ತವನ್ನು ರೇಮಂಡ್ ಕನ್ಸ್ಯೂಮರ್ ಕೇರ್ ಲಿಮಿಟೆಡ್‌ಗೆ ನೀಡಲಾಗುವುದು ಎಂದು ಜಿಸಿಪಿಎಲ್ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ರೇಮಂಡ್ ಕನ್ಸ್ಯೂಮರ್ ಕೇರ್ ಕಂಪನಿಯು ಪಾರ್ಕ್ ಅವೆನ್ಯೂ, ಕಾಮಸೂತ್ರ ಮತ್ತು ಕೆಎಸ್ ಸ್ಪಾರ್ಕ್‌ನಂತಹ ಪ್ರಖ್ಯಾತ ಬ್ರ್ಯಾಂಡ್‌ಗಳೊಂದಿಗೆ ವೈಯಕ್ತಿಕ ಆರೈಕೆ, ಲೈಂಗಿಕ ಕ್ಷೇಮ ಮತ್ತು ಮನೆಯ ಆರೈಕೆಯಂತಹ ವಿಭಾಗಗಳಲ್ಲಿ ಉತ್ಪನ್ನಗಳನ್ನು ಹೊಂದಿದೆ. ಇನ್ನೊಂದೆಡೆ ಗೋದ್ರೇಜ್‌ನ ಜಿಸಿಪಿಎಲ್, ಪ್ರಸ್ತುತ ಹೇರ್ ಕೇರ್, ಹೋಮ್ ಕೇರ್ ಮತ್ತು ಪರ್ಸನಲ್ ಕೇರ್ ವಿಭಾಗಗಳಲ್ಲಿ ಉತ್ಪನ್ನಗಳನ್ನು ಹೊಂದಿದೆ.
ರೇಮಂಡ್ ಷೇರುಗಳು ಬಿಗ್ ಜಂಪ್: ಇನ್ನು ಗೋದ್ರೇಜ್ ಕಂಪನಿಯು ಆರ್‌ಸಿಸಿಎಲ್‌ಅನ್ನು ಖರೀದಿ ಮಾಡಿದ ಸುದ್ದಿ ಖಚಿತವಾದಂತೆ, ಷೇರು ಮಾರುಕಟ್ಟೆಯಲ್ಲಿ ರೇಮಂಡ್ ಕಂಪನಿಯ ಷೇರುಗಳು ಶೇ.6ರಷ್ಟು ಏರಿಕೆ ಕಂಡಿದೆ. ಗುರುವಾರದ ವ್ಯವಹಾರದ ಅಂತ್ಯಕ್ಕೆ ರೇಮಂಡ್ ಷೇರುಗಳು 1711 ಮುಖಬೆಲೆ ಹೊಂದಿದೆ. ಗುರುವಾರ ಒಂದೇ ದಿನ ಷೇರಿನ ಬೆಲೆಯಲ್ಲಿ 99.15 ರೂಪಾಯಿ ಏರಿಕೆಯಾಗಿದೆ. ಇನ್ನೊಂದೆಡೆ ಜಿಸಿಪಿಎಲ್‌ನ ಷೇರು ಬೆಲೆಯಲ್ಲಿ ಶೇ.2.19ರಷ್ಟು ಇಳಿಕೆಯಾಗಿದ್ದು, ಪ್ರತಿ ಷೇರಿನ ಬೆಲೆಯಲ್ಲಿ 21.35 ರೂಪಾಯಿ ಇಳಿಕೆಯಾಗಿ 954.80 ರೂಪಾಯಿಗೆ ಕೊನೆಯಾಗಿದೆ.
2022ರ ಹಣಕಾಸು ವರ್ಷದ ವೇಳೆಗೆ ಗ್ರಾಹಕ ಆರೈಕೆ ವ್ಯವಹಾರದಲ್ಲಿ ರೇಮಂಡ್ಸ್ 47.66% ಪಾಲನ್ನು ಹೊಂದಿದೆ. ಹಾಗಿದ್ದರೂ ಕೆಲವು ವರ್ಷಗಳಿಂದ, ರೇಮಂಡ್ ತನ್ನ ಎಫ್‌ಎಂಸಿಜಿ ಕಂಪನಿಯನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿತ್ತು. ಗೋದ್ರೇಜ್‌ಗೂ ಮುನ್ನ, ರೇಮಂಡ್ಸ್ 2022 ರಲ್ಲಿ ಸುಮಾರು 2,500 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಗುಡ್ ಗ್ಲಾಮ್‌ನೊಂದಿಗೆ ಮಾತುಕತೆ ನಡೆಸುತ್ತಿತ್ತು, ಆದರೆ ಮೌಲ್ಯಮಾಪನ ಸಮಸ್ಯೆಗಳಿಂದಾಗಿ ಎರಡು ಕಂಪನಿಗಳ ಒಪ್ಪಂದ ಕಾರ್ಯರೂಪಕ್ಕೆ ಬಂದಿರಲಿಲ್ಲ.
RK ಸ್ಟುಡಿಯೋಸ್ ಬಳಿಕ ಗೋದ್ರೇಜ್ ಪ್ರಾಪರ್ಟೀಸ್ ಪಾಲಾದ ರಾಜ್ ಕಪೂರ್ ಐಕಾನಿಕ್ ಬಂಗಲೆ
ಕಾಂಡಮ್, ಪರ್ಫ್ಯೂಮ್ ವ್ಯವಹಾರಕ್ಕೆ ಇಳಿದ ಗೋದ್ರೇಜ್: ರೇಮಂಡ್ಸ್ ಜೊತೆಗಿನ ಒಪ್ಪಂದದ ನಂತರ ಜಿಸಿಪಿಎಲ್ ಫರ್ಪ್ಯೂಮ್‌ಮತ್ತು ಲೈಂಗಿಕ ಕ್ಷೇಮ ವರ್ಗಕ್ಕೆ ಪ್ರವೇಶ ಪಡೆದುಕೊಂಡಿದೆ. ಇದರ ಜೊತೆಗೆ, ಪುರುಷರ ಗ್ರೂಮಿಂಗ್ ವಿಭಾಗದಲ್ಲಿ ರೇಮಂಡ್ಸ್ ಪ್ರಾಬಲ್ಯ ಹೊಂದಿರುವುದರಿಂದ ಜಿಸಿಪಿಎಲ್‌ನ ವೈಯಕ್ತಿಕ ಆರೈಕೆ ಕ್ಷೇತ್ರವು ಸಹ ಉತ್ತೇಜನವನ್ನು ಪಡೆದುಕೊಳ್ಳಲಿದೆ. 2022 ರ ಹಣಕಾಸು ವರ್ಷದಲ್ಲಿ ರೇಮಂಡ್‌ನ ಗ್ರಾಹಕ ಆರೈಕೆ ವ್ಯವಹಾರವು 522 ಕೋಟಿ ರೂಪಾಯಿಗಳ ಮಾರಾಟವನ್ನು ದಾಳು ಮಾಡಿತ್ತು. ಇದರ ಹೊರತಾಗಿ, ಪಾರ್ಕ್ ಅವೆನ್ಯೂ ಮತ್ತು ಕೆಎಸ್ ಸ್ಪಾರ್ಕ್‌ನಂತಹ ಬ್ರ್ಯಾಂಡ್‌ಗಳೊಂದಿಗೆ ಪುರುಷರ ಡಿಯೋಡರೆಂಟ್ ವಿಭಾಗದಲ್ಲಿ ಕಂಪನಿಯು ಪ್ರಬಲ ಮಾರುಕಟ್ಟೆ ಸ್ಥಾನವನ್ನು ಹೊಂದಿದೆ.
ಸೋಪಿನ ಬೆಲೆಯಲ್ಲಿ ಶೇ.15ರಷ್ಟು ಇಳಿಕೆ;ಲಕ್ಸ್, ಲೈಫ್ ಬಾಯ್, ಗೋದ್ರೇಜ್ ಸೋಪುಗಳು ಅಗ್ಗ
ರೇಮಂಡ್‌ನ ವಾರ್ಷಿಕ ವರದಿಯ ಪ್ರಕಾರ, ಕೆಎಸ್ ಸ್ಪಾರ್ಕ್ ಡಿಯೋ ಫರ್ಪ್ಯೂಮ್ 2022ರ ಹಣಕಾಸು ವರ್ಷದಲ್ಲಿ ನಗರ ಪ್ರದೇಶದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಪ್ರಾಬಲ್ಯ ಹೊಂದಿದೆ. ಆದರೆ ಕಾಮಸೂತ್ರ ಭಾರತದಲ್ಲಿ ಬ್ರಾಂಡೆಡ್ ಕಾಂಡೋಮ್‌ಗಳಲ್ಲಿ ಮೂರನೇ ಅತಿದೊಡ್ಡ ಬ್ರ್ಯಾಂಡ್ ಎನಿಸಿದೆ. ಇದು ಪ್ರತಿ ವರ್ಷ 400 ಮಿಲಿಯನ್ ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರ ಉತ್ಪಾದನಾ ಘಟಕ ಔರಂಗಾಬಾದ್‌ನಲ್ಲಿದೆ.