ಶುರುವಾಯಿತು ಇಳಿಕೆಯ ಪರ್ವ: ಬಂಗಾರದ ಬೆಲೆ ತುಂಬ ಅಪೂರ್ವ!

ಡಿಸೆಂಬರ್ ಆರಂಭದಲ್ಲಿ ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ ಇಳಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಶೇ.0.05ರಷ್ಟು ಇಳಿಕೆ ಕಂಡ ಚಿನ್ನದ ದರ| ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೀಗ 37,551 ರೂ.| ಬೆಳ್ಳಿ ಬೆಲೆಯಲ್ಲಿ ಒಟ್ಟು ಶೇ.0.09ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಇದೀಗ 43,469 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1,463.59 ಡಾಲರ್| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಬೆಳ್ಳಿ ಬೆಲೆ 16.63 ಡಾಲರ್|

God and Silver Prices For Sixth Consecutive Day in Market

ನವದೆಹಲಿ(ಡಿ.10): ಗಗನಕ್ಕೇರಿದ್ದ ಈರುಳ್ಳಿ ಬೆಲೆ ಇದೀಗ ಇಳಿಕೆಯತ್ತ ಮುಖ ಮಾಡಿದೆ. ಈ ಮಧ್ಯೆ ಸತತ ಆರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. 

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.05ರಷ್ಟು ಇಳಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ಇದೀಗ 37,551 ರೂ. ಆಗಿದೆ.

ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ, ಬೆಳ್ಳಿ ಬೆಲೆ ಕೂಡ ಕಡಿಮೆ!

ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಒಟ್ಟು 2,400 ರೂ. ಇಳಿದಿರುವುದು ಗಮನಾರ್ಹ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡಿದ್ದು, ಒಟ್ಟು ಶೇ.0.09ರಷ್ಟು ಇಳಿಕೆ ದಾಖಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 43,469 ರೂ. ಆಗಿದೆ.

ಡಿಸೆಂಬರ್ ಶುಭಾರಂಭ: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ!

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಗಮನಾರ್ಹ ಇಳಿಕೆ ಕಂಡಿದ್ದು, ಒಟ್ಟು ಶೇ.1.2ರಷ್ಟು ಇಳಿಕೆ ದಾಖಲಾಗಿದೆ. ಈ ಮೂಲಕ ಒಂದು ಔನ್ಸ್ ಚಿನ್ನದ ಬೆಲೆ 1,463.59 ಡಾಲರ್ ಆಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಕೂಡ ಶೇ.0.1ರಷ್ಟು ಕಡಿಮೆಯಾಗಿದ್ದು, ಒಂದು ಔನ್ಸ್ ಬೆಳ್ಳಿಯ ಬೆಲೆ 16.63 ಡಾಲರ್ ಆಗಿದೆ.

Latest Videos
Follow Us:
Download App:
  • android
  • ios