ಗೋಏರ್ ನಿಂದ 1 ಮಿಲಿಯನ್ ಸೀಟು ಮಾರಾಟ: ದರ ಕೇವಲ...!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 9:09 PM IST
GoAir offers discount on 1 million seats
Highlights

ಗೋಏರ್‌ನಿಂದ 1 ಮಿಲಿಯನ್ ಸೀಟು ಮಾರಾಟ! ಕಡಿಮೆ ದರದಲ್ಲಿ ಟಿಕೆಟ್ ಮಾರಾಟ! ಏಕಮುಖ ಪ್ರಯಾಣಕ್ಕಾಗಿ 1,099 ರೂ.! 

ನವದೆಹಲಿ(ಆ.4): ಬಜೆಟ್ ಕ್ಯಾರಿಯರ್, ಖಾಸಗಿ ವಿಮಾನಯಾನ ಸಂಸ್ಥೆ ಗೋಏರ್ ತನ್ನ 10 ಲಕ್ಷ ಸೀಟುಗಳನ್ನು ಮಾರಾಟ ಮಾಡಿದೆ. ಅತೀ ಕಡಿಮೆ ದರದಲ್ಲಿ ಟಿಕೆಟ್ ಮಾರಾಟ ಮಾಡುತ್ತಿದೆ. 

ಇಡೀ ದೇಶಾದ್ಯಂತ ಅನ್ವಯವಾಗುವಂತೆ ಏಕಮುಖ ಪ್ರಯಾಣಕ್ಕಾಗಿ 1,099 ರೂ. ನ್ನು ಸಂಸ್ಥೆ ನಿಗದಿಗೊಳಿಸಿದೆ. ಜೊತೆಗೆ, ಗ್ರಾಹಕರು 'ಫೆಸ್ಟಿವಲ್ ಸೀಸನ್' ಮಾರಾಟದ ಅಡಿಯಲ್ಲಿ ಎಲ್ಲಾ ಬುಕಿಂಗ್ ಡಿಜಿಟಲ್ ವ್ಯಾಲೇಟ್ ಕಂಪನಿ ಪೇಟಿಎಂ ಮೂಲಕ ಪಾವತಿಸಿದರೆ, 250 ರೂ ವರೆಗೆ ಶೇ. ೫ ರಷ್ಟು ಹೆಚ್ಚುವರಿ ಕ್ಯಾಶ್ ಬ್ಯಾಕ್ ಪಡೆಯಬಹುದು ಎಂದು ತಿಳಿಸಿದೆ.

ಈ ಟಿಕೆಟ್ ಗಳು ಇಂದಿನಿಂದಲೇ ಖರೀದಿಸಲು ವಕಾಶ ನೀಡಲಾಗಿದ್ದು, ಆಗಸ್ಟ್ 9 ರವರೆಗೆ ಈ ಯೋಜನೆ ಲಭ್ಯವಿರುತ್ತದೆ.  ಅಲ್ಲದೇ ಈ ಯೋಜನೆಯನ್ನು ಡಿಸೆಂಬರ್ ವರೆಗೂ ವಿಸ್ತರಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಆಗಸ್ಟ್ 4 ರಿಂದ ಡಿಸೆಂಬರ್ 31, 2018 ರ ಅವಧಿಯಲ್ಲಿ ಪ್ರಯಾಣಿಕರಿಗೆ ರೂ 1,099 ರೂ. ದರವನ್ನು ಪ್ರಾರಂಭಿಸುವ ಮೂಲಕ ಗೋಏರ್ ಅತ್ಯಂತ ಕಡಿಮೆ ವೆಚ್ಛದ ವಿಮಾನ ಪ್ರಯಾಣದ ಅವಕಾಶ ನೀಡುತ್ತಿದೆ.

ಗೋಏರ್ ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬುಕ್ ಮಾಡಿದರೆ ಗ್ರಾಹಕರು ರೂ 3,000 ವರೆಗಿನ ವಿಶೇಷ ಆಫರ್ ಗಳನ್ನು ಕೂಡ ಪಡೆಯಬಹುದಾಗಿದೆ. ವಾಡಿಯಾ ಗ್ರೂಪ್ ಮಾಲೀಕತ್ವದ ಗೋಏರ್ ಸಂಸ್ಥೆ ​​ಪ್ರಸ್ತುತ 23 ದೇಶೀಯ ಸ್ಥಳಗಳಿಗೆ ವಿಮಾನ ಸೌಲಭ್ಯ ನೀಡುತ್ತಿದೆ.

loader