ಮೇ 24ರಿಂದ ಗೋ ಫಸ್ಟ್‌ ವಿಮಾನ ಸಂಚಾರ ಮತ್ತೆ ಆರಂಭ ಸಾಧ್ಯತೆ

ದಿವಾಳಿಯಿಂದ ರಕ್ಷಣೆ ಕೋರಿ ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಸೀಮಿತ ವಿಮಾನಗಳೊಂದಿಗೆ ಮೇ 24ರಿಂದ ಮತ್ತೆ ಸಂಚಾರ ಆರಂಭಿಸಲಿದೆ ಎಂದು ವರದಿಯೊಂದು ತಿಳಿಸಿದೆ.

Go First flights are likely to resume from May 24 akb

ನವದೆಹಲಿ: ದಿವಾಳಿಯಿಂದ ರಕ್ಷಣೆ ಕೋರಿ ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಸೀಮಿತ ವಿಮಾನಗಳೊಂದಿಗೆ ಮೇ 24ರಿಂದ ಮತ್ತೆ ಸಂಚಾರ ಆರಂಭಿಸಲಿದೆ ಎಂದು ವರದಿಯೊಂದು ತಿಳಿಸಿದೆ. ವಾಡಿಯಾ ಗ್ರೂಪ್‌ ಒಡೆತನದ ಕಂಪನಿ ಸಾಧ್ಯವಾದಷ್ಟುಬೇಗ ಸಂಚಾರವನ್ನು ಮತ್ತೆ ಆರಂಭಿಸಲು ನಿರ್ಧರಿಸಿದೆ. 23 ವಿಮಾನಗಳೊಂದಿಗೆ ಸಂಚಾರ ಪುನಾರಂಭಿಸಬಹುದು ಎಂದು ಮೂಲಗಳು ಹೇಳಿವೆ. ಮೇ 2ರವರೆಗೆ ದೆಹಲಿಯಲ್ಲಿ 51 ಮತ್ತು ಮುಂಬೈನ 37 ನಿರ್ಗಮನ ಕೇಂದ್ರಗಳಲ್ಲಿ ಗೋಫಸ್ಟ್‌ 27 ವಿಮಾನಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ವಿಮಾನಯಾನ ಸಂಸ್ಥೆಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಕರಣ ಆಡಳಿತ ಮಂಡಳಿಯನ್ನು ಅಮಾನತು ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧಿಕರಣ ನೇಮಕ ಮಾಡಿರುವ ಮಧ್ಯಸ್ಥಿಕೆದಾರರ ಜೊತೆಗೆ ಗೋಫಸ್ಟ್‌ (Go fast) ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ಸರ್ಕಾರದ ಬಿಗಿ ಹಿಡಿತದಲ್ಲಿದ್ದ ವಾಯುಯಾನ ಕ್ಷೇತ್ರ ದೇಶದಲ್ಲಿ ಖಾಸಗಿ ವಲಯಕ್ಕೂ ಮುಕ್ತವಾಗಿದ್ದು 1994ರಲ್ಲಿ. ಅಂದಿನಿಂದ ಇಂದಿನವರೆಗೆ ಕನಿಷ್ಠ 27 ವಿಮಾನ ಕಂಪನಿಗಳು ಒಂದೋ ಸೇವೆಯನ್ನು ಸ್ಥಗಿತಗೊಳಿಸಿವೆ ಇಲ್ಲವೇ ಸೇವೆ ಮುಂದುವರಿಸಲು ಆಗದೆ ಮಾರಾಟ ಅಥವಾ ವಿಲೀನ ಆಗಿವೆ ಎಂದು ಉದ್ಯಮ ವಲಯ ಮಾಹಿತಿ ನೀಡಿದೆ. ಇದರಿಂದಾಗಿ ಹಂತಹಂತವಾಗಿ ವೈಮಾನಿಕ ಉದ್ಯಮ ವಲಯ ಕೆಲವೇ ಕಂಪನಿಗಳ ಹಿಡಿತಕ್ಕೆ ಸಿಕ್ಕಿಬಿದ್ದಿದೆ ಎಂದು ಉದ್ಯಮ ವಲಯ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಮೊದಲು ಸೇವೆ ಸ್ಥಗಿತಗೊಳಿಸಿದ ಖಾಸಗಿ ವಿಮಾನಯಾನ ಕಂಪನಿ ಈಸ್ಟ್‌ ವೆಸ್ಟ್‌ ಟ್ರಾವೆಲ್ಸ್‌ ಅಂಡ್‌ ಟ್ರೇಡ್‌ ಲಿಂಕ್‌ ಲಿಮಿಟೆಡ್‌. ಉದ್ಯಮ ಖಾಸಗಿ ವಲಯಕ್ಕೆ ತೆರೆದುಕೊಂಡ ಎರಡೇ ವರ್ಷದಲ್ಲಿ ಇದು ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಅದೇ ವರ್ಷ ಮೋದಿಲುಫ್ಟ್ ಎಂಬ ಕಂಪನಿ ಕಾರ್ಯಾಚರಣೆ ನಿಲ್ಲಿಸಿತ್ತು.

ಬಾಂಬೆ ಡೈಯಿಂಗ್‌ ಖ್ಯಾತಿಯ ವಾಡಿಯಾ ಗ್ರೂಪ್‌ನ ಗೋ ಫಸ್ಟ್‌ ದಿವಾಳಿಗೆ ಕಾರಣ ಏನು?

996ರಲ್ಲಿ ಎನ್‌ಇಪಿಸಿ ಮಿಕಾನ್‌, ಸ್ಕೈಲೈನ್‌ (Skyline), 2000ರಲ್ಲಿ ಲುಫ್ತಾನ್ಸಾ ಕಾರ್ಗೋ (Lufthansa Cargo), 2007ರಲ್ಲಿ ಇಂಡಸ್‌ ಏರ್‌ವೇಸ್‌ (Indus Airways), 2008ರಲ್ಲಿ ಜಾಗ್ಸನ್‌, 2009ರಲ್ಲಿ ಎಂಡಿಎಲ್‌ಆರ್‌, 2010ರಲ್ಲಿ ಪ್ಯಾರಾಮೌಂಟ್‌, 2011ರಲ್ಲಿ ಆರ‍್ಯನ್‌ ಕಾರ್ಗೋ, 2012ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌, 2014ರಲ್ಲಿ ಡೆಕ್ಕನ್‌ ಕಾರ್ಗೋ, 2017ರಲ್ಲಿ ಏರ್‌ ಕಾರ್ನಿವಲ್‌ (Air Carnival), ಏರ್‌ ಪೆಗಾಸಸ್‌, ರೆಲಿಗೇರ್‌ ಏವಿಯೇಷನ್‌(Religare Aviation), ಏರ್‌ ಕಾಸ್ಟಾ, ಕ್ವಿಕ್‌ಜೆಟ್‌ ಕಾರ್ಗೋ ಬಂದ್‌ ಆಗಿದ್ದವು. 2019ರಲ್ಲಿ ಜೆಟ್‌ ಏರ್‌ವೇಸ್‌ ಬಂದಾಗಿತ್ತು. ಈ ಮೊದಲು ಸಹಾರಾ ಏರ್‌ಲೈನ್ಸ್‌ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳಿಕ ಜೆಟ್‌ ಲೈಟ್‌ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಸಂಸ್ಥೆ ಕೂಡಾ 2019ರಲ್ಲಿ ಬಾಗಿಲು ಹಾಕಿತ್ತು. 2020ರಲ್ಲಿ ಝೂಮ್‌ ಏರ್‌, ಡೆಕ್ಕನ್‌ ಚಾರ್ಟರ್ಡ್‌ ಹಾಗೂ ಏರ್‌ ಒಡಿಶಾ ಏವಿಯೇಷನ್‌ ಕಂಪನಿಗಳು ಸೇವೆ ನಿಲ್ಲಿಸಿದ್ದವು, 2022ರಲ್ಲಿ ಹೆರಿಟೇಜ್‌ ಏವಿಯೇಷನ್‌ ಕಂಪನಿ ಸೇವೆ ನಿಲ್ಲಿಸಿತ್ತು ಎಂದು ಉದ್ಯಮ ವಲಯ ತಿಳಿಸಿದೆ.

ವಾಡಿಯಾ ಗ್ರೂಪ್‌ನ ಗೋ ಫಸ್ಟ್‌ ದಿವಾಳಿಗೆ ಕಾರಣ ಏನು?

17 ವರ್ಷಗಳ ಹಿಂದೆ ಆರಂಭವಾಗಿದ್ದ ಗೋ ಫಸ್ಟ್‌ ಪ್ರಸಕ್ತ ಒಟ್ಟಾರೆ 9000 ಕೋಟಿ ರು. ಸಾಲದ ಬಾಧೆ ಹೊಂದಿದೆ. ಎಂಜಿನ್‌ ಸಮಸ್ಯೆಯ ಪರಿಣಾಮ 2022ರಲ್ಲಿ ಮಾರುಕಟ್ಟೆಯಲ್ಲಿ ಶೆ.8.8ರಷ್ಟು ಪಾಲು ಹೊಂದಿದ್ದ ಸಂಸ್ಥೆ ಪ್ರಸಕ್ತ ವರ್ಷದ ಪಾಲು ಶೇ.6ರ ಆಸುಪಾಸಿಗೆ ಕುಸಿದಿತ್ತು. ವಿಮಾನಯಾನ ಸಂಸ್ಥೆ ಪುನರುಜ್ಜೀವನಕ್ಕಾಗಿ ಪ್ರವರ್ತಕರು ಕಳೆದ 3 ವರ್ಷದಲ್ಲಿ 3200 ಕೋಟಿ ಹೂಡಿಕೆ ಮಾಡಿದ್ದರು. ಜೊತೆಗೆ ಐಪಿಐ ಬಿಡುಗಡೆ ಮೂಲಕ ಹಣ ಸಂಗ್ರಹಕ್ಕೂ ಕಂಪನಿ ಯೋಜಿಸಿತ್ತು. ಆದರೆ ಒಂದಾದ ಮೇಲೊಂದರಂತೆ ವಿಮಾನಗಳ ಸಂಚಾರ ರದ್ದಾಗಿ ಕಂಪನಿಯ ಎಲ್ಲಾ ಆಸೆಗಳಿಗೆ ಪೆಟ್ಟು ನೀಡಿತ್ತು. 

ಗೋ ಫಸ್ಟ್‌ ವಿಮಾನ ಸೇವೆ ದಿವಾಳಿ ಎಫೆಕ್ಟ್‌: ದೇಶದಲ್ಲಿ ವಿಮಾನ ಟಿಕೆಟ್‌ ದರ 4 - 6 ಪಟ್ಟು ಹೆಚ್ಚಳ

Latest Videos
Follow Us:
Download App:
  • android
  • ios