ಸಿಂಗಾಪುರ (ಮಾ. 31):  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸೋಮವಾರ ಹೊಸ ಕನಿಷ್ಠಕ್ಕೆ ಕುಸಿದಿದ್ದು, ಪ್ರತಿ ಬ್ಯಾರಲ್‌ಗೆ 23 ಡಾಲರ್‌ನಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಕೊರೋನಾವೈರಸ್‌ ಜಗತ್ತಿನಾದ್ಯಂತ ಹರಡುತ್ತಿರುವುದರಿಂದ ಮತ್ತು ಅಮೆರಿಕದಲ್ಲಿ ವೈರಸ್‌ ಸೋಂಕು ಹೆಚ್ಚುತ್ತಾ ಸಾಗಿರುವುದರಿಂದ ಕಚ್ಚಾತೈಲ ಬೆಲೆ 17 ವರ್ಷಗಳ ಕನಿಷ್ಠಕ್ಕೆ ಕುಸಿದಿದೆ.

ದೇಶದ ಜನತೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ

ವಿವಿಧ ದೇಶಗಳಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಮತ್ತು ಪ್ರಯಾಣ ನಿರ್ಬಂಧ ಹೇರಿರುವುದರಿಂದ ಕೆಲ ವಾರಗಳಿಂದ ಕಚ್ಚಾತೈಲದ ಬೇಡಿಕೆ ಕುಸಿಯುತ್ತಿದೆ. ಅದರ ನಡುವೆ ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ತೈಲಬೆಲೆ ಸಮರ ನಡೆಯುತ್ತಿದ್ದು, ಎರಡೂ ದೇಶಗಳು ತೈಲೋತ್ಪಾದನೆಯನ್ನು ಹೆಚ್ಚಿಸಿವೆ. ಹೀಗಾಗಿ ಬೆಲೆ ಕುಸಿಯುತ್ತಿದೆ ಎಂದು ತೈಲ ಮಾರುಕಟ್ಟೆತಜ್ಞರು ಹೇಳಿದ್ದಾರೆ.

ಆದರೆ ಭಾರತದಲ್ಲಿ ಕೇಂದ್ರ ಸರ್ಕಾರ, ಅಬಕಾರಿ ಸುಂಕ ಹೆಚ್ಚಳ ಮಾಡುತ್ತಿರುವ ಕಾರಣ, ಇಳಿಕೆಯ ಲಾಭ ಗ್ರಾಹಕರಿಗೆ ವರ್ಗ ಆಗುತ್ತಿಲ್ಲ. ಇತ್ತೀಚೆಗೆ ಪ್ರತಿ ಲೀ.3 ರು.ನಷ್ಟುಸುಂಕ ಏರಿಸಿದ್ದ ಸರ್ಕಾರ, ಮತ್ತೂ 8 ರು.ನಷ್ಟುಏರಿಸುವ ಅನುಮತಿಯನ್ನು ಇತ್ತೀಚೆಗೆ ಸಂಸತ್ತಿನ ಮೂಲಕ ಪಡೆದುಕೊಂಡಿತ್ತು.