ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ


ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನಗಳ ಬೆಂಗಾವಲು ಪಡೆಯ ಮೇಲೆ "ಶಂಕಿತ ಭಯೋತ್ಪಾದಕರು" ಗುಂಡಿನ ದಾಳಿ ನಡೆದಿದ್ದಾರೆ. ಇದರ ಬೆನ್ನಲ್ಲಿಯೇ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
 

Jammu and Kashmir Poonch Search operation launched after Army vehicles attacked by terrorists san

ನವದೆಹಲಿ (ಜ.12): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನಗಳ ಬೆಂಗಾವಲು ಪಡೆಯ ಮೇಲೆ "ಶಂಕಿತ ಭಯೋತ್ಪಾದಕರು" ಗುಂಡಿನ ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲಿಯೇ ಇಡೀ ಪ್ರದೇಶದಲ್ಲಿ ಭಾರತೀಯ ಸೇನೆ ಬೃಹತ್‌ ಶೋಧ ಕಾರ್ಯಾಚರಣೆ ಆರಂಭ ಮಾಡಿದೆ. ದಾಳಿಕೋರರ ಮೇಲೆ ಯೋಧರು ಪ್ರತಿಯಾಗಿ ಗುಂಡು ಹಾರಿಸಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇಂಡಿಯನ್ ಆರ್ಮಿ ಎಕ್ಸ್ ಹ್ಯಾಂಡಲ್‌ನ ಟ್ವೀಟ್ ಪ್ರಕಾರ, ಮಂಗಳವಾರ ಸಂಜೆ 6 ಗಂಟೆಗೆ ಪೂಂಚ್‌ನ ಕೃಷ್ಣ ಘಾಟಿ ಬಳಿಯ ಕಾಡಿನಲ್ಲಿ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ. ಇಂದು ಸುಮಾರು ಸಂಜೆ 6 ಗಂಟೆ ಸಮಯದಲ್ಲಿ, ಪೂಂಚ್‌ ಸೆಕ್ಟರ್‌ ಬಳಿಕ ಕೃಷ್ಣಾ ಘಾಟಿಯ ಕಾಡಿನಲ್ಲಿ ಶಂಕಿತ ಭಯೋತ್ಪಾದಕರು ಭದ್ರತಾ ಪಡೆಗಳ ಬೆಂಗಾವಲು ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ. ಸೇನಾಪಡೆಗಳಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಜಮ್ಮು ಕಾಶ್ಮೀರ ಪೊಲೀಸ್‌ ಹಾಗೂ ಇಂಡಿಯನ್‌ ಆರ್ಮಿ ಜಂಟಿ ಕಾರ್ಯಾಚರಣೆ ಆರಂಭ ಮಾಡಿದೆ' ಎಂದು ತಿಳಿಸಿದೆ. ದಾಳಿಗೆ ಒಳಗಾದ ವಾಹನಗಳು ಭದ್ರತಾ ಸಿಬ್ಬಂದಿಯನ್ನು ಮರಳಿ ಶಿಬಿರಕ್ಕೆ ಸಾಗಿಸುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಪ್ರದೇಶದಲ್ಲಿ ಭಯೋತ್ಪಾದಕರ ಎಲ್ಲಾ ಕಾರ್ಯಗಳನ್ನು ವಿಫಲಗೊಳಿಸಲು ಹೊಸ ವರ್ಷಕ್ಕೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಇನ್ನಷ್ಠು ಪ್ರಖರವಾಗಿ ರೂಪಿಸಲು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಯ ನಂತರ ಈ ಘಟನೆ ನಡೆದಿದೆ. ಕೆಲ ವಾರಗಳ ಹಿಂದೆ ಸೇನಾ ವಾಹನದ ಮೇಲೆ ಪೂಂಚ್‌ ಸೆಕ್ಟರ್‌ನಲ್ಲಿಯೇ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ನಾಲ್ವರು ಸೈನಿಕರನ್ನು ಸಾಯಿಸಿದ ಬಳಿಕ ಈ ಘಟನೆ ನಡೆದಿದೆ.

ಪೂಂಚ್ ಸೆಕ್ಟರ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ, ಭಾರತೀಯ ಸೇನಾ ಮೇಲೆ ಗುಂಡಿನ ಸುರಿಮಳೆ!

ಡಿಸೆಂಬರ್ 21 ರಂದು, ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಪೂಂಚ್ ಜಿಲ್ಲೆಯ ಧಾತ್ಯಾರ್ ಮೋರ್ಹ್ ಬಳಿ ಎರಡು ಸೇನಾ ವಾಹನಗಳ ಮೇಲೆ ದಾಳಿ ಮಾಡಿತು, ಇದರ ಪರಿಣಾಮವಾಗಿ ನಾಲ್ವರು ಸೈನಿಕರು ಸಾವು ಕಂಡಿದ್ದರೆ, ಇಬ್ಬರು ಗಾಯಗೊಂಡಿದ್ದರು.

ಪೂಂಚ್ ಅಟ್ಯಾಕ್‌ ಹೊಣೆ ಹೊತ್ತ ಜೈಷ್‌ ಸಹವರ್ತಿ ಸಂಘಟನೆ: ಸೈನಿಕರ ಮೇಲಿನ ದಾಳಿ ವಿಡಿಯೋ ಮಾಡಿದ್ದ ಉಗ್ರರು!

ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಡಿಸೆಂಬರ್‌ನಲ್ಲಿ ನಡೆದ ಪೂಂಚ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಭಯೋತ್ಪಾದಕರು ದಾಳಿ ಮಾಡಿದ ಸ್ಥಳದಿಂದ ಅತ್ಯಾಧುನಿಕ ಯುಎಸ್ ನಿರ್ಮಿತ ಎಂ4 ಕಾರ್ಬೈನ್ ಅಸಾಲ್ಟ್ ರೈಫಲ್‌ಗಳನ್ನು ಸೇನೆ ವಶಪಡಿಸಿಕೊಂಡಿತ್ತು.

Latest Videos
Follow Us:
Download App:
  • android
  • ios