ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞರ ಪೈಕಿ ಶೇ.56ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದರೆ, ಕೇವಲ ಶೇ.17ರಷ್ಟು ಜನ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದ್ದು, ದಕ್ಷಿಣ ಏಷ್ಯಾ, ಮುಖ್ಯವಾಗಿ ಭಾರತವೂ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದೆ.
ನವದೆಹಲಿ(ಜ.17): 2025ರಲ್ಲಿ ಜಾಗತಿಕ ಆರ್ಥಿಕತೆ ಕುಂಠಿತವಾಗುವ ನಿರೀಕ್ಷೆ ಇದೆ. ಆದರೂ ಈ ಅವಧಿಯಲ್ಲಿ ಭಾರತದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದೆಯೆಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದಾವೋಸ್‌ನಲ್ಲಿ “ಶೀಘ್ರವೇ ವಿಶ್ವ ಆರ್ಥಿಕ ಶೃಂಗ ನಡೆಯಲಿದ್ದು, ಅದಕ್ಕೂ ಮುನ್ನ ವರ್ಲ್ಡ್ ಎಕನಾಮಿಕ್ ಫೋರಂ ಆರ್ಥಿಕ ತಜ್ಞರ ಸಮೀಕ್ಷೆ ನಡೆಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿ ಅನ್ವಯ, '2025ರಲ್ಲಿ ಜಾಗತಿಕ ಆರ್ಥಿಕತೆ ಅನೇಕ ಸವಾಲುಗಳನ್ನು ಎದುರಿಸಲಿದೆ ಎಂದು ತಿಳಿಸಿದೆ.
2024ರಲ್ಲಿ ಅತಿ ಹೆಚ್ಚು ಚಿನ್ನ ರಿಸರ್ವ್ ಮಾಡಿರುವ ಟಾಪ್ 10 ದೇಶಗಳಿವು; 2 ಸ್ಥಾನ ಮುಂದೆ ಜಿಗಿದ ಭಾರತ!
ಜೊತೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞರ ಪೈಕಿ ಶೇ.56ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದರೆ, ಕೇವಲ ಶೇ.17ರಷ್ಟು ಜನ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದ್ದು, ದಕ್ಷಿಣ ಏಷ್ಯಾ, ಮುಖ್ಯವಾಗಿ ಭಾರತವೂ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದೆ.
ಆದರೆ ಯುರೋಪ್‌ನ ಆರ್ಥಿಕತೆ ಪತನವಾಗುವ ಸಾಧ್ಯತೆಯಿದೆ. ಕಡಿಮೆಯಾದ ಗ್ರಾಹಕ ಬೇಡಿಕೆ ಮತ್ತು ದುರ್ಬಲ ಉತ್ಪಾದಕತೆಯಿಂದಾಗಿ ಚೀನಾದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಜಾಗತಿಕ ಆರ್ಥಿಕತೆ ಕುಸಿತಕ್ಕೆ ಸಂರಕ್ಷಣಾ ವಾದ, ಯುದ್ಧಗಳು, ನಿರ್ಬಂಧ ಹಾಗೂ ರಾಷ್ಟ್ರೀಯ ಭದ್ರತಾ ಕಾಳಜಿಗಳೇ ಕಾರಣ ಎನ್ನಲಾಗಿದೆ.
