Asianet Suvarna News Asianet Suvarna News

ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಹೆಚ್ಚು ಆಕರ್ಷಣೀಯವಲ್ಲದ ಕ್ಷೇತ್ರಗಳತ್ತಲೂ ಗಮನ ಹರಿಸಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕರೆ 

Give More Emphasis on Environmental Protection Says Union Minister Nirmala Sitharaman grg
Author
First Published Nov 27, 2022, 6:00 AM IST

ಬೆಂಗಳೂರು(ನ.27):  ಹವಾಮಾನ ಬದಲಾವಣೆ, ಸಿರಿಧಾನ್ಯ ಉತ್ಪಾದನೆ ಹಾಗೂ ರೈತರ ಸ್ಥಿತಿ ಉತ್ತಮಗೊಳಿಸುವಂತಹ ವಿಷಯಗಳ ಬಗ್ಗೆ ನವೋದ್ಯಮಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕರೆ ನೀಡಿದರು.

ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ವನನಂ’ ಸಂಸ್ಥೆ ಏರ್ಪಡಿಸಿದ್ದ ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ರಾಷ್ಟಿ್ರಯ ಮಟ್ಟದ ಶೃಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ಬದಲಾವಣೆ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಈಗಾಗಲೇ ರಕ್ಷಣೆ, ಮರು ಬಳಕೆಯ ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನವೋದ್ಯಮ ತಲುಪಿವೆ. ಆದರೆ ಹೆಚ್ಚು ಆಕರ್ಷಕವಲ್ಲದ ಇಂತಹ ಕ್ಷೇತ್ರಗಳತ್ತ ನವೋದ್ಯಮಗಳು ಗಮನ ಹರಿಸಬೇಕು. ವಿಶೇಷವಾಗಿ ರೈತರ ಸ್ಥಿತಿ ಉತ್ತಮವಾಗಲು, ನಗರ ವಾಸಿಗಳು ಉತ್ತಮ ಆಹಾರ ಸೇವನೆಗೆ ಸಿರಿ ಧಾನ್ಯಗಳ ಮೂಲಕ ಆರೋಗ್ಯ ಒದಗಿಸುವ ಬಗ್ಗೆ ನವೋದ್ಯಮ ಆರಂಭಿಸಬೇಕು. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಬೇಕು, ಆ ಮೂಲಕ ಉದ್ಯೋಗ ಸೃಷ್ಟಿಸಬೇಕು ಎಂದರು.

ಭಾರತದ ಮೊದಲ ಸಾವರಿನ್ ಗ್ರೀನ್ ಬಾಂಡ್ ಯೋಜನೆಗೆ ವಿತ್ತ ಸಚಿವೆ ಅಂಕಿತ; ಏನಿದರ ವಿಶೇಷತೆ?

6 ಶತಕೋಟಿ ಡಾಲರ್‌ ಡಿಜಿಟಲ್‌ ವಹಿವಾಟು:

ದೇಶದಲ್ಲಿ ಡಿಜಿಟಲ್‌ ವಹಿವಾಟು ಹೆಚ್ಚಾಗಿದ್ದು, 2014ರಲ್ಲಿ ಶೇ.17ರಷ್ಟುಜನರು ಬ್ಯಾಂಕ್‌ ಖಾತೆ, ಶೇ.15ರಷ್ಟುಯುವಕರು ಡಿಜಿಟಲ್‌ ಖಾತೆ ಹೊಂದಿದ್ದರು. ಶೇ.37ರಷ್ಟು ಜನರು ಮೊಬೈಲ್‌ ಬಳಸುತ್ತಿದ್ದರು. ಈಗ ಕೋಟ್ಯಂತರ ಜನರು ಡಿಜಿಟಲ್‌ ಐಡಿ ದಾಖಲೆ ಹೊಂದಿದ್ದಾರೆ. ಶೇ.80ಕ್ಕಿಂತ ಹೆಚ್ಚು ಜನರು ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಪ್ರತಿ ತಿಂಗಳು 6 ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಸುತ್ತಿದ್ದಾರೆ ಎಂದು ಸಚಿವರು ವಿವರಿಸಿದರು. ‘ವನನಂ’ ಸಂಸ್ಥೆ ಸಂಸ್ಥಾಪಕ ಕೇಶವ ಇನಾನಿ ಇದ್ದರು.
 

Follow Us:
Download App:
  • android
  • ios