ನವದೆಹಲಿ(ಡಿ.22): 1996ರಲ್ಲಿ ಭಾರತಕ್ಕೆ ಬಂದ ಮೊದಲ ವಿದೇಶಿ ಕಾರು ತಯಾರಿಕಾ ಕಂಪನಿಗಳ ಪೈಕಿ ಒಂದೆನಿಸಿದ ಅಮೆರಿಕದ ಜನರಲ್‌ ಮೋಟರ್ಸ್‌ ಕ್ರಿಸ್‌ಮಸ್‌ಗೂ ಮುನ್ನ ಭಾರತದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.

2017ರಲ್ಲಿ ಸ್ಥಳೀಯ ಉತ್ಪಾದನಾ ಘಟಕಗಳನ್ನು ಜನರಲ್‌ ಮೋಟ​ರ್‍ಸ್ ಸ್ಥಗಿತಗೊಳಿಸಿತ್ತು. ಇದೀಗ ಭಾರತದಲ್ಲಿ ಹೊಂದಿರುವ ಏಕೈಕ ಉತ್ಪಾದನಾ ಘಟಕವನ್ನು ಕೂಡ ಸ್ಥಗಿತಗೊಳಿಸಲಿದೆ. ಪುಣೆಯ ಸಮೀಪದ ತಲೇಗಾಂವ್‌ನನಲ್ಲಿರುವ ಉತ್ಪಾದನಾ ಘಟಕವನ್ನು ಕ್ರಿಸ್‌ಮಸ್‌ನ ಮುನ್ನಾದಿನ ಮುಚ್ಚುವುದಾಗಿ ಜನರಲ್‌ ಮೋಟ​ರ್‍ಸ್ ಘೋಷಿಸಿದೆ. ಶವರ್ಲೆಟ್‌, ಬ್ಯೂಕ್‌ ಮುಂತಾದ ಕಾರುಗಳ ಮೂಲಕ ಜನರಲ್‌ ಮೋಟ​ರ್‍ಸ್ ಭಾರತದಲ್ಲಿ ಪ್ರಸಿದ್ಧಿ ಪಡೆದಿತ್ತು.

ಗುಜರಾತಿನ ಹಲೊಲ್‌ನಲ್ಲಿರುವ ಘಟಕವನ್ನು ಜನರಲ್‌ ಮೋಟ​ರ್‍ಸ್ 2017ರಲ್ಲಿ ಚೀನಾದ ಎಂಜಿ ಮೋಟ​ರ್‍ಸ್ಗೆ ಮಾರಾಟ ಮಾಡಿದೆ. ತಲೇಗಾಂವ್‌ನಲ್ಲಿರುವ ಘಟಕದಲ್ಲಿ ಸದ್ಯ 1800 ಮಂದಿ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ 2021ರ ವರೆಗೆ ವೇತನ ನೀಡುವುದಾಗಿ ಸಂಸ್ಥೆ ತಿಳಿಸಿದೆ.