ಮತ್ತೆ ಇಳಿಕೆಯತ್ತ ಮುಖ ಮಾಡಿದ ತೈಲದರ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆ! ಭಾರತೀಯ ತೈಲ ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ! ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ತೈಲದರ
ನವದೆಹಲಿ(ಅ.30): ಹಲವು ದಿನಗಳ ಹಿಂದೆ ಗಗನಕ್ಕೇರಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದ್ದ ತೈಲೋತ್ಪನ್ನಗಳ ಬೆಲೆ ಕ್ರಮೇಣ ಇಳಿಕೆಯತ್ತ ಸಾಗಿದ್ದು, ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಅಂತರಾಷ್ಟ್ಕೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯವಾಗಿ ಇಳಿಕೆಯಾಗಿದ್ದು, ಅದರ ಪರಿಣಾಮ ಭಾರತೀಯ ತೈಲ ಮಾರುಕಟ್ಟೆಯ ಮೇಲೂ ಬೀರಿದೆ. ಪರಿಣಾಮ ಸತತ 13ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿದೆ.
ಇಂದಿನ ನೂತನ ದರ ಪಟ್ಟಿಯ ಅನ್ವಯ ಪೆಟ್ರೋಲ್ ದರದಲ್ಲಿ 20 ಪೈಸೆಯಷ್ಟು ಮತ್ತು ಡೀಸೆಲ್ ದರದಲ್ಲಿ 7 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 79.55 ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 73.78 ರೂ.ಗೆ ಇಳಿಕೆಯಾಗಿದೆ. ಅಂತೆಯೇ ಮುಂಬೈನಲ್ಲಿ ಪೆಟ್ರೋಲ್ ದರ 85.04 ರೂ.ಗೆ ಮತ್ತು ಡೀಸೆಲ್ ದರ 77.32 ರೂಗೆ ಇಳಿಕೆಯಾಗಿದೆ.
