ಇಂದಿನ ಪೆಟ್ರೋಲ್ ದರ: ಹಿಂದೆ ಕೇಳಿಲ್ಲ, ಮುಂದೆ ಕೇಳೊದೂ ಬೇಡ!
ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ತೈಲದರ! ಹಿಂದಿನ ದಾಖಲೆ ಪುಡಿಪುಡಿ ಮಾಡಿದ ಇಂದಿನ ದರ! ಪ್ರತಿಪಕ್ಷಗಳ ಭಾರತ್ ಬಂದ್‌ಗೆ ಹೆಚ್ಚಿನ ಬಲ! ಎಲ್ಲಾ ಮಹಾನಗರಗಳಲ್ಲಿ ತೈಲದರಲ್ಲಿ ಭಾರೀ ಏರಿಕೆ
ನವದೆಹಲಿ(ಸೆ.7): ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಈ ಹಿಂದಿನ ಎಲ್ಲ ದರ ಏರಿಕೆ ದಾಖಲೆಗಳನ್ನು ಪುಡಿಪುಡಿ ಮಾಡಿ ದರ ಏರಿಕೆಯಾಗುತ್ತಿದೆ.
ದೇಶದ ಹಲವು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶುಕ್ರವಾರವೂ ಗಣನೀಯ ಏರಿಕೆ ಕಂಡಿದೆ. ಹೀಗಾಗಿ ಇದೇ 10ರಂದು ಪ್ರತಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಗೆ ಮತ್ತಷ್ಟು ಬಲ ಬಂದಂತಾಗಿದೆ.
ದೆಹಲಿಯಲ್ಲಿ ಇಂದು ಪ್ರತೀ ಲೀಟರ್ ಪೆಟ್ರೋಲ್ ದರ ಏಕಾಏಕಿ 48 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತೀ ಲೀಟರ್ ಗೆ 79.99 ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಡಿಸೇಲ್ ಬೆಲೆ ಲೀಟರ್ ಗೆ 72.07 ರೂ. ಆಗಿದ್ದು, 52 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ ಲೀ.ಗೆ ಪೆಟ್ರೋಲ್ 87.39 ರೂ ಏರಿಕೆಯಾಗಿದ್ದು, ಡಿಸೇಲ್ 76.51 ರೂ.ಗೆ ಏರಿಕೆಯಾಗಿದೆ.
Petrol & Diesel prices in #Delhi are Rs.79.99 per litre & Rs.72.07 per litre, respectively. Petrol & Diesel prices in #Mumbai are Rs.87.39 per litre & Rs.76.51 per litre, respectively. pic.twitter.com/iBdzvAB2rW
— ANI (@ANI) September 7, 2018
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.19 ರೂ. ಆಗಿದ್ದು, 21 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ ಕೂಡ 73.93 ರೂ. ಆಗಿದ್ದು, 21 ಪೈಸೆ ಏರಿಕೆಯಾಗಿದೆ.
ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ನಿತ್ಯವೂ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಸೆಪ್ಟೆಂಬರ್ 10ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇವೆ.