ಇಂದಿನ ಪೆಟ್ರೋಲ್ ದರ: ಸ್ವಲ್ಪ ಸಿಹಿ, ಸ್ವಲ್ಪ ಖಾರ!

ನಿರಂತರ ತೈಲದರ ಇಳಿಕೆಯಿಂದ ಜನ ಫುಲ್ ಖುಷ್! ನಿತ್ಯವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ! ದೇಶದ ಮಹಾನಗರಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ದರ! ಯಾವ ನಗರದಲ್ಲಿ ಎಷ್ಟು ದರ?, ಇಲ್ಲಿದೆ ಫುಲ್ ಡಿಟೇಲ್ಸ್

Fuel Price Dip Again in All Major Cities

ನವದೆಹಲಿ(ನ.23): ತೈಲದರ ಇಳಿಕೆಯ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿದ್ದು, ಇಂದು ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

ಪ್ರತಿ ದಿನವೂ ಬೆಳಗ್ಗೆ 6 ಗಂಟೆಗೆ ಇಂಧನ ದರಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017 ರಿಂದ ಭಾರತದಲ್ಲಿ ಇಂಧನ ಬೆಲೆಗಳು ದಿನಂಪ್ರತಿ ಪರಿಷ್ಕರಿಸಲ್ಪಡುತ್ತವೆ. ಇದನ್ನು ಕ್ರಿಯಾತ್ಮಕ ಇಂಧನ ಬೆಲೆ ವಿಧಾನ ಎಂದು ಕರೆಯಲಾಗುತ್ತದೆ. 

ಜಾಗತಿಕ ತೈಲ ಬೆಲೆಗಳಲ್ಲಿ ಆಗುವ ಒಂದು ನಿಮಿಷದ ಬದಲಾವಣೆಯನ್ನು ಕೂಡ ಇಂಧನ ಬಳಕೆದಾರರು ಮತ್ತು ವಿತರಕರುಗಳಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಕರೆನ್ಸಿ ವಿನಿಮಯ ದರ ಮತ್ತು ಏರಿಳಿತಗಳ ಆಧಾರದ ಮೇಲೆ ಇಂಧನದ ಚಿಲ್ಲರೆ ಬೆಲೆ ನಿರ್ಧರಿಸಲು ಕೇಂದ್ರ ಸರ್ಕಾರ ತೈಲ ಮಾರುಕಟ್ಟೆ ಕಂಪನಿಗಳಿಗೆ ಅನುಮತಿ ನೀಡಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ನೋಡುವುದಾದರೆ..


ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 75.57 ರೂ.(40 ಪೈಸೆ ಇಳಿಕೆ)

ಡೀಸೆಲ್ ದರ: 70.56 ರೂ.(42 ಪೈಸೆ ಇಳಿಕೆ)

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 81.10 ರೂ.(40 ಪೈಸೆ ಇಳಿಕೆ)

ಡೀಸೆಲ್ ದರ: 73.91 ರೂ.(43 ಪೈಸೆ ಇಳಿಕೆ)

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 77.53 ರೂ.(40 ಪೈಸೆ ಇಳಿಕೆ)

ಡೀಸೆಲ್ ದರ: 72.41 ರೂ.(42 ಪೈಸೆ ಇಳಿಕೆ)

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 78.46 ರೂ.(42 ಪೈಸೆ ಇಳಿಕೆ)

ಡೀಸೆಲ್ ದರ: 74.55 ರೂ.(44 ಪೈಸೆ ಇಳಿಕೆ)

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 76.17 ರೂ.(40 ಪೈಸೆ ಇಳಿಕೆ)

ಡೀಸೆಲ್ ದರ:70.93 ರೂ.(42 ಪೈಸೆ ಇಳಿಕೆ)

Latest Videos
Follow Us:
Download App:
  • android
  • ios