Asianet Suvarna News Asianet Suvarna News

ಜಿಎಸ್ ಟಿ, ಲ್ಯಾಪ್ ಟಾಪ್ ಆಮದು ಸೇರಿದಂತೆ ನವೆಂಬರ್ 1ರಿಂದ ಈ 5 ನಿಯಮಗಳಲ್ಲಿ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ. ಅದರಂತೆ ನವೆಂಬರ್ ತಿಂಗಳಲ್ಲಿ ಕೂಡ 5 ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. 

From November 1 2023 these new financial rules to kick in Check details anu
Author
First Published Oct 31, 2023, 3:36 PM IST

ನವದೆಹಲಿ (ಅ.31): ನಾಳೆಯಿಂದ ನವೆಂಬರ್ ತಿಂಗಳು ಪ್ರಾರಂಭವಾಗಲಿದೆ. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ. ಅದರಂತೆ ನವೆಂಬರ್ ತಿಂಗಳಲ್ಲಿ ಕೂಡ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ ಕೂಡ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ, ಇ-ಚಲನ್, ಲ್ಯಾಪ್ ಟಾಪ್ ಆಮದಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೀಗಾಗಿ ನವೆಂಬರ್ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ಎಂಬ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ನವೆಂಬರ್ ತಿಂಗಳಲ್ಲಿನ ಪ್ರಮುಖ ಹಣಕಾಸಿಗೆ ಸಂಬಂಧಿಸಿದ ಬದಲಾವಣೆಗಳು ಯಾವುವು? ಇಲ್ಲಿದೆ ಮಾಹಿತಿ.

1.ಗ್ಯಾಸ್ ಬೆಲೆ: ಪ್ರತಿ ತಿಂಗಳ ಮೊದಲ ದಿನ ಸಿಎನ್ ಜಿ, ಎಲ್ ಪಿಜಿ ಹಾಗೂ ಪಿಎನ್ ಜಿ ದರಗಳಲ್ಲಿ ಬದಲಾವಣೆಗಳಾಗುತ್ತವೆ. ಆ ತಿಂಗಳಿಗೆ ಸಂಬಂಧಿಸಿ ಇವುಗಳ ದರವನ್ನು ಮೊದಲನೇ ದಿನ ನಿಗದಿಪಡಿಸಲಾಗುತ್ತದೆ.

2.ಜಿಎಸ್ ಟಿ ಇ-ಚಲನ್ : ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಐಸಿ) ಪ್ರಕಾರ ಕನಿಷ್ಠ 100 ಕೋಟಿ ರೂ. ಮೌಲ್ಯದ ಉದ್ಯಮಗಳು ತಮ್ಮ ಜಿಎಸ್ ಟಿ ಚಲನ್ ಅನ್ನು ಇ-ಚಲನ್ ಪೋರ್ಟಲ್ ನಲ್ಲಿ ಮುಂದಿನ 30 ದಿನಗಳೊಳಗೆ ಅಪ್ಲೋಡ್ ಮಾಡಬೇಕು. ಈ ನಿಯಮ ನವೆಂಬರ್ 1ರಿಂದಲೇ ಜಾರಿಗೆ ಬರಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಶುಭಸುದ್ದಿ; ನವೆಂಬರ್ ನಲ್ಲಿ ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ ಸಾಧ್ಯತೆ

3 ಲ್ಯಾಪ್ ಟಾಪ್ ಆಮದು: HSN 8741 ವಿಭಾಗದಡಿಯಲ್ಲಿ ಲ್ಯಾಪ್ ಟಾಪ್ಸ್, ಪಸರ್ನಲ್ ಕಂಪ್ಯೂಟರ್ಸ್ ಹಾಗೂ ಟ್ಯಾಬ್ಲೆಟ್ಸ್ ಸೇರಿದಂತೆ ಏಳು ವಸ್ತುಗಳ ಆಮದಿನ ಮೇಲೆ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆಗಸ್ಟ್ 3ರಿಂದ ನಿರ್ಬಂಧ ವಿಧಿಸಿದೆ. ಒಂದು ದಿನದ ಬಳಿಕ ಆ ನಿರ್ಬಂಧವನ್ನು ಅಕ್ಟೋಬರ್ 31ರ ತನಕ ಸಡಿಲಗೊಳಿಸಿತ್ತು. ಅಂದರೆ ನವೆಂಬರ್ 1ರಿಂದ ಲ್ಯಾಪ್ ಟಾಪ್ ಆಮದಿನ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ. ಈ ಹಿಂದೆ ಆಮದಿಗೆ ಲೈಸೆನ್ಸ್‌ ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ರೂಪಿಸಿತ್ತು. ಆದರೆ, ಇತ್ತೀಚೆಗೆ ಅದನ್ನು ತೆಗೆದುಹಾಕಿ ಅವುಗಳ ಆನ್ಲೈನ್‌ ದೃಢೀಕರಣ ಕಡ್ಡಾಯಗೊಳಿಸಿದೆ.ವಿದೇಶಗಳಿಂದ ತರಿಸಿಕೊಳ್ಳಲಾಗುವ ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ನಿಗಾ ವಹಿಸಲು ಈ ನಿಯಮ ಜಾರಿ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. 

4.ಲ್ಯಾಪ್ಸ್ ಆಗಿರುವ ಎಲ್ ಐಸಿ ಪಾಲಿಸಿಗಳ ನವೀಕರಣ: ಲ್ಯಾಪ್ಸ್ ಆಗಿರುವ ಎಲ್ ಐಸಿ ಪಾಲಿಸಿಗಳ ನವೀಕರಣಕ್ಕೆ ಅಕ್ಟೋಬರ್ 31 ಡೆಡ್ ಲೈನ್. ಹೀಗಾಗಿ ನಾಳೆಯಿಂದ ಅಂದರೆ ನವೆಂಬರ್ 1ರಿಂದ ಲ್ಯಾಪ್ಸ್ ಆಗಿರುವ ಎಲ್ ಐಸಿ ಪಾಲಿಸಿಗಳ ನವೀಕರಣಕ್ಕೆ ಅವಕಾಶವಿಲ್ಲ. ಸಾಮಾನ್ಯವಾಗಿ ಎಲ್ಐಸಿ ಕೆಲವು ಸಂದರ್ಭಗಳಲ್ಲಿ ಮಾತ್ರ ಲ್ಯಾಪ್ಸ್ ಆಗಿರುವ ಪಾಲಿಸಿಗಳ ನವೀಕರಣಕ್ಕೆ ಅವಕಾಶ ನೀಡುತ್ತದೆ. ಈ ನಿಗದಿತ ಅವಧಿ ಬಳಿಕ ನಿಮಗೆ ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ನವೀಕರಿಸಲು ಸಾಧ್ಯವಾಗೋದಿಲ್ಲ. 

ಮೊದಲ ವೇತನವನ್ನು ಎಲ್ಲಿ, ಹೇಗೆ ಹೂಡಿಕೆ ಮಾಡ್ಬೇಕು? ಇಲ್ಲಿದೆ ಟಿಪ್ಸ್

5.ವಹಿವಾಟು ಶುಲ್ಕ: ಈಕ್ವಿಟಿ ಆಧಾರಿತ ವಲಯಗಳಲ್ಲಿ ವಹಿವಾಟುಗಳ ಮೇಲಿನ ಶುಲ್ಕಗಳನ್ನು ಬಾಂಬೆ ಷೇರು ವಿನಿಮಯ ಕೇಂದ್ರ (ಬಿಎಸ್ ಇ) ನವೆಂಬರ್ 1ರಿಂದ ಹೆಚ್ಚಿಸಲಿದೆ. ಅಕ್ಟೋಬರ್ 20ರಂದು ಈ ಸಂಬಂಧ ಬಿಎಸ್ ಇ ಘೋಷಣೆ ಮಾಡಿತ್ತು ಕೂಡ. 3 ಕೋಟಿ ರೂ. ತನಕದ ವಹಿವಾಟುಗಳ ಮೇಲೆ ಪ್ರತಿ ಕೋಟಿಗೆ 500ರೂ. ಶುಲ್ಕ ವಿಧಿಸಲಾಗುತ್ತದೆ. ಒಂದು ವೇಳೆ ವಹಿವಾಟು 3 ಕೋಟಿ ರೂ. ದಾಟಿದರೆ ಹಾಗೂ 100 ಕೋಟಿ ರೂ. ತನಕ ಇದ್ದರೆ ಆಗ ಪ್ರತಿ ಕೋಟಿಗೆ  3,750ರೂ. ಶುಲ್ಕ ವಿಧಿಸಲಾಗುತ್ತದೆ. 

Follow Us:
Download App:
  • android
  • ios