ಮಕ್ಕಳ ಫ್ಲೇವರಡ್ ನೀರಿಗೆ 19 ಸಾವಿರ! ಈ ಬ್ಯುಸಿನೆಸ್ ಟ್ಯಾಕ್ಟಿಕ್‌ಗೆ ನೆಟ್ಟಿಗರು ಗರಂ!
ಮಕ್ಕಳ ಉತ್ಪನ್ನಗಳು ಸ್ಪಲ್ಪ ದುಬಾರಿ. ಅದ್ರಲ್ಲೂ ಬ್ಯೂಟಿ ಪ್ರಾಡಕ್ಟ್ ಬೆಲೆ ಮತ್ತಷ್ಟು ಹೆಚ್ಚಿರುತ್ತದೆ. ಹಾಗಂತ ಯರ್ರಾಬಿರ್ರಿ ಹೆಚ್ಚಿಸಿದ್ರೆ ಹೇಗೆ? ಅದೂ ಮಕ್ಕಳ ಪರಿಮಳಯುಕ್ತ ನೀರಿಗೆ ಇಷ್ಟೊಂದು ಬೆಲೆ ಯಾರು ಕೊಡ್ತಾರೆ ಗೊತ್ತಿಲ್ಲ.
ಬ್ಯೂಟಿ ಪ್ರಾಡೆಕ್ಟ್ ಖರೀದಿ ಮಾಡೋಕೆ ಹೋದ್ರೆ ಒಂದೋ ಎರಡೋ ಸಾವಿರ ಬಿಲ್ ಆಗೋದು ಬಹಳ ಅಪರೂಪ. ನಿತ್ಯ ನಿಮ್ಮ ಬಳಕೆಗೆ ಅಗತ್ಯವಿರುವ ಬಾಡಿಲೋಷನ್, ಮಾಯಿಶ್ಚರೈಸರ್, ಸನ್ ಕ್ರೀಮ್, ಸೋಪ್, ಪೌಡರ್ ಸೇರಿದಂತೆ ಕೆಲವೇ ಕೆಲವು ಬ್ರಾಂಡೆಡ್ ಉತ್ಪನ್ನವನ್ನು ನೀವು ಖರೀದಿ ಮಾಡಿದ್ರೆ ಬಿಲ್ ಮೂರು, ನಾಲ್ಕು ಸಾವಿರಕ್ಕೆ ಬಂತು ನಿಲ್ಲುತ್ತೆ. ಈಗ ಮಕ್ಕಳಿಗೂ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಮಕ್ಕಳ ಸೋಫ್, ಬಾಡಿ ವಾಶ್, ಹೇರ್ ವಾಶ್, ಪೌಡರ್, ಬಾಡಿ ಮಸಾಜ್ ಆಯಿಲ್ ಹೀಗೆ ನಾನಾ ಉತ್ಪನ್ನಗಳಿವೆ. ಮಕ್ಕಳ ಆರೋಗ್ಯ ಹಾಗೂ ಚರ್ಮದ ಆರೈಕೆಗೆ ಹೆಚ್ಚು ಗಮನ ನೀಡುವ ಪಾಲಕರು ಇದು ದುಬಾರಿಯಾದ್ರೂ ಖರೀದಿ ಮಾಡ್ತಾರೆ.
ಮಕ್ಕಳ ಪ್ರಾಡೆಕ್ಟ್ (Product) ಗೆ ಕೆಮಿಕಲ್ ಬಳಕೆಯಾಗೋದಿಲ್ಲ ಎನ್ನುವ ಥೀಮ್ ಇಟ್ಟುಕೊಂಡೇ ಕಂಪನಿ (Company) ಗಳು ವಸ್ತುಗಳ ಉತ್ಪಾದನೆ, ಮಾರಾಟ ಮಾಡೋದು. ಹಾಗಾಗಿಯೇ ಇವುಗಳ ಬೆಲೆ ಒನ್ ಟು ಡಬಲ್ ಇರುತ್ತೆ. ಮಕ್ಕಳ ಉತ್ಪನ್ನ ತಯಾರಿಸುವು ಕಂಪನಿಯೊಂದು ತನ್ನ ಉತ್ಪನ್ನ ಹಾಗೂ ಬೆಲೆ ವಿಷ್ಯಕ್ಕೆ ಈಗ ಸುದ್ದಿಯಾಗಿದೆ. ಮಕ್ಕಳಿಗಾಗಿ ಪರಿಮಳಯುಕ್ತ ನೀರನ್ನು ಇದು ತಯಾರಿಸಿದ್ದು, ಅದ್ರ ಬೆಲೆ ಕೇಳಿದ ನೆಟ್ಟಿಗರು ದಂಗಾಗಿದ್ದಾರೆ.
ಭಾರತದ ಈ ಉದ್ಯಮಿ ಬಳಿಯಿರೋ ಕಾಸ್ಟ್ಲೀ ಕಾರ್ ಕಲೆಕ್ಷನ್ ಬಿಲಿಯನೇರ್ ಅಂಬಾನಿ, ಅದಾನಿ ಬಳಿಯೂ ಇಲ್ಲ!
ಮಗುವಿನ ಆರೈಕೆ ಮತ್ತು ತ್ವಚೆ ಉತ್ಪನ್ನಗಳನ್ನು ತಯಾರಿಸುವ ಪ್ರಸಿದ್ಧ ಫ್ರೆಂಚ್ (French) ಕಂಪನಿಯಾದ ಡಿಯೊರ್ (Dior) ಸದ್ಯ ಸುದ್ದಿಯಲ್ಲಿದೆ. ಈ ಐಷಾರಾಮಿ ಬ್ರಾಂಡ್ ಮಕ್ಕಳಿಗಾಗಿ ಪರಿಮಳಯುಕ್ತ ನೀರನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಸುಮಾರು 19 ಸಾವಿರ ರೂಪಾಯಿ. ಈ ಪರಿಮಳಯುಕ್ತ ನೀರು, ಡಿಯೊರ್ ನ ಬೇಬಿ ಸೆಂಟ್ ಸರಣಿಯ ಉತ್ಪನ್ನವಾಗಿದೆ. ಇದನ್ನು ಬೊನ್ನೆ ಎಟೊಯಿಲ್ ಅಥವಾ ಲಕ್ಕಿ ಸ್ಟಾರ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಉತ್ಪನ್ನವು ಆಲ್ಕೋಹಾಲ್ ಮುಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದಕ್ಕೆ ಹಣ್ಣಿನ ರಸವನ್ನು ಬಳಸಲಾಗಿದೆ.
ಡಿಯೊರ್ ಒಂದು ಐಷಾರಾಮಿ ಬ್ರಾಂಡ್ ಆಗಿದ್ದು, ಫ್ರೆಂಚ್ ಕಂಪನಿಯಾಗಿದೆ. ಇದರ ಮಾಲೀಕರು ಪ್ರಸಿದ್ಧ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್. ಬರ್ನಾರ್ಡ್ ಮತ್ತೊಂದು ಪ್ರಸಿದ್ಧ ಫ್ರೆಂಚ್ ಕಂಪನಿಯಾದ LVMH ನ ಮುಖ್ಯಸ್ಥರು. ಈ ಡಿಯೊರ್ ಕಂಪನಿ ತನ್ನ ದುಬಾರಿ ಐಷಾರಾಮಿ ಉತ್ಪನ್ನಗಳಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಮಕ್ಕಳಿಗಾಗಿ ಈ ಫ್ಯಾಶನ್ ಬ್ರ್ಯಾಂಡ್ 7902 ರೂಪಾಯಿ ಮೌಲ್ಯದ ಕ್ಲೀನಿಂಗ್ ವಾಟರ್ ಮತ್ತು 7900 ಮೌಲ್ಯದ ಫೇಸ್ ವಾಶ್, 9,500 ಮೌಲ್ಯದ ಬಾಡಿ ಲೋಷನ್ ಮತ್ತು ದುಬಾರಿ ಬೆಲೆಯ ಬಾಡಿ ಮತ್ತು ಹೇರ್ ಫೋಮ್‌ನಂತಹ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ನಿಮ್ಮ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಕಂಪನಿ ಇಪಿಎಫ್ ಒಗೆ ಜಮೆ ಮಾಡಿಲ್ವಾ? ಹಾಗಾದ್ರೆ ಹೀಗೆ ಮಾಡಿ..
ಸಾಮಾಜಿಕ ಜಾಲತಾಣದಲ್ಲಿ ಟೀಕೆ : ಸದ್ಯ ಮಕ್ಕಳಿಗಾಗಿ 19 ಸಾವಿರ ರೂಪಾಯಿ ಮೌಲ್ಯದ ಪರಿಮಳಯುಕ್ತ ನೀರನ್ನು ಬಿಡುಗಡೆ ಮಾಡ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಕಂಪನಿ ವಿರುದ್ಧ ಜನರು ಹರಿಹಾಯ್ದಿದ್ದಾರೆ. ಈ ಪರಿಮಳಯುಕ್ತ ನೀರನ್ನು ಮಗು ಏನು ಮಾಡುತ್ತದೆ ಎಂದು ಒಬ್ಬ ಬಳಕೆದಾರ ಕೇಳಿದ್ದಾನೆ. ಇಷ್ಟೊಂದು ಬೆಲೆ ಅಚ್ಚರಿ ಹುಟ್ಟಿಸಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ದುಬಾರಿ ಬೆಲೆ ನೀಡಿ ಪರಿಮಳಯುಕ್ತ ನೀರನ್ನು ಖರೀದಿ ಮಾಡುವ ಬದಲು ಮಗುವನ್ನು ಹಾಗೆ ಬಿಡೋದು ಉತ್ತಮ ಎಂದು ಮತ್ತೊಬ್ಬರು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ 230 ಡಾಲರ್ ಮೌಲ್ಯದ ನೀರಿನಲ್ಲಿ ವಜ್ರಗಳಿದ್ದರೆ ಉತ್ತಮ ಎಂದು ಬರೆದಿದ್ದಾರೆ. ಈ ನೀರಿಗಾಗಿ 230 ಡಾಲರ್ ಪಾವತಿಸುವುದು ಹುಚ್ಚುತನವಾಗಿದೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಜೋಕರ್ ತಯಾರಿಸಿದೋರಾ ಅಥವಾ ಖರೀದಿದಾರರಾ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ರೆ ಮಕ್ಕಳಿಗೆ ದುಬಾರಿ ಹಣ ನೀಡಿ ರಾಸಾಯನಿಕ ಏಕೆ ಹಾಕ್ಬೇಕು ಎಂದು ಇನ್ನೊಬ್ಬರು ಕೇಳಿದ್ದಾರೆ.