ಎಟಿಎಂ ಕಾರ್ಡ್‌ನ ಈ ರಹಸ್ಯ ಗೊತ್ತಾ? ಉಚಿತವಾಗಿ ಸಿಗುತ್ತೆ ಲಕ್ಷ ಲಕ್ಷ ವಿಮೆ!
ATM Card Insurance: ಸಾಮಾನ್ಯವಾಗಿ ಅನೇಕ ಜನರು ಡೆಬಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಇದನ್ನು ಎಟಿಎಂ ಕಾರ್ಡ್ ಎಂದು ಕರೆಯಲಾಗುತ್ತದೆ. ಹೆಚ್ಚುತ್ತಿರುವ ಡಿಜಿಟಲೀಕರಣದಿಂದಾಗಿ ಇದರ ಬಳಕೆ ಕಡಿಮೆಯಾದರೂ, ಈಗಲೂ ಬಹಳ ಅಗತ್ಯವಾದ ಕಾರ್ಡ್ ಇದು. ಈ ಡೆಬಿಟ್ ಕಾರ್ಡ್ ಉಚಿತ ವಿಮಾ ರಕ್ಷಣೆಯನ್ನು ಸಹ ನೀಡುತ್ತದೆ. ಇದರಲ್ಲಿ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಇವುಗಳಲ್ಲಿ ಅಪಘಾತ ವಿಮೆ ಮತ್ತು ಜೀವ ವಿಮೆ ಇವೆರಡೂ ಸೇರಿವೆ.
ಬೆಂಗಳೂರು (ಸೆ.22): ಇಂದಿನ ಕಾಲದಲ್ಲಿ ಎಟಿಎಂ ಕಾರ್ಡ್ ಬಳಸದೇ ಇರುವವರು ಬಹಳ ಕಡಿಮೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮತ್ತು ರುಪೇ ಕಾರ್ಡ್‌ನಿಂದಾಗಿ, ಎಟಿಎಂ ಪ್ರತಿಯೊಬ್ಬರ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಇದು ನಗದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿರುವುದು ಮಾತ್ರವಲ್ಲದೆ ವಹಿವಾಟು ಕೂಡ ಸುಲಭವಾಗಿದೆ. ನೀವು ಏನನ್ನಾದರೂ ಖರೀದಿಸಲು ಬಯಸಿದರೆ, ಅದನ್ನು ಎಟಿಎಂ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಎಟಿಎಂ ಹಲವು ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ ಮಾಹಿತಿ ಕೊರತೆಯಿಂದ ಜನರಿಗೆ ಇದರ ಸದುಪಯೋಗ ಆಗುತ್ತಿಲ್ಲ. ಅದೇ ರೀತಿ, ಪ್ರೀಮಿಯಂ ಪಾವತಿಸದೆ ಎಟಿಎಂ ಮೂಲಕ ವಿಮೆ ಕೂಡ ಲಭ್ಯವಿದೆ. ಇದರ ಮಾಹಿತಿ ಈ ಲೇಖನದಲ್ಲಿದೆ.
ಎಟಿಎಂ ಕಾರ್ಡ್ ಅನ್ನು ಬ್ಯಾಂಕ್ ನೀಡಿದ ತಕ್ಷಣ. ಅಂತೆಯೇ, ಕಾರ್ಡ್ ಬಳಕೆ ಮಾಡುವ ವ್ಯಕ್ತಿ ಅಪಘಾತ ವಿಮೆ ಮತ್ತು ಅಕಾಲಿಕ ಮರಣ ವಿಮೆಯನ್ನು ಪಡೆಯುತ್ತಾರೆ. ದೇಶದ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ, ಅವರು ಡೆಬಿಟ್ / ಎಟಿಎಂ ಕಾರ್ಡ್‌ನಲ್ಲಿ ಜೀವ ವಿಮೆಯನ್ನು ಸಹ ಪಡೆಯುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ವೈಯಕ್ತಿಕ ಅಪಘಾತ ವಿಮೆ (ಮರಣ), ವಾಯು ವಿಮೆ ರಹಿತ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಅಕಾಲಿಕ ಮರಣಕ್ಕೆ ವಿಮೆ ನೀಡಲಾಗುತ್ತದೆ.
ಎಟಿಎಂ ಕಾರ್ಡ್‌ನಲ್ಲಿ ಉಚಿತ ವಿಮಾ ಮೊತ್ತ: ನೀವು ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್ ಅನ್ನು 45 ದಿನಗಳಿಗಿಂತ ಹೆಚ್ಚು ಕಾಲ ಬಳಸಿದ್ದರೆ, ನೀವು ಉಚಿತ ವಿಮಾ ಸೌಲಭ್ಯವನ್ನು ಪಡೆಯಲು ಸಾಧ್ಯ. ಇದು ಅಪಘಾತ ವಿಮೆ ಮತ್ತು ಜೀವ ವಿಮೆ ಎರಡನ್ನೂ ಒಳಗೊಂಡಿರುತ್ತದೆ. ಈಗ ನೀವು ಈ ಎರಡೂ ಸಂದರ್ಭಗಳಲ್ಲಿ ವಿಮೆಯನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ. ಕಾರ್ಡ್‌ನ ವರ್ಗಕ್ಕೆ ಅನುಗುಣವಾಗಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಎಸ್‌ಬಿಐ ತನ್ನ ಗೋಲ್ಡ್ ಎಟಿಎಂ ಕಾರ್ಡ್ ಹೊಂದಿರುವವರಿಗೆ 4 ಲಕ್ಷ (ವಾಯುಯಾನದ ವೇಳೆ ಸಾವು), 2 ಲಕ್ಷ (ವಾಯುಯಾನ ಹೊರತಾದ ಸಾವು) ಕವರ್ ನೀಡುತ್ತದೆ. ಆದರೆ, ಇದು ಪ್ರೀಮಿಯಂ ಕಾರ್ಡ್ ಹೊಂದಿರುವವರಿಗೆ 10 ಲಕ್ಷ (ವಾಯುಯಾನದ ವೇಳೆ ಸಾವು), 5 ಲಕ್ಷ (ವಾಯುಯಾನ ಹೊರತಾದ ಸಾವು) ಕವರ್ ನೀಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ, ಕೊಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳು ತಮ್ಮ ಡೆಬಿಟ್ ಕಾರ್ಡ್‌ಗಳಲ್ಲಿ ವಿವಿಧ ಮೊತ್ತದ ರಕ್ಷಣೆಯನ್ನು ಒದಗಿಸುತ್ತವೆ. ಕೆಲವು ಡೆಬಿಟ್ ಕಾರ್ಡ್‌ಗಳು 3 ಕೋಟಿ ರೂ.ವರೆಗೆ ಉಚಿತ ಅಪಘಾತ ವಿಮಾ ರಕ್ಷಣೆಯನ್ನು ಒದಗಿಸುತ್ತವೆ. ಈ ವಿಮಾ ರಕ್ಷಣೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೂಡ ಬ್ಯಾಂಕ್ ಕೇಳುವುದಿಲ್ಲ.
INDIAN RAILWAYS: ರೈಲ್ವೆ ಉದ್ಯೋಗಿಗಳಿಗೆ ಬಂಪರ್, ದೀಪಾವಳಿಗೆ 28200 ರೂಪಾಯಿ ಹೆಚ್ಚುವರಿ ಬೋನಸ್?
ಡೆಬಿಟ್ ಕಾರ್ಡ್ ಮೂಲಕ ವಹಿವಾಟು ಬಹಳ ಮುಖ್ಯ: ನಿರ್ದಿಷ್ಟ ಅವಧಿಯೊಳಗೆ ಆ ಡೆಬಿಟ್ ಕಾರ್ಡ್ ಮೂಲಕ ಕೆಲವು ವಹಿವಾಟುಗಳನ್ನು ಮಾಡಿದಾಗ ಮಾತ್ರ ವಿಮೆಯ ಲಾಭ ಲಭ್ಯವಾಗುತ್ತದೆ. ಈ ಅವಧಿಯು ವಿವಿಧ ಕಾರ್ಡ್‌ಗಳಿಗೆ ಬದಲಾಗಬಹುದು. ಕೆಲವು ATM ಕಾರ್ಡ್‌ಗಳು ವಿಮಾ ಪಾಲಿಸಿಯನ್ನು ಸಕ್ರಿಯಗೊಳಿಸಲು ಕಾರ್ಡ್‌ದಾರರು 30 ದಿನಗಳಲ್ಲಿ ಕನಿಷ್ಠ ಒಂದು ವ್ಯವಹಾರವನ್ನು ಮಾಡಬೇಕಾಗುತ್ತದೆ. ವಿಮಾ ರಕ್ಷಣೆಯನ್ನು ಸಕ್ರಿಯಗೊಳಿಸಲು ಕೆಲವು ಕಾರ್ಡುದಾರರು ಕಳೆದ 90 ದಿನಗಳಲ್ಲಿ ಒಂದು ವಹಿವಾಟನ್ನು ಮಾಡಬೇಕಾಗುತ್ತದೆ.
7-180 ದಿನಗಳ ಹೂಡಿಕೆಗೆ ಶೇ.6.75 ಬಡ್ಡಿ: ಈ ಬ್ಯಾಂಕ್‌ನ ಆಫರ್ ಮಿಸ್ ಮಾಡ್ಕೋಬೇಡಿ!