ಇಡೀ ದೇಶದ ಗಮನ ಸೆಳೆದಿದೆ ಬಜೆಟ್ 2021| ಮೋದಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ| ಕೊರೋನಾತಂಕ ನಡುವೆ ಕಾಗದರಹಿತ ಬಜೆಟ್| ಸಾಫ್ಟ್‌ ಕಾಪಿ ಓದಲಿದ್ದಾರೆ ನಿರ್ಮಲಾ

ನವದೆಹಲಿ(ಫೆ.01) ಕೊರೋನಾತಂಕದ ನಡುವೆಯೇ ದೇಶದಲ್ಲಿ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್‌ ಮಂಡನೆಗೆ ಸಕಲ ಸಿದ್ಧತೆ ನಡೆದಿದ್ದು, ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗ ದೇಶದ ಜನ ಸಾಮಾನ್ಯರ ನಿರೀಕ್ಷೆಗಳೂ ಹೆಚ್ಚಾಗಿದ್ದು, ಕುತೂಹಲವೂ ಮನೆ ಮಾಡಿದೆ. ಸದ್ಯ ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವೆ ವಿತ್ತ ಸಚಿವಾಲಯಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.

Scroll to load tweet…

ಇನ್ನು ಇದೇ ಮೊದಲ ಬಾರಿ ಕೊರೋನಾತಂಕದಿಂದಾಗಿ ಕಾಗದರಹಿತ ಬಜೆಟ್ ಮಂಡನೆಯಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ 'ಬಹೀ ಖಾತಾಗೆ' ಬ್ರೇಕ್ ಬಿದ್ದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ಯಾಬ್ ಸಹಾಯದಿಂದ ಈ ಬಾರಿ ಬಜೆಟ್ ಭಾಷಣ ಓದಲಿದ್ದಾರೆ. ಹೀಗಿರುವಾಗ ಮಾಧ್ಯಮಗಳೆದುರೂ ಕೆಂಪು ಲಕೋಟೆಯಲ್ಲಿ ಸುತ್ತಿರುವ ಟ್ಯಾಬ್‌ನ್ನು ನಿರ್ಮಲಾ ಪ್ರದರ್ಶಿಸಿದ್ದಾರೆ. 

Scroll to load tweet…


73 ವರ್ಷದ ಸಂಪ್ರದಆಯಕ್ಕೆ ಬ್ರೇಕ್!

ದೇಶದ ಇತಿಹಾಸದಲ್ಲಿ 73 ವರ್ಷದಲ್ಲಿ ಮೊದಲ ಬಾರಿ 2021-22ರ ಬಜೆಟ್ ಪ್ರತಿ ಮುದ್ರಣ ಮಾಡಿಲ್ಲ. ಬದಲಾಗಿ ಮೆಡ್‌ ಇನ್‌ ಇಂಡಿಯಾ ಟ್ಯಾಬ್ಲೆಟ್‌ ಮೂಲಕ ಸಾಫ್ಟ್‌ ಕಾಪಿಯನ್ನು ನಿರ್ಮಲಾ ಓದಲಿದ್ದಾರೆ. ಬಜೆಟ್ ಮಂಡನೆ ಬಳಿಕ ಸರ್ಕಾರ ಬಿಡುಗಡೆಗೊಳಿಸಿರುವ ಆಪ್‌ನಲ್ಲೂ ಬಜೆಟ್ ಸಾಫ್ಟ್‌ ಕಾಪಿ ಲಭ್ಯವಿರಲಿದೆ. ಸಂಸದರಿಗೂ ಬಜೆಟ್‌ನ ಸಾಫ್ಟ್‌ ಕಾಪಿ ನೀಡಲಾಗುತ್ತದೆ.