ಪೋಷಕರು ಮಕ್ಕಳ ಭವಿಷ್ಯ ಸುರಕ್ಷಿತವಾಗಿರಿಸಲು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ಇಂದು ಪೋಷಕರು ಮಾಡುವ ಸಣ್ಣ ಉಳಿತಾಯ ಅಥವಾ ಹೂಡಿಕೆ ಮಕ್ಕಳ ಭವಿಷ್ಯವನ್ನು ಸುಭದ್ರವನ್ನಾಗಿ ಮಾಡಲಿದೆ.

ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಅಪ್ರಾಪ್ತ ವಯಸ್ಕರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಘೋಷಣೆ ಮಾಡಲಾಗಿದೆ. ಈ ಯೋಜನೆಯನ್ನು ಎನ್‌ಪಿಎಸ್ ವಾತ್ಸಲ್ಯ ಅಂತಾನೂ ಕರೆಯಲಾಗುತ್ತದೆ. ಈ ಯೋಜನೆ ಮಕ್ಕಳು 18 ವರ್ಷ ತುಂಬಿದ ನಂತರ ಎನ್‌ಪಿಎಸ್ ಆಗಿ ಬದಲಾಗುತ್ತದೆ. ಪೋಷಕರು ಮಕ್ಕಳ ಭವಿಷ್ಯ ಸುರಕ್ಷಿತವಾಗಿರಿಸಲು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ಇಂದು ಪೋಷಕರು ಮಾಡುವ ಸಣ್ಣ ಉಳಿತಾಯ ಅಥವಾ ಹೂಡಿಕೆ ಮಕ್ಕಳ ಭವಿಷ್ಯವನ್ನು ಸುಭದ್ರವನ್ನಾಗಿ ಮಾಡಲಿದೆ.

ಏನಿದು ಎನ್‌ಪಿಎಸ್ ವಾತ್ಸಲ್ಯ ಯೋಜನೆ? 

ಇದು ಅಪ್ರಾಪ್ತ ಮಕ್ಕಳಿಗಾಗಿ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ ಪೋಷಕರು ಮಕ್ಕಳ ಹೆಸರಿನಡಿ ಹಣ ಉಳಿತಾಯ ಮಾಡಬೇಕು. ಮಕ್ಕಳು 18 ವರ್ಷಕ್ಕೆ ತುಂಬುತ್ತಿದ್ದಂತೆ ಇದು ಪಿಂಚಣಿ ಯೋಜನೆಯಾಗಿ ಬದಲಾಗುತ್ತದೆ. ಎನ್‌ಪಿಎಸ್ ಯೋಜನೆ ಕೇಂದ್ರ ಸರ್ಕಾರದ ಅಡಿಯಲ್ಲಿಯೇ ಬರುತ್ತದೆ. ಎನ್‌ಪಿಎಸ್ ಆಗಿ ಬದಲಾಗುತ್ತಿದ್ದಂತೆ ಫಲಾನುಭವಿಗೆ ಪಿಂಚಣಿ ರೂಪದಲ್ಲಿ ನಿಶ್ಚಿತ ಮೊತ್ತವೊಂದು ಬರಲು ಶುರುವಾಗುತ್ತದೆ. 

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ

ಪೋಷಕರ ನಿವೃತ್ತಿ ಜೀವನದಲ್ಲಿ ಮಕ್ಕಳ ಭವಿಷ್ಯಕ್ಕೆ ಈ ಹಣ ಬಳಕೆ ಮಾಡಬಹುದು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) PFRDA ಕಾಯಿದೆ, 2013 ರ ಅಡಿಯಲ್ಲಿ NPS ನಿಯಂತ್ರಣದಲ್ಲಿದ್ದು, ಇದರಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ. ನೀವು ಭಾರತೀಯರಾಗಿದ್ರೆ ಈ ಯೋಜನೆಯಡಿ ಖಾತೆ ತೆರೆಯಬಹುದಾಗಿದೆ. ಒಂದು ವೇಳೆ ಅನಿವಾಸಿ ಭಾರತೀಯ ಅಥವಾ ಸಾಗರೋತ್ತರ ಪ್ರಜೆಯಾಗಿದ್ದರೂ, ಕೆಲವು ಷರತ್ತುಗಳಡಿಯಲ್ಲಿ ಎನ್‌ಪಿಎಸ್ ಅಕೌಂಟ್ ಓಪನ್ ಮಾಡಬಹುದು. ಅರ್ಜಿ ಸಲ್ಲಿಸುವ ದಿನಾಂಕದಂದು ನಿಮ್ಮ ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು. ನೀವು PoP/PoP-SP ಮೂಲಕ ಅಥವಾ ಇ-NPS ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸೋದು ಹೇಗೆ?

*ಅಧಿಕೃತ ಎನ್‌ಪಿಎಸ್ ವೆಬ್‌ಸೈಟ್ ಮೂಲಕ ಖಾತೆ ತೆರೆಯಬಹುದು. (https://enps. nsdl.com/eNPS/NationalPension-System.html)
*ಎನ್‌ಪಿಎಸ್‌ ವೆಬ್‌ಸೈಟ್ ಓಪನ್ ಆಗುತ್ತಿದ್ದಂತೆ ನೋಂದಣಿ (Register) ಮೇಲೆ ಕ್ಲಿಕ್ ಮಾಡಿ. ಆನಂತರ New Register ಮೇಲೆ ಕ್ಲಿಕ್ ಮಾಡಬೇಕು. 
*ಈಗ ಅರ್ಜಿದಾರರು ತಮ್ಮ ಆಧಾರ್ ಅಥವಾ ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಎಂಟ್ರಿ ಮಾಡಬೇಕು.
*NPS ಖಾತೆಯ ವಿವರಗಳನ್ನು ನಿರ್ವಹಿಸಲು ಅವರು ಮೂರು ಕೇಂದ್ರೀಯ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ.
*OTP ಪರಿಶೀಲನೆಯ ನಂತರ, ಕೇಳಲಾಗುವ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ.
(ಸಮೀಪದ ಬ್ಯಾಂಕ್‌ಗೆ ಹೋಗಿ ಎನ್‌ಪಿಎಸ್ ಖಾತೆ ತೆರೆಯಬಹುದು ಮತ್ತು ಎನ್‌ಪಿಎಸ್‌ ಕುರಿತ ಹೆಚ್ಚಿನ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ)