*  ಜೀತೋ ಗ್ರ್ಯಾಂಡ್‌ ಸಮ್ಮಿಟ್‌*  ವಾಣಿಜ್ಯ ಮಾರುಕಟ್ಟೆಸ್ಥಾಪಿಸಿದರೆ ಯಶಸ್ಸು*  ಜೈನ ಸಮುದಾಯಕ್ಕೆ ಬೊಮ್ಮಾಯಿ ಕರೆ 

ಬೆಂಗಳೂರು(ಮೇ.29):  ವ್ಯಾಪಾರ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೈನ ಸಮುದಾಯ ಜೈನ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಆರ್ಗನೈಸನ್‌ ವೇದಿಕೆಯಡಿ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ಮಾದರಿಯಲ್ಲಿ ಜಾಗತಿಕ ಇ-ವಾಣಿಜ್ಯ ವ್ಯಾಪಾರ ಸಂಸ್ಥೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರ ಆವರಣದಲ್ಲಿ ಎರಡು ದಿನಗಳ ಜೈನರ ಜಾಗತಿಕ ಶೃಂಗ ಸಭೆ- ಜೀತೋ ಗ್ರ್ಯಾಂಡ್‌ ಸಮ್ಮಿಟ್‌ ಉದ್ಘಾಟಿಸಿ ಮಾತನಾಡಿದರು.

ಜೈನ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಸಂಪರ್ಕ ಜಾಲ ಹೊಂದಿದ್ದು, ಇ-ವಾಣಿಜ್ಯ ಮಾರುಕಟ್ಟೆಸಂಸ್ಥೆ ಸ್ಥಾಪಿಸಿದರೆ ಅದ್ಭುತ ಯಶಸ್ಸು ಸಾಧಿಸಬಹುದು. ಇದರಿಂದ ಬರುವ ಲಾಭವನ್ನು ಜೀತೋ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದವರು ಅಭಿಪ್ರಾಯಪಟ್ಟರು.

4 ಅಂಕೆಯ ಎಟಿಎಂ ಪಿನ್ ಹುಟ್ಟಿನ ಹಿಂದಿದೆ ಪತ್ನಿಯ ಮರೆವಿನ ಕಥೆ!

ದೇಶದ ಆರ್ಥಿಕತೆಯಲ್ಲಿ ಜೈನ ಸಮುದಾಯ ಸಾಕಷ್ಟುಕೊಡುಗೆ ನೀಡುತ್ತಿದೆ. ಉಳಿದ ಸಮುದಾಯದವರು ಜೇಬಲ್ಲಿ ಹಣವಿದ್ದರೆ ಮಾತ್ರ ಉದ್ಯಮ ಆರಂಭಿಸುತ್ತಾರೆ. ಹಣ ಇಲ್ಲವೆಂದರೆ ಉದ್ಯೋಗ ಮಾಡುತ್ತಾರೆ. ಆದರೆ ಜೈನ ಸಮುದಾಯದವರು ಜೇಬಲ್ಲಿ ಒಂದು ಪೈಸೆ ಇಲ್ಲದಿದ್ದರೂ ತಮ್ಮ ಒಳ್ಳೆಯ ನಡವಳಿಕೆ, ಪರಿಶ್ರಮದಿಂದ ವ್ಯಾಪಾರ ಮಾಡುವುದರ ಜತೆಗೆ ಲಾಭವನ್ನೂ ಗಳಿಸುತ್ತಾರೆ ಎಂದು ಶ್ಲಾಘಿಸಿದರು.

ಒಂದು ವೇಳೆ ಜೈನರು ಇಲ್ಲದಿದ್ದರೆ, ಇಡೀ ದೇಶ ಸಾಕಷ್ಟುಹಿಂದುಳಿದಿರುತ್ತಿತ್ತು. ಜೈನ ಸಮುದಾಯ ಈಗಾಗಲೇ ಅನೇಕ ಪುಣ್ಯದ ಕಾರ್ಯಗಳಿಗೆ ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಪುಣ್ಯದ ಕೆಲಸಗಳಲ್ಲಿ ಮತ್ತಷ್ಟು ಸಕ್ರಿಯವಾಗಬೇಕಿದೆ ಎಂದರು.

ಚಂದನಶ್ರೀಜಿ, ಜಿತೋ ಸಂಸ್ಥೆಯ ಪದಾಧಿಕಾರಿಗಳಾದ ಗಣಪತರಾಜ್‌ ಚೌಧರಿ, ವಿಜಯ್‌ ಭಂಡಾರಿ, ಸುರೇಶ್‌ ಮುಥಾ, ಮಹಾವೀರಸಿಂಗ್‌ ಚೌಧರಿ, ಪಾರಸ್‌ ಜೈನ್‌ ಮತ್ತಿತರರು ಇದ್ದರು.

Cement Price:ಮುಂದಿನ ತಿಂಗಳಿಂದ ಸಿಮೆಂಟ್ ದುಬಾರಿ; ಪ್ರತಿ ಬ್ಯಾಗಿನ ಮೇಲೆ 55ರೂ. ಬೆಲೆ ಹೆಚ್ಚಿಸಿದ ಇಂಡಿಯಾ ಸಿಮೆಂಟ್ಸ್

5 ಟ್ರಿಲಿಯನ್‌ ಡಾಲರ್‌ ಗುರಿಗೆ ಜೈನರ ಪಾತ್ರ ದೊಡ್ಡದು: ಸೂರ‍್ಯ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ದೇಶದ ಆರ್ಥಿಕತೆ 5 ಟ್ರಿಲಿಯನ್‌ ಡಾಲರ್‌ ತಲುಪಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಇದು ಸಾಕಾರಗೊಳ್ಳುವಲ್ಲಿ ಜೈನ ಸಮುದಾಯದ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ಈ ಸಮುದಾಯದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕರ್ನಾಟಕದಲ್ಲಂತೂ ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಪ್ರತಿಯೊಂದರಲ್ಲೂ ಆ ಶ್ರೀಮಂತಿಕೆಯನ್ನು ಕಾಣಬಹುದು. ವ್ಯಾಪಾರೋದ್ಯಮದಲ್ಲೂ ಮುಂದಿದ್ದಾರೆ. ದೇಶದಲ್ಲಿ ಶೇ.80-90ರಷ್ಟು ಗೋಶಾಲೆಗಳು ಜೈನ ಸಮುದಾಯಗಳ ನೆರವಿನಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಭವಿಷ್ಯದ ನವ ಭಾರತ ಮತ್ತು ನವ ಕರ್ನಾಟಕದಲ್ಲಿ ಈ ಸಮುದಾಯದ ಪಾತ್ರ ಮಹತ್ತರವಾಗಿದೆ ಎಂದರು.