Asianet Suvarna News Asianet Suvarna News

ಹಬ್ಬದ ಆವೃತ್ತಿಗೆ ಭರ್ಜರಿ ಕೊಡುಗೆ, ಸೆ.23 ರಿಂದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಉತ್ಸವ!

ಸೆಪ್ಟೆಂಬರ್ 23 ರಿಂದ 30 ರವರೆಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಉತ್ಸವ ನಡೆಯಲಿದೆ. ಎಲ್ಲಾ ವಿಭಾಗದಲ್ಲಿ ಭರ್ಜರಿ ಕೊಡುಗೆ ನೀಡಲಾಗಿದೆ.  ಉತ್ಪನ್ನಗಳ ಮಾರಾಟ ಮೇಳದ ಸಂಪೂರ್ಣ ವಿವರ ಇಲ್ಲಿದೆ.

Flipkart announces Big Billion Days 2022 huge discounts sale from sep 23 to 30th on Festival season ckm
Author
First Published Sep 16, 2022, 6:07 PM IST

ಬೆಂಗಳೂರು(ಸೆ.16): ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ಇದೀಗ  9 ನೇ ಆವೃತ್ತಿಯ ದಿ ಬಿಗ್ ಬಿಲಿಯನ್ ಡೇಸ್ ಘೋಷಿಸಿದೆ.  ದೇಶದ ಹಬ್ಬದ ಸೀಸನ್ ನಲ್ಲಿ ಬಿಗ್ ಸೇಲ್ ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಈ ಆವೃತ್ತಿಯಲ್ಲಿ ದೇಶಾದ್ಯಂತವಿರುವ ಮಿಲಿಯನ್ ಗಟ್ಟಲೆ ಗ್ರಾಹಕರು, ಮಾರಾಟಗಾರರು, ಎಂಎಸ್ಎಂಇಗಳು ಮತ್ತು ಕಿರಾಣ ವಿತರಣಾ ಪಾಲುದಾರರು ಭಾಗಿಯಾಗಲಿದ್ದಾರೆ. ನಾವೀನ್ಯತೆ, ಪ್ರಭಾವ ಮತ್ತು ಒಳಗೊಳ್ಳುವಿಕೆಯೊಂದಿಗೆ ಟಿಬಿಬಿಡಿ ಈ ವರ್ಷ ಫ್ಲಿಪ್ ಕಾರ್ಟ್ ಅಪ್ಲಿಕೇಶನ್ ನಲ್ಲಿ ಅತ್ಯಾಕರ್ಷಕವಾದ ಕೊಡುಗೆಗಳೊಂದಿಗೆ ಹಬ್ಬದ ಮೆರಗನ್ನು ಹೆಚ್ಚಿಸಲಿದೆ. ಇದು `ಕೂಪನ್ ರೈನ್’ ಮೂಲಕ ಗ್ಯಾಮಿಫಿಕೇಶನ್ ಅನುಭವವನ್ನು ಒಳಗೊಂಡಿರುತ್ತದೆ. ಗ್ರಾಹಕರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿಕೊಳ್ಳುವ ಅವಕಾಶವನ್ನು ನೀಡುತ್ತದೆ ಹಾಗೂ ಹಬ್ಬದ ಋತುವನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ಹಲವಾರು ಬಹುಮಾನಗಳನ್ನು ಒಳಗೊಂಡಿರುತ್ತದೆ. ಈ ವರ್ಷ ಗ್ರಾಹಕರು ತಮ್ಮ ಉತ್ಪನ್ನಗಳನ್ನು ಟೋಕನ್ ಆಗಿ ಮುಂಗಡ ರೂಪದಲ್ಲಿ 1 ರೂಪಾಯಿಯನ್ನು ಪಾವತಿಸುವ ಮೂಲಕ ಸೌಂದರ್ಯ, ಸಾಮಾನ್ಯ ಸರಕುಗಳು, ಗೃಹ ಬಳಕೆ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಮತ್ತು ಲೈಫ್ ಸ್ಟೈಲ್ ನಂತಹ ವಿವಿಧ ವಿಭಾಗಗಳಿಗೆ ಸೇರಿದ ಉತ್ಪನ್ನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶವನ್ನು ಹೊಂದಿರುತ್ತಾರೆ.

ದೇಶಾದ್ಯಂತ ಇರುವ ಮಿಲಿಯನ್ ಗಟ್ಟಲೆ ಗ್ರಾಹಕರನ್ನು ತಲುಪಲು ಮಾರಾಟಗಾರರಿಗೆ ಟಿಬಿಬಿಡಿ(Big Billion Days 2022) ಒಂದು ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ. ಈ ಮೂಲಕ ಮಾರಾಟಗಾರರು ತಮ್ಮ ವ್ಯವಹಾರವನ್ನು ತ್ವರಿತಗತಿಯಲ್ಲಿ ಹೆಚ್ಚಿಸಿಕೊಳ್ಳಬಹುದಾಗಿದೆ.  ಪ್ರಜಾಸತ್ತಾತ್ಮಕ ಮಾರಾಟ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಕೇಂದ್ರೀಕರಿಸಿ ಫ್ಲಿಪ್ ಕಾರ್ಟ್(Flipkart) ಉದ್ಯಮದ-ಮೊದಲ ಕಾರ್ಯತಂತ್ರ ನೀತಿಗಳನ್ನು ಜಾರಿಗೆ ತಂದಿರುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸಿದೆ.

ಬೌನ್ಸ್ ಇನ್ಫಿನಿಟಿ ಈಗ ಫ್ಲಿಪ್ಕಾರ್ಟ್ನಲ್ಲಿ ಲಭ್ಯ: ಖರೀದಿ ಹೇಗೆ

ಹೆಚ್ಚು ದೃಢವಾದ ಮತ್ತು ಸುಸ್ಥಿರ ಪೂರೈಕೆ ಜಾಲ
ಮೊದಲ ಮತ್ತು ಕಟ್ಟಕಡೆಯ ಮೈಲಿವರೆಗಿನ ವಿತರಣೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್(E commerce) ತನ್ನ ಪೂರೈಕೆ ಜಾಲದ ಸಾಮರ್ಥ್ಯವನ್ನು ವಿಸ್ತರಣೆ ಮಾಡುವುದನ್ನು ಮುಂದುವರಿಸಿದೆ. ಈ ವರ್ಷ, ಫ್ಲಿಪ್ ಕಾರ್ಟ್(Online Shopping) ದೇಶಾದ್ಯಂತ ನೂರಾರು ಕಟ್ಟ ಕಡೆಯ ವಿತರಣೆ ಹಬ್ ಗಳನ್ನು ಸ್ಥಾಪಿಸಿದೆ. ಅಲ್ಲದೇ, ಇದಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳದ ಹರಿಂಘಾಟದಲ್ಲಿ ಅತಿ ದೊಡ್ಡ ಫುಲ್ ಫಿಲ್ಮೆಂಟ್ ಸೆಂಟರ್ ಅನ್ನು ಆರಂಭಿಸಿದೆ. ಈ ಸೆಂಟರ್ ನಲ್ಲಿ ಪ್ರತಿದಿನ ಒಂದು ಮಿಲಿಯನ್ ನಷ್ಟು ಶಿಪ್ ಮೆಂಟ್ ಪ್ರಕ್ರಿಯೆ ನಡೆಸಲಿದೆ.

ಮೊಬೈಲ್ ಗಳು ಮತ್ತು ಎಲೆಕ್ಟ್ರಾನಿಕ್ಸ್ ನಂತಹ ದುಬಾರಿ ಮೌಲ್ಯದ ಉತ್ಪನ್ನಗಳ ಓಪನ್ ಬಾಕ್ಸ್ ಡೆಲಿವರಿ(Open box delivery) ಆಯ್ಕೆಯನ್ನು ಫ್ಲಿಪ್ ಕಾರ್ಟ್ ಪರಿಚಯಿಸಿದೆ. ಓಪನ್ ಬಾಕ್ಸ್ ಡೆಲಿವರಿ ಪ್ರಕ್ರಿಯೆ ಭಾಗವಾಗಿ ಫ್ಲಿಪ್ ಕಾರ್ಟ್ ನ ವಿಶ್ ಮಾಸ್ಟರ್ (ವಿತರಣಾ ಪಾಲುದಾರ) ಗ್ರಾಹಕರ ಎದುರು ಬಾಕ್ಸ್ ಅನ್ನು ತೆರೆದು ತೋರಿಸಿ ಅದರಲ್ಲಿ ಆರ್ಡರ್ ಮಾಡಿದ ಉತ್ಪನ್ನ ಇರುವುದನ್ನು ಖಾತರಿಪಡಿಸುತ್ತಾರೆ, ಉತ್ಪನ್ನವು ಸರಿಯಾಗಿದೆ ಎಂಬುದನ್ನು ಖಾತರಿಪಡಿಸಿಕೊಂಡ ನಂತರವಷ್ಟೇ ಗ್ರಾಹಕ ಅದನ್ನು ಸ್ವೀಕರಿಸುತ್ತಾರೆ. ಗ್ರಾಹಕ ಕೇಂದ್ರಿತ ಉಪಕ್ರಮವಾಗಿ ಈ ಯೋಜನೆ ಮೂಲಕ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಪಡಿಸಿಕೊಳ್ಳಲಿದೆ. ಓಪನ್ ಬಾಕ್ಸ್ ಡೆಲಿವರಿ ಪ್ರಸ್ತುತ ದೇಶಾದ್ಯಂತ ಆಯ್ದ ಪಿನ್ ಕೋಡ್ ಗಳಲ್ಲಿ ನಿರ್ದಿಷ್ಟ ಬ್ರ್ಯಾಂಡ್ ಗಳಿಗೆ ಅನ್ವಯವಾಗುತ್ತಿದೆ.

ಟಿಬಿಬಿಡಿ 2022 ಸಹ ಸಮರ್ಥನೀಯ ಪ್ರಯತ್ನಗಳಲ್ಲಿ ಹೆಚ್ಚಿನ ಸಾಗಣೆಗಳನ್ನು ಸುಸ್ಥಿರ ಪೂರೈಕೆ ಜಾಲ ಸೌಲಭ್ಯಗಳಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ದೇಶಾದ್ಯಂತ ಸಾವಿರಾರು ಎಲೆಕ್ಟ್ರಿಕ್ ವಾಹನಗಳ ಫ್ಲೀಟ್ ಮೂಲಕ ವಿತರಿಸಲಾಗುತ್ತದೆ.

ಫ್ಲಿಪ್ ಕಾರ್ಟ್ ಹೋಲ್ ಸೇಲ್- ಬಿ2ಬಿ ಗೆ ಮೌಲ್ಯ
ಈ ವರ್ಷ ಮತ್ತೊಮ್ಮೆ ಟಿಬಿಬಿಡಿ ತನ್ನ ಬಿ2ಬಿ ಸದಸ್ಯರಿಗೆ ಹಬ್ಬದ ಉತ್ಸಾಹ ಮತ್ತು ಉಲ್ಲಾಸವನ್ನು ವಿಸ್ತರಣೆ ಮಾಡುತ್ತಿದೆ. ಫ್ಲಿಪ್ ಕಾರ್ಟ್ ಹೋಲ್ ಸೇಲ್ ಮಾರಾಟವು ವ್ಯಾಪಕ ಶ್ರೇಣಿಯ ವಿಭಾಗಗಳಲ್ಲಿ ಉತ್ಪನ್ನಗಳನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.

2022ರ ಕೊನೆಯಲ್ಲಿ ನಥಿಂಗ್ ಫೋನ್ (1) ಭಾರತದಲ್ಲಿ ಲಾಂಚ್:‌ ಆ್ಯಪಲ್ ಐಫೋನ್‌ಗೆ ಪ್ರಬಲ ಪ್ರತಿಸ್ಪರ್ಧಿ?

2 ನೇ ಶ್ರೇಣಿ ಮತ್ತು ಮಾರುಕಟ್ಟೆಗಳ ಆಚೆಗೆ ಕೈಗೆಟುಕುವ ದರದಲ್ಲಿ ಲಭ್ಯ
ಈ ವರ್ಷ ಗ್ರಾಹಕರು ಮತ್ತಷ್ಟು ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಪಡೆದುಕೊಳ್ಳಲಿದ್ದಾರೆ. ಪ್ರಮುಖ ಬ್ಯಾಂಕುಗಳಿಂದ ಸಾಲದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಬ್ಯಾಂಕುಗಳು ಡೆಬಿಟ್ ಕಾರ್ಡುಗಳು, ಕ್ರೆಡಿಟ್ ಕಾರ್ಡುಗಳು ಮತ್ತು ಇಎಂಐ ವ್ಯವಹಾರ, ಪೇಟಿಎಂ, ಯುಪಿಐ ಮತ್ತು ವಾಲೆಟ್ ಬಳಸುವ ಗ್ರಾಹಕರಿಗೆ ಶೇ.10 ರಷ್ಟು ಇನ್ ಸ್ಟಂಟ್ ಡಿಸ್ಕೌಂಟ್ ನೀಡುತ್ತವೆ. ಇದಲ್ಲದೇ, ಫ್ಲಿಪ್ ಕಾರ್ಟ್ ಪೇ ಲೇಟರ್ ಮೂಲಕ ಗ್ರಾಹಕರು 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನೂ ಪಡೆದುಕೊಳ್ಳಬಹುದು. ಈ ಸಾಲವನ್ನು ಮುಂದಿನ ತಿಂಗಳುಗಳಲ್ಲಿ ಅಥವಾ ಸುಲಭ ಇಎಂಐಗಳಲ್ಲಿ ಪಾವತಿಸಬಹುದಾಗಿದೆ. ಗ್ರಾಹಕರು ಫ್ಲಿಪ್ ಕಾರ್ಟ್ ಪೇ ಲೇಟರ್ ಅನ್ನು ಇತರೆ ಯಾವುದೇ ಪ್ರೀಪೇಯ್ಡ್ ಥರ್ಡ್-ಪಾರ್ಟಿ ಆಯ್ಕೆಗಳೊಂದಿಗೆ ಸಂಯೋಜಿಸಬಹುದಾಗಿದೆ. ಇದರೊಂದಿಗೆ ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡುದಾರರಿಗೆ ನೋ-ಕಾಸ್ಟ್ ಇಎಂಐ ಸೌಲಭ್ಯವೂ ಇದೆ.

ಈ ಪಾಲುದಾರಿಕೆಗಳೊಂದಿಗೆ ಫ್ಲಿಪ್ ಕಾರ್ಟ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ದೇಶಾದ್ಯಂತ ಇರುವ ಅರ್ಹ ಗ್ರಾಹಕರಿಗೆ 250 ಮಿಲಿಯನ್ ಗೂ ಅಧಿಕ ಉತ್ಪನ್ನಗಳನ್ನು ಒದಗಿಸಲಿದೆ.

ಇತರೆ ವಿಭಿನ್ನ ರೀತಿಯ ಗ್ರಾಹಕರ ಕೊಡುಗೆಗಳು
ಈ ಬಾರಿಯ ಟಿಬಿಬಿಡಿಯು ದೇಶಾದ್ಯಂತ ಇರುವ ಗ್ರಾಹಕರಿಗೆ ವಿಶೇಷವಾಗಿ 2 ಮತ್ತು 3 ನೇ ಶ್ರೇಣಿಯ ನಗರಗಳ ಗ್ರಾಹಕರಿಗೆ ಫ್ಲಿಪ್ ಕಾರ್ಟ್ ಇತ್ತೀಚೆಗೆ ಆರಂಭಿಸಿರುವ ಕೈಗೆಟುಕುವ ದರಗಳ ಔಷಧಿಗಳ ವಿಭಾಗದಿಂದ ನಿಖರವಾದ ಔಷಧಿಗಳು ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳನ್ನು ಮಾರಾಟ ಮಾಡಲಿದೆ.

ಇಂತಹ ಕೊಡುಗೆಗಳನ್ನು ನೀಡುವುದರ ಜೊತೆಗೆ ಫ್ಲಿಪ್ ಕಾರ್ಟ್ ನ ಫ್ಲಿಪ್ ಕಾರ್ಟ್ ಹೊಟೇಲ್ಸ್ ನಲ್ಲಿ ಹೊಟೇಲ್ ಬುಕಿಂಗ್ ಸೇವೆಗಳೂ ಲಭ್ಯವಿವೆ. ಸುಲಭ ಕಂತುಗಳು ಅಥವಾ ಇಎಂಐಗಳೊಂದಿಗೆ ಗ್ರಾಹಕರು ತಮಗೆ ಸೂಕ್ತವಾದ ಹೊಟೇಲ್ ಗಳನ್ನು ಬುಕ್ ಮಾಡಿ ರಜೆಯ ವಿನೋದವನ್ನು ಅನುಭವಿಸಬಹುದಾಗಿದೆ. ಈ ಫ್ಲಿಪ್ ಕಾರ್ಟ್ ಹೊಟೇಲ್ಸ್ ನಲ್ಲಿ 3 ಲಕ್ಷಕ್ಕೂ ಅಧಿಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೊಟೇಲ್ ಗಳ ರೂಂಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಫ್ಲಿಪ್ ಕಾರ್ಟ್ ಜೀವ್ಸ್ ನಲ್ಲಿ ಖರೀದಿ ನಂತರದ ಪರಿಹಾರಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಅಂದರೆ, ಉತ್ಪನ್ನಗಳ ಖರೀದಿ ನಂತರ ತಡೆರಹಿತವಾಗಿ ಇನ್ ಸ್ಟಾಲೇಶನ್/ಅನ್ ಇನ್ ಸ್ಟಾಲೇಶನ್ ಸೇವೆಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಡೆಮೋ, ರಿಪೇರಿ, ನಿರ್ವಹಣೆ ಮತ್ತು ಇತರೆ ಮೌಲ್ಯವರ್ಧಿತ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

ಶಾಪಿಂಗ್ ಅನುಭವ
ಈ ವರ್ಷದ ದಿ ಬಿಗ್ ಬಿಲಿಯನ್ ಡೇಸ್ ನಲ್ಲಿ ಶಾಪರ್ ಗಳು ಫ್ಲಿಪ್ ಕಾರ್ಟ್ ಆ್ಯಪ್ ನಲ್ಲಿ ಸುಧಾರಿತ ಮತ್ತು ಉನ್ನತೀಕರಿಸಿದ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ವಿಶ್ಯುವಲ್ ಡಿಸೈನ್, ಈಸ್-ಆಫ್-ನ್ಯಾವಿಗೇಶನ್, ಡೀಲ್ ಗಳು ಮತ್ತು ಉತ್ಪನ್ನಗಳ ಸುಲಭ ಅನ್ವೇಷಣೆ ಮತ್ತು ಪ್ರಭಾವಿಗಳು ಹಾಗೂ ಸೆಲೆಬ್ರಿಟಿಗಳೊಂದಿಗೆ ತಲ್ಲೀನಗೊಳಿಸುವ ಮತ್ತು ಸಂವಾದಾತ್ಮಕ ಅನುಭವವನ್ನು ಕೇಂದ್ರೀಕರಿಸುವ ಮೂಲಕ ಶಾಪರ್ ಗಳನ್ನು ಆನಂದವಾಗಿಡಲು ಪರಿಷ್ಕರಿಸಿದ ಅನುಭವವನ್ನು ರಚನೆ ಮಾಡಲಾಗಿದೆ.

ಈ ವರ್ಷದಲ್ಲಿ ಇತರೆ ಹೊಸ ಬಿಡುಗಡೆಗಳು, ಗೇಮ್ಸ್, ಸಂವಾದಾತ್ಮಕ ವಿಡಿಯೋಗಳು, ಲೈವ್ ಸ್ಟ್ರೀಮ್ ಗಳು ಹಾಗೂ ಬಹುಮಾನಗಳು ಮತ್ತು ಟಿಬಿಬಿಡಿಯುದ್ದಕ್ಕೂ ಗ್ಯಾಮಿಫಿಕೇಶನ್ ಮೂಲಕ ಕೂಪನ್ ವಿತರಣೆಯನ್ನು ಸಹ ನೋಡಬಹುದಾಗಿದೆ.

ಈ ಮನಮೋಹಕಗೊಳಿಸುವ ಅನುಭವವು ಗ್ರಾಹಕರಿಗೆ ಉತ್ಪನ್ನ ಅನ್ವೇಷಣೆ ಪ್ರಯಾಣವನ್ನು ಸರಳಗೊಳಿಸಲು ಹಾಗೂ ಸಂಕುಚಿತಗೊಳಿಸಲು ಸ್ಥಳೀಯ ಮತ್ತು ಭಾಷಾ ಅಡೆತಡೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ವಿಡಿಯೋ ಕ್ಯಾಟಲಾಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಂವಾದಾತ್ಮಕ ಶಾಪಿಂಗ್ ಅನುಭವವನ್ನು ಒದಗಿಸಲು ಹಾಗೂ ಹೊಸ ಪ್ರೀಮಿಯಂ ಉತ್ಪನ್ನ ಪ್ಯಾಕೇಜಿಂಗ್ ಪೈಲಟ್ ಸೇರಿದಂತೆ ಇತರೆ ವಿಷಯಗಳ ಜೊತೆಗೆ ಹೊಸ ಋತುವಿನ ಬಿಡುಗಡೆಯು ದೇಶಾದ್ಯಂತ ಮತ್ತು ಅದರಾಚೆಗಿರುವ 2 ನೇ ಶ್ರೇಣಿಯ ಪ್ರದೇಶಗಳಿಗೆ ಆಕರ್ಷಕವಾದ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಕೊಡುಗೆಗಳನ್ನು ನೀಡುತ್ತದೆ.

ಬ್ರ್ಯಾಂಡ್ ಉತ್ಪನ್ನಗಳು ಮತ್ತು ಹೆಚ್ಚು ಪ್ರೀಮಿಯಂ ಶಾಪಿಂಗ್ ಅನುಭವವನ್ನು ಹುಡುಕುತ್ತಿರುವ ಶಾಪರ್ ಗಳು ಈಗ `ಬ್ರ್ಯಾಂಡ್ ಮಾಲ್’ ಮೋಡ್ ಗೆ ಬದಲಾಯಿಸಬಹುದಾಗಿದೆ. ಫ್ಯಾಷನ್, ಲೈಫ್ ಸ್ಟೈಲ್, ಮೊಬೈಲ್ ಗಳು ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಪ್ರೀಮಿಯಂ, ಬ್ರ್ಯಾಂಡ್ ಉತ್ಪನ್ನಗಳ ಸುಲಭ ಅನ್ವೇಷಣೆ ಮತ್ತು ನ್ಯಾವಿಗೇಷನ್ ಮೂಲಕ ಗ್ರಾಹಕರನ್ನು ಸಕ್ರಿಯಗೊಳಿಸಲು ಪ್ರೀಮಿಯಂ ಬಳಕೆದಾರ ಇಂಟರ್ಫೇಸ್ ನೊಂದಿಗೆ ಅಪ್ಲಿಕೇಶನ್ ನಲ್ಲಿ ಬ್ರ್ಯಾಂಡ್ ಮಾಲ್ ಮೋಡ್ ಅನ್ನು ಪರಿಚಯಿಸಲಾಗಿದೆ.

ಈ ವರ್ಷ ಫ್ಲಿಪ್ ಕಾರ್ಟ್ ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಅಮಿತಾಬ್ ಬಚ್ಚನ್, ಅಲಿಯಾ ಭಟ್, ಎಂಎಸ್ ಧೋನಿ ಅವರು ಫ್ಲಿಪ್ ಕಾರ್ಟ್ ನ ಅತಿದೊಡ್ಡ ಬಿಗ್ ಬಿಲಿಯನ್ ಡೇಸ್ ಕಾರ್ಯಕ್ರಮವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸೃಜನಶೀಲ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸೂಪರ್ ಕಾಯಿನ್ಸ್ ಲಾಯಲ್ಟಿ ರಿವಾರ್ಡ್ ಲ್ಯಾಂಡ್ ಸ್ಕೇಪ್ ಅನ್ನು ಕ್ರಾಂತಿಕಾರಕಗೊಳಿಸುವ ಮೂಲಕ ಗ್ರಾಹಕರು ತಮ್ಮ ಪ್ರತಿ ಖರೀದಿಯ ಮೇಲೆ ಅಸಂಖ್ಯಾತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

Follow Us:
Download App:
  • android
  • ios