7 ವರ್ಷಕ್ಕೆ 7 ಲಕ್ಷ ಎಫ್ ಡಿ ಮಾಡಿದ್ರೆ ನಿಮ್ಮ ಕೈಗೆ ಸಿಗುತ್ತೆ ಲಕ್ಷ ಲಕ್ಷ ಹಣ
ಆಪತ್ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದು ಅಂದ್ರೆ ಸ್ವಲ್ಪ ಹಣವನ್ನು ಹೂಡಿಕೆ ಮಾಡ್ಬೇಕು. ಅದಕ್ಕೆ ಎಸ್ಬಿಐ ಎಫ್ ಅತ್ಯುತ್ತಮ ಮಾರ್ಗ. ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ಎನ್ನುವ ಐಡಿಯಾ ನಿಮಗಿದ್ದರೆ ಹೂಡಿಕೆ ಸುಲಭ.
ಗಳಿಸಿದ ಆದಾಯದಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡೋದು ಮುಖ್ಯ. ಹೆಚ್ಚು ಲಾಭದ ಜೊತೆ ಭದ್ರತೆ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಸ್ಥಿರ ಠೇವಣಿ ( FD) ಗಳು ಅಪಾಯ ಮುಕ್ತ ಹೂಡಿಕೆಗಳಾಗಿವೆ. ಇದನ್ನು ಸಾಂಪ್ರದಾಯಿಕ ಹೂಡಿಕೆ ಎಂದೂ ಕರೆಯಲಾಗುತ್ತದೆ. ಇವು ನಿತ್ಯ ಏರಿಳಿತ ಹೊಂದಿರುವ ಮಾರುಕಟ್ಟೆಗೆ ಸಂಬಂಧಿಸಿರೋದಿಲ್ಲ. ಮ್ಯೂಚುಯಲ್ ಫಂಡ್‌ಗಳು (Mutual Funds), ಸ್ಟಾಕ್‌ಗಳು ಮತ್ತು ಜೀವ ವಿಮೆಗಿಂತ ಹೆಚ್ಚು ಜನಪ್ರಿಯ ಹೂಡಿಕೆಯೆಂದ್ರೆ ಅದು ಎಫ್ ಡಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿ (Fixed Deposits)ಗಳ ಮೇಲೆ ನೀಡುವ ಬಡ್ಡಿದರಗಳು ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಅತ್ಯಂತ ಸೂಕ್ತವಾದ ಹೂಡಿಕೆ ನಿರ್ಧಾರಕ್ಕೆ ಬರುವ ಮೊದಲು ನೀವು ಎಸ್ ಬಿಐ ಎಫ್ ಡಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ನೀವು ಎಸ್ ಬಿಐನಲ್ಲಿ 7 ವರ್ಷಕ್ಕೆ 7 ಲಕ್ಷ ರೂಪಾಯಿ ಎಫ್ ಡಿ ಇಡಲು ನಿರ್ಧರಿಸಿದ್ದರೆ ಮೆಚ್ಯುರಿಟಿ ಸಮಯದಲ್ಲಿ ನಿಮಗೆ ಎಷ್ಟು ಹಣ ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಸ್‌ಬಿಐ ಸೂಪರ್ ಹಿಟ್ ಸ್ಕೀಮ್: ಒಮ್ಮೆ ಡೆಪಾಸಿಟ್ ಮಾಡಿದ್ರೆ, ಪ್ರತಿ ತಿಂಗಳು ಸಿಗುತ್ತೆ ಕೈ ತುಂಬಾ ಹಣ
ಎಸ್ ಬಿಐ, ಐದರಿಂದ ಹತ್ತು ವರ್ಷದವರೆಗಿನ ಎಫ್ ಡಿಗೆ ಶೇಕಡಾ 6.50ರಷ್ಟು ಬಡ್ಡಿಯನ್ನು ನೀಡುತ್ತದೆ. ಅಂದ್ರೆ ನೀವು ಈ ಅವಧಿಯಲ್ಲಿ ಮಧ್ಯೆ ಯಾವುದೇ ಅವಧಿಗೆ ಸ್ಥಿರ ಠೇವಣಿ ಇಡುತ್ತೀರಿ ಎಂದಾದ್ರೆ ನಿಮಗೆ ಶೇಕಡಾ 6.50ರಷ್ಟು ಬಡ್ಡಿ ಸಿಗುತ್ತದೆ. ಶೇಕಡಾ 6.50ರ ಬಡ್ಡಿ ದರದಲ್ಲಿ ನೀವು 7 ವರ್ಷಕ್ಕೆ 7 ಲಕ್ಷ ರೂಪಾಯಿ ಎಫ್ ಡಿ ಮಾಡಿದ್ದೀರಿ ಎಂದಾದ್ರೆ ನಿಮಗೆ ಮೆಚ್ಯೂರಿಟಿ ಸಮಯದಲ್ಲಿ 10, 99, 293 ರೂಪಾಯಿ ಸಿಗುತ್ತದೆ. ಏಳು ವರ್ಷದಲ್ಲಿ 7 ಲಕ್ಷದ ಎಫ್ ಡಿಗೆ ನಿಮಗೆ 3, 99,293 ರೂಪಾಯಿ ಹೆಚ್ಚುವರಿಯಾಗಿ ಸಿಕ್ಕಂತಾಗುತ್ತದೆ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವು ಅವಧಿಯನ್ನು ಅವಲಂಬಿಸಿ ಬದಲಾಗುತ್ತದೆ. ದೀರ್ಘ ಲಾಕ್ಇನ್ ಅವಧಿಯನ್ನು ಆರಿಸಿದಾಗ ಬಡ್ಡಿದರಗಳು ಹೆಚ್ಚಾಗುತ್ತವೆ.
ಎಸ್ ಬಿಐ ಎಫ್ ಡಿ ಬಡ್ಡಿದರಗಳ ವಿವರ : ಎಸ್ ಬಿಐ ಸಾಮಾನ್ಯ ನಾಗರಿಕರಿಗೆ ವಾರ್ಷಿಕ ಶೇಕಡಾ 3.50 ರಿಂದ ಶೇಕಡಾ 7.25ರಷ್ಟು ಮತ್ತು ಹಿರಿಯ ನಾಗರಿಕರಿಗೆ ವಾರ್ಷಿಕ ಶೇಕಡಾ 4ರಿಂದ ಶೇಕಡಾ 7.75 ವರೆಗಿನ ಬಡ್ಡಿದರಗಳಲ್ಲಿ ಎಫ್ ಡಿ ಯೋಜನೆಗಳನ್ನು ನೀಡುತ್ತದೆ. ಅವಧಿಯು 7 ದಿನಗಳಿಂದ 10 ವರ್ಷಗಳವರೆಗೆ ಇರುತ್ತದೆ.
ಅಂಚೆ ಕಚೇರಿ ಸೇರಿದಂತೆ ಎಲ್ಲ ಬ್ಯಾಂಕ್ ಗಳಲ್ಲಿ ನಿಮಗೆ ಎಫ್ ಡಿ ಸೌಲಭ್ಯವಿದೆ. ಹೆಚ್ಚು ಬಡ್ಡಿ ಸಿಗುವ ಬ್ಯಾಂಕ್ ಗಳಲ್ಲಿ ನೀವು ಎಫ್ ಡಿ ಮಾಡಿದ್ರೆ ಲಾಭ ಹೆಚ್ಚು. ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳ ಮೂಲಕ ಎಸ್‌ಬಿಐ ಸ್ಥಿರ ಠೇವಣಿ ಖಾತೆಯನ್ನು ತೆರೆಯಬಹುದು.
ಭಾರತದ ಈ ಫ್ಯಾಕ್ಟರಿಯಿಂದ ಯುರೋಪ್ ದೇಶಗಳಿಗೆ ಪೂರೈಕೆ ಆಗಲಿವೆ 2000 ಮಷೀನ್ ಗನ್
ಎಸ್ ಬಿಐ ವೈಯಕ್ತಿಕ ಬ್ಯಾಂಕಿಂಗ್ ಪೋರ್ಟಲ್ (Banking Portal) ತೆರೆದು, ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಸಹಾಯದಿಂದ ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಮಾಡಿ. ಠೇವಣಿ ಯೋಜನೆ ಆಯ್ಕೆಯನ್ನು ಆರಿಸಿ, ನಂತರ ಫಿಕ್ಸೆಡ್ ಡೆಪಾಸಿಟ್ ಆಯ್ಕೆಯನ್ನು ಆರಿಸಬೇಕು. ಅಲ್ಲಿ, ಇ-ಫಿಕ್ಸೆಡ್ ಡೆಪಾಸಿಟ್ ಆಯ್ಕೆಯನ್ನು ಆರಿಸಿ. ಸ್ಥಿರ ಠೇವಣಿ ಪ್ರಕಾರವನ್ನು ಆಯ್ಕೆ ಮಾಡಿ ನಂತ್ರ ಎಲ್ಲ ಮಾಹಿತಿ ಭರ್ತಿ ಮಾಡಿ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಎಫ್ ಡಿ ತೆರೆಯಬೇಕಾಗುತ್ತದೆ. ಎಲ್ಲ ದಾಖಲೆಗಳೊಂದಿಗೆ ನೀವು ಬ್ಯಾಂಕ್ ಗೆ ಭೇಟಿ ನೀಡಿ ಅಲ್ಲಿಯೂ ಎಫ್ ಡಿ ತೆರೆಯಬಹುದು.