ಶೀಘ್ರದಲ್ಲೇ 20 ರೂ. ನಾಣ್ಯ ಮಾರುಕಟ್ಟೆಗೆ ಬಿಡುಗಡೆ| ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತವಾಗಿ ಅಧಿಸೂಚನೆ|1 ರಿಂದ 10 ರೂ. ಗಳ ಎಲ್ಲಾ ನಾಣ್ಯಗಳ ವಿನ್ಯಾಸವನ್ನು ಬದಲಿಸಲು ಚಿಂತನೆ| ಅಷ್ಟಭುಜಾಕೃತಿಯ 20 ರೂ. ನಾಣ್ಯಗಳು| ದೃಷ್ಟಿಹೀನರು ಕೂಡ ಸುಲಭವಾಗಿ ಗುರುತಿಸಲು ಸಾಧ್ಯ|

ನವದೆಹಲಿ(ಮಾ.07): ಶೀಘ್ರದಲ್ಲೇ 20 ರೂ. ಮುಖಬೆಲೆಯ ನಾಣ್ಯಗಳು ಚಲಾವಣೆಗೆ ಬರಲಿವೆ. ಈ ಕುರಿತು ಹಣಕಾಸು ಸಚಿವಾಲಯ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದು. 1, 2, 5, 10 ರೂ. ಹೊಸ ನಾಣ್ಯಗಳ ಜೊತೆ 20 ರೂ. ಮುಖಬೆಲೆಯ ಹೊಸ ನಾಣ್ಯಗಳು ಕೂಡ ಮುದ್ರಣವಾಗಲಿವೆ ಎಂದು ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ 20 ರೂ. ಹೊಸ ನಾಣ್ಯದ ಜೊತೆ 1 ರಿಂದ 10 ರೂ. ಗಳ ಎಲ್ಲಾ ನಾಣ್ಯಗಳ ವಿನ್ಯಾಸವನ್ನು ಬದಲಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. 20 ರೂ. ನಾಣ್ಯಗಳು ಅಷ್ಟಭುಜಾಕೃತಿಯದ್ದಾಗಿರಲಿದ್ದು, ದೃಷ್ಟಿಹೀನರು ಕೂಡ ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Scroll to load tweet…

ಮಾರ್ಚ್ 2018 ರವರೆಗೆ, ಭಾರತೀಯ ಮಾರುಕಟ್ಟೆಯಲ್ಲಿ ನಾಣ್ಯಗಳು 25,600 ಕೋಟಿ ರೂ. ಮೊತ್ತದ ನಾಣ್ಯಗಳು ಚಲಾವಣೆಯಲ್ಲಿದ್ದು, ಮಾರ್ಚ್ 2019 ರೊಳಗೆ 26,000 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ನಾಣ್ಯದ ಆಕಾರ ಮತ್ತು ಗಾತ್ರದ ವಿನ್ಯಾಸದ ಬಗ್ಗೆ ಭಾರತೀಯ ಸರ್ಕಾರಕ್ಕೆ ಸಂಬಂಧಿಸಿದ ತಜ್ಞರಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತದೆ. ನಂತರ ವಿನ್ಯಾಸವನ್ನು ಅಂತಿಮಗೊಳಿಸಲಾಗುತ್ತದೆ.